Valentine’s Day 2022 : ವ್ಯಾಲೆಂಟೈನ್ಸ್‌ ಡೇ ಇತಿಹಾಸ ಹೇಗಿದೆ ಗೊತ್ತಾ? “ಲುಪರ್ಕಾಲಿಯಾ” ಹಬ್ಬವೇ ವ್ಯಾಲೆಂಟೈನ್ಸ್‌ ಡೇ

Valentine's Day 2022 : ವ್ಯಾಲೆಂಟೈನ್ಸ್‌ ನ್ನು ರೋಮನ್ ಹಬ್ಬವಾದ "ಲುಪರ್ಕಾಲಿಯಾ"  ಎಂದು ಹೇಳಲಾಗಿದೆ. ಲುಪರ್ಕಾಲಿಯಾ ಹಬ್ಬವನ್ನು  ಧಾರ್ಮಿಕವನ್ನಾಗಿ ಚರ್ಚ್‌ ಈ ದಿನವನ್ನು ವ್ಯಾಲೆಂಟೈನ್ಸ್‌ ಎಂದು  ಆಚರಿಸಲಾಯಿತು ಎಂಬ ನಂಬಿಕೆ. ಈ ಹಬ್ಬವನ್ನು ಕೃಷಿಯ ದೇವರು ಫೌನಸ್ ಮತ್ತು ರೋಮ್‌ನ ಸ್ಥಾಪಕರಾದ ರೊಮುಲಸ್ ಮತ್ತು ರೆಮುಸ್‌ಗೆ ನೆನಪಿಗಾಗಿ ಮಾಡಲಾಗಿದೆ. ಆಚರಣೆಗಳ ಸಮಯದಲ್ಲಿ, ಪುರುಷರು ಮತ್ತು ಮಹಿಳೆಯರು ಲಾಟರಿ ವ್ಯವಸ್ಥೆಯನ್ನು ಆಧರಿಸಿ ಜೋಡಿಯಾಗಿದ್ದರು ಮತ್ತು ಅವರಲ್ಲಿ ಹೆಚ್ಚಿನವರು  ಮದುವೆ ಕೂಡ ಆಗುತ್ತಿದ್ದರು. ಐದನೇ ಶತಮಾನದ ಕೊನೆಯಲ್ಲಿ, ಪೋಪ್ ಗೆಲಾಸಿಯಸ್ I ಸಂತ ವ್ಯಾಲೆಂಟೈನ್ ಅನ್ನು ಆಚರಿಸಲು ಲುಪರ್ಕಾಲಿಯಾ ಆಚರಣೆಯ ಸಮಯವನ್ನು ನಿರ್ಧರಿಸಿದರು. ನಂತರದಲ್ಲಿ ಇದನ್ನು ಪ್ರೇಮಿಗಳ ದಿನವಾಗಿ ಪರಿವರ್ತನೆಗೊಂಡಿತು 

Valentine's Day 2022 : ವ್ಯಾಲೆಂಟೈನ್ಸ್‌ ಡೇ ಇತಿಹಾಸ ಹೇಗಿದೆ ಗೊತ್ತಾ? ಲುಪರ್ಕಾಲಿಯಾ ಹಬ್ಬವೇ ವ್ಯಾಲೆಂಟೈನ್ಸ್‌ ಡೇ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 13, 2022 | 12:22 PM

ಪ್ರೀತಿಯ ದಿನವನ್ನು ಆದ್ಭುತವಾಗಿ ಮತ್ತು ಸಂಭ್ರಮದಿಂದ ನಾಳೆ ಎಲ್ಲ ಪ್ರೇಮಿಗಳು ಆಚರಣೆ ಮಾಡುತ್ತಾರೆ. ಈ ಕಾಲವನ್ನು ಪ್ರೇಮಿಗಳ ಪರ್ವ ಕಾಲ ಎನ್ನಬಹುದು. ಪ್ರೇಮಿಗಳ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಪ್ರೇಮಿಗಳಿಗೆ ನಾಳೆ ಒಂದು ಅತ್ಯಂತ ಪವಿತ್ರಕಾಲ ಎನ್ನಬಹುದು. ಪ್ರೇಮಿಗಳು ತಮ್ಮ ಇಷ್ಟಕಾಮ್ಯಗಳನ್ನು ವ್ಯಕ್ತಪಡಿಸಿದ ನಂತರ ಅವರಿಗೊಂದು ಮುಕ್ತವಾಗಿ ಮಾತನಾಡಲು ಮತ್ತು ಅದನ್ನು ವೈಭವಯುತವಾಗಿ ಆಚರಣೆ ಮಾಡಲು ಈ ದಿನವನ್ನು ನಿರ್ಧಾರ ಮಾಡಲಾಗಿದ. ಪ್ರೇಮಿಗಳ ದಿನಕ್ಕೆ ಒಂದು ಇತಿಹಾಸ ಇದೆ. ಅದು ವಿದೇಶದಲ್ಲೂ ಪ್ರಾರಂಭವಾದರೂ, ಪವಿತ್ರ ಪ್ರೀತಿ ಒಂದು ಅದ್ಭುತವಾದ ವೇದಿಕೆಯನ್ನು ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಒಂದು ಪ್ರೀತಿ ವೇದಿಕೆಯನ್ನು ಸೃಷ್ಟಿ ಮಾಡಿಕೊಟ್ಟಿದೆ. ಅದಕ್ಕಾಗಿ ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಮತ್ತು ವೈಭವಯುತವಾಗಿ ಆಚರಣೆ ಮಾಡುತ್ತಾರೆ. ಪ್ರೀತಿಯೆಂಬುದು ಸುಖ ಕಷ್ಟಗಳ ತಾಣವಾಗಬೇಕೆ ಹೊರತು ಪ್ರೀತಿ ಎಂಬ ಬಲೆಯಲ್ಲಿ ಸಿಕ್ಕಿಕೊಂಡು ವಿಲವಿಲ ಎಂದು ಒದ್ದಾಡುವ ಮೀನಿನಂತೆ ಆಗಬಾರದು ಎಂಬುದು ಪ್ರೀತಿಯ ಸಾರಂಶ, ಅದಕ್ಕಾಗಿ ಪ್ರೀತಿ ಎಂಬು ಮಾಯಾ ಅದರಲ್ಲಿ ಯಶಸ್ಸು ಕಂಡವರು ಇದ್ದರೆ ಸೋಲು ಕಂಡವರು ಇದ್ದರೆ. ಅದಕ್ಕಾಗಿ ಪ್ರೀತಿ ಮಾಡುವಾಗ ಎಚ್ಚರಿಕೆ ಮತ್ತು ದೃಢ ಮನಸ್ಸಿನಿಂದ ಮಾಡಬೇಕು ಎನ್ನುವುದು. 

ಪ್ರೇಮಿಗಳ ದಿನದ ಇತಿಹಾಸ 

ಫೆಬ್ರವರಿ 14, ಸಾಮಾನ್ಯವಾಗಿ ವ್ಯಾಲೆಂಟೈನ್ಸ್ ಡೇ ಎಂದು ಕರೆಯತ್ತಾರೆ.  ಪ್ರೀತಿ ಎನ್ನುವುದು ಶಾಂತಿ ಮತ್ತು ವಾತ್ಸಲ್ಯದ ಸಂಕೇತ ಅದಕ್ಕಾಗಿ ಕೆಂಪು ಮತ್ತು ಬಿಳಿ, ಬಣ್ಣಗಳು ಪ್ರೀತಿ, ವಾತ್ಸಲ್ಯದ ಭಾವನೆಯನ್ನು ಪ್ರತಿಧ್ವನಿಸುತ್ತವೆ.  ದಂತಕಥೆಯ ಪ್ರಕಾರ, 270 AD ಯಲ್ಲಿ ಫೆಬ್ರವರಿ ಮಧ್ಯದಲ್ಲಿ ನಿಧನರಾದ ಸೇಂಟ್ ವ್ಯಾಲೆಂಟೈನ್ ಅವರ ಮರಣ ವಾರ್ಷಿಕೋತ್ಸವವನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಸೇಂಟ್ ವ್ಯಾಲೆಂಟೈನ್ ಒಬ್ಬ ಪಾದ್ರಿಯಾಗಿದ್ದು, ಅವರು ಚಕ್ರವರ್ತಿಗಳ ಆದೇಶಗಳನ್ನು ಧಿಕ್ಕರಿಸಿದರು ಮತ್ತು ಯುದ್ಧದಿಂದ ಗಂಡಂದಿರನ್ನು ರಕ್ಷಿಸಲು ಒಂದು ಹುಡುಗಿಯನ್ನು ರಹಸ್ಯವಾಗಿ ವಿವಾಹವಾದರು. ಈವಿಚಾರ ತಿಳಿದು ಸೇಂಟ್ ವ್ಯಾಲೆಂಟೈನ್ ನ್ನು  ಚಕ್ರವರ್ತಿ ಕ್ಲಾಡಿಯಸ್ II ಗೋಥಿಕಸ್ ಶಿರಚ್ಛೇದನ ಮಾಡಿದನೆಂದು ಇತಿಹಾಸ ಹೇಳುತ್ತಾದೆ.

ವ್ಯಾಲೆಂಟೈನ್ಸ್‌ ನ್ನು ರೋಮನ್ ಹಬ್ಬವಾದ “ಲುಪರ್ಕಾಲಿಯಾ”  ಎಂದು ಹೇಳಲಾಗಿದೆ. ಲುಪರ್ಕಾಲಿಯಾ ಹಬ್ಬವನ್ನು  ಧಾರ್ಮಿಕವನ್ನಾಗಿ ಚರ್ಚ್‌ ಈ ದಿನವನ್ನು ವ್ಯಾಲೆಂಟೈನ್ಸ್‌ ಎಂದು  ಆಚರಿಸಲಾಯಿತು ಎಂಬ ನಂಬಿಕೆ. ಈ ಹಬ್ಬವನ್ನು ಕೃಷಿಯ ದೇವರು ಫೌನಸ್ ಮತ್ತು ರೋಮ್‌ನ ಸ್ಥಾಪಕರಾದ ರೊಮುಲಸ್ ಮತ್ತು ರೆಮುಸ್‌ಗೆ ನೆನಪಿಗಾಗಿ ಮಾಡಲಾಗಿದೆ. ಆಚರಣೆಗಳ ಸಮಯದಲ್ಲಿ, ಪುರುಷರು ಮತ್ತು ಮಹಿಳೆಯರು ಲಾಟರಿ ವ್ಯವಸ್ಥೆಯನ್ನು ಆಧರಿಸಿ ಜೋಡಿಯಾಗಿದ್ದರು ಮತ್ತು ಅವರಲ್ಲಿ ಹೆಚ್ಚಿನವರು  ಮದುವೆ ಕೂಡ ಆಗುತ್ತಿದ್ದರು. ಐದನೇ ಶತಮಾನದ ಕೊನೆಯಲ್ಲಿ, ಪೋಪ್ ಗೆಲಾಸಿಯಸ್ I ಸಂತ ವ್ಯಾಲೆಂಟೈನ್ ಅನ್ನು ಆಚರಿಸಲು ಲುಪರ್ಕಾಲಿಯಾ ಆಚರಣೆಯ ಸಮಯವನ್ನು ನಿರ್ಧರಿಸಿದರು. ನಂತರದಲ್ಲಿ ಇದನ್ನು ಪ್ರೇಮಿಗಳ ದಿನವಾಗಿ ಪರಿವರ್ತನೆಗೊಂಡಿತು

ವ್ಯಾಲೆಂಟೈನ್ಸ್‌ ನಂತರದಲ್ಲಿ ವಿಶ್ವವನ್ನು ಆವರಿಸಿತ್ತು,  ಭಾರತಕ್ಕೂ ಈ ಸಂಸ್ಕೃತಿ ಹಬ್ಬಿಕೊಂಡಿತು. ಇಲ್ಲಿಂದ ಪ್ರಾರಂಭವಾದ ವ್ಯಾಲೆಂಟೈನ್ಸ್‌ ಡೇ ಇಂದು ಜಗತ್ತಿನ ಅನೇಕ ಕಡೆ ಪ್ರೇಮಿಗಳಿಗೆ ಅದ್ಭುತವಾಗಿ ಆಚರಣೆಯನ್ನು ತಮ್ಮ ಅನುಕೂಲಕ್ಕೆ ಅನುಸರವಾಗಿ ಆಚರಣೆ ಮಾಡಲಾಯಿತು. ವ್ಯಾಲೆಂಟೈನ್ಸ್‌ ಡೇ ಮೊದಲು 8 ಡೇಗಳು ಬರುತ್ತದೆ. ಅವುಗಳನ್ನು ಸಮರ್ಪಕವಾಗಿ ಪೂರೈಸಿದ ನಂತರ ಕೊನೆಯಾದಾಗಿ ಪ್ರೀತಿಯ ಯಶಸ್ಸನ್ನು ಸಂಭ್ರಮಿಸುವ ದಿನವನ್ನು ವ್ಯಾಲೆಂಟೈನ್ಸ್‌ ಡೇ ಎನ್ನುತ್ತಾರೆ. ವ್ಯಾಲೆಂಟೈನ್ಸ್‌ ಡೇ ಪರ್ವಕಾಲದಲ್ಲಿ ತಮ್ಮ ಮನಸ್ಸಿಗೆ ಅನಿಸುವ ಗಿಫ್ಟ್ ಗಳನ್ನು ನೀಡುವುದು ಕೂಡ ಒಂದು ಪ್ರೇಮಿಗಳ ಪದ್ಧತಿಯಾಗಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ