ಪ್ರಧಾನಿ ಮೋದಿ ಆಹಾರ ಪದ್ದತಿ ಹೇಗಿದೆ ಗೊತ್ತಾ? ಬಾಣಸಿಗ ಸಂಜೀವ್ ಕಪೂರ್ ಹೇಳೋದೇನು?

ಪ್ರಧಾನಿ ಮೋದಿ ಸಂಜೀವ್ ಕಪೂರ್ ರೆಸಿಪಿಗೆ ಫಿದಾ ಆಗಿದ್ದಾರೆ. ಅಬುಧಾಬಿಗೆ ಭೇಟಿ ನೀಡಿದ ವೇಳೆ ಪ್ರಧಾನಿ ಮೋದಿ ಅವರು ಸೆಲೆಬ್ರಿಟಿ ಬಾಣಸಿಗ ಸಂಜೀವ್ ಕಪೂರ್ ಅವರ ಕೈರುಚಿಯನ್ನು ಕೊಂಡಾಡಿದ್ದಾರೆ. ಇಲ್ಲಿ ಸಂಜೀವ್​​​​ ಕಪೂರ್​​ ಅವರು ಪ್ರಧಾನಿ ಮೋದಿ ಅವರು ಆಹಾರ ಪದ್ದತಿಯ ಬಗ್ಗೆಯೂ ಹೇಳಿದ್ದಾರೆ. ಮೋದಿ ಅವರ ಆಹಾರ ಪದ್ಧತಿ ಹೇಗಿದೆ. ಸಂಜೀವ್​​ ಅವರು ಪ್ರಧಾನಿ ಮೋದಿಗೆ ಅವರಿಗೆ ವಿಶೇಷವಾಗಿ ಏನೆಲ್ಲ ಭಕ್ಷ್ಯ ಮಾಡಿಕೊಟ್ಟಿದ್ದಾರೆ. ಇಲ್ಲಿದೆ ನೋಡಿ

ಪ್ರಧಾನಿ ಮೋದಿ ಆಹಾರ ಪದ್ದತಿ ಹೇಗಿದೆ ಗೊತ್ತಾ? ಬಾಣಸಿಗ ಸಂಜೀವ್ ಕಪೂರ್ ಹೇಳೋದೇನು?
ಸಂಜೀವ ಕಪೂರ್​​ ಹಾಗೂ ಪ್ರಧಾನಿ ಮೋದಿ
Image Credit source: instagram
Updated By: ಅಕ್ಷಯ್​ ಪಲ್ಲಮಜಲು​​

Updated on: May 01, 2025 | 11:51 AM

ಸೆಲೆಬ್ರಿಟಿ ಬಾಣಸಿಗ ಸಂಜೀವ್ ಕಪೂರ್ (Sanjeev Kapoor) ಅವರು ಅನೇಕ ಟಿವಿ ಶೋಗಳಲ್ಲಿ ಹೆಚ್ಚಿನ ಪ್ರಶಂಸೆಯನ್ನು ಪಡೆದ ಬಾಣಸಿಗ, ಅವರು ಇತ್ತೀಚಗೆ ಅಬುಧಾಬಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಪ್ರಧಾನಿ ಮೋದಿ ಅವರು ಕೂಡ ಬಂದಿದ್ದರು. ಈ ವೇಳೆ ಔತಣಕೂಟಕ್ಕೆ ಭಾರತದ ಸೆಲೆಬ್ರಿಟಿ ಬಾಣಸಿಗ ಸಂಜೀವ್ ಕಪೂರ್ ಅವರೇ ವಿಶೇಷ ಭಕ್ಷ್ಯಗಳನ್ನು ತಯಾರಿಸಿದ್ದು, ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಬಗ್ಗೆ ಅವರು Mashable India ಜೊತೆಗಿನ ಸಂದರ್ಶನದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಅಬುಧಾಬಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸಂಪ್ರದಾಯ ಹಾಗೂ ಸ್ಥಳೀಯ ಆಹಾರಗಳನ್ನು ತುಂಬಾ ಎಚ್ಚರಿಕೆಯಿಂದ ತಯಾರಿಸಿದೆ. ಅಲ್ಲಿ ಎಲ್ಲವೂ ಸಸ್ಯಹಾರಿ ಆಹಾರಗಳು, ಬೆಳಿಗ್ಗಿನ ಉಪಹಾರದಿಂದ ಹಿಡಿದು, ಮಧ್ಯಾಹ್ನದ ಊಟದ ವರೆಗೂ ಎಮಿರಾಟಿ ಭಕ್ಷ್ಯಗಳನ್ನು ಬಡಿಸಲಾಗಿತ್ತು. ಪ್ರಧಾನಿ ಮೋದಿ ಅವರು ಅವರ ಅಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಒಂದು ಸ್ಥಳದ ಸಂಸ್ಕೃತಿಯನ್ನು ಅರ್ಥಮಾಡಿಕೊಂಡಿದ್ದೀರಾ. ಇದು ಒಬ್ಬ ಬಾಣಸಿಗನ ಅರ್ಹತೆ ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಇದನ್ನೂ ಓದಿ
ಪ್ರೇಮ ವಿವಾಹ ಅಥವಾ ಕೋರ್ಟ್‌ ಮ್ಯಾರೇಜ್‌ ಆಗಲು ಈ ದಾಖಲೆಗಳು ಬೇಕೇ ಬೇಕು
ಪರಶುರಾಮರ ಬಗೆಗಿನ ಆಸಕ್ತಿದಾಯಕ ಕಥೆಗಳು
ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಉದ್ದೇಶವೇನು?
ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಇದರ ಜತೆಗೆ ಸಂಜೀವ್ ಕಪೂರ್ ಪ್ರಧಾನಿ ಮೋದಿ ಅವರು ಆಹಾರ ಪದ್ದತಿಯ ಬಗ್ಗೆಯೂ ಹೇಳಿದ್ದಾರೆ. ಅವರ ಸರಳತೆ ಮತ್ತು ಆಹಾರದ ಬಗ್ಗೆ ಅವರಿಗಿರುವ ಗೌರವದ ಬಗ್ಗೆ ತಿಳಿಸಿದ್ದಾರೆ. ನಾನು ಅವರಿಗೆ ಫುಲ್ ಮೆಡೇಮ್ಸ್ ಅಂದರೆ ಅದನ್ನು ಫಾವಾ ಬೀನ್ಸ್‌ನಿಂದ ತಯಾರಿಸಿದ ಮಧ್ಯಪ್ರಾಚ್ಯ ಖಾದ್ಯ ಆಗಿದೆ. ಅದನ್ನು ಬಡಿಸಿದೆ. ಅದರ ನೆನಪು ಇಂದಿಗೂ ಇದೆ. ಈ ಆಹಾರದ ಜತೆಗೆ ಈರುಳ್ಳಿ, ಟೊಮೆಟೊ ಕೂಡ ಸೇರಿಸಿ, ನನ್ನನ್ನೂ ನೋಡಿ ನಕ್ಕ ಹೇಳಿದರು, ‘ಸಂಜೀವ್ ಇದು ನಮ್ಮ ಪಾವ್ ಭಾಜಿನಂತೆಯೇ ಇದೆ ಅಲ್ವಾ’ ಎಂದು ಹೇಳಿದರು. ಇದರ ಜತೆಗೆ ಖಿಚ್ಡಿ, ಪರಾಠಾ, ಥೆಪ್ಲಾಸ್ ಕೂಡ ಸೇವನೆ ಮಾಡಿದ್ದಾರೆ.

ಇದನ್ನೂ ಓದಿ : ರೆಡ್ ವೈನ್ ಕುಡಿಯಬೇಕಾಗಿಲ್ಲ, ಮುಖಕ್ಕೆ ಹಚ್ಚಿದರೆ ಸಾಕು ಈ ಸಮಸ್ಯೆ ಬರಲ್ಲ

ಒಂದು ದೇಶದ ಅಥವಾ ಸಂಪ್ರದಾಯದ ಬಗ್ಗೆ ಅಲ್ಲಿನ ಆಹಾರ ಕ್ರಮ ಎತ್ತಿ ಹಿಡಿಯುತ್ತದೆ. ಊಟ ಎನ್ನುವುದು ಕೇವಲ ಪದಾರ್ಥಗಳಿಗೆ ಮಾತ್ರವಲ್ಲದೆ, ಹೆಚ್ಚಿನ ವಿಚಾರಗಳನ್ನು ಹೇಳುತ್ತದೆ. ಅವು ಹವಾಮಾನ, ಕೃಷಿ ಮಾದರಿಗಳು, ಧಾರ್ಮಿಕ ನಂಬಿಕೆಗಳು, ಸಾಮಾಜಿಕ ಪದ್ಧತಿಗಳು ಮತ್ತು ಐತಿಹಾಸಿಕ ವ್ಯಾಪಾರ ಮಾರ್ಗಗಳನ್ನು ಸಹ ಪ್ರತಿಬಿಂಬಿಸುತ್ತವೆ.

ಜೀವನ ಶೈಲಿಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 am, Thu, 1 May 25