ಬೆಳಿಗ್ಗೆ ಎದ್ದ ತಕ್ಷಣ ಮುಖವೆಲ್ಲ ಊದಿಕೊಂಡಂತೆ ಕಾಣುತ್ತ, ಇದಕ್ಕೆ ಏನ್ ಮಾಡೋದು, ಈ ಬಗ್ಗೆ ಬಾಲಿವುಡ್ ನಟಿ ಮಲೈಕಾ ಅರೋರಾ (malaika arora) ಒಂದು ಸಲಹೆ ನೀಡಿದ್ದಾರೆ. ಈ ಸಿನಿಮಾ ನಟ-ನಟಿಯರ ಜೀವನಶೈಲಿಯನ್ನು ಅನೇಕರು ಅನುಸರಿಸುತ್ತಾರೆ.ಏಕೆಂದರೆ ಅವರು ಯಾವುದೇ ರಿಸ್ಕಿ ಕೆಲಸಗಳನ್ನು ಅಥವಾ ಜೀವನಶೈಲಿಗಳನ್ನು ಪಾಲಿಸುವುದಿಲ್ಲ. ಆದರೆ ಇದರಲ್ಲಿ ಕೆಲವೊಂದು ಸಿಂಪಲ್ ಆಗಿರುತ್ತದೆ. ಇನ್ನೂ ಕೆಲವು ದುಬಾರಿಯಾಗಿರುತ್ತದೆ. ಇದರಲ್ಲಿ ನಮಗೆ ಒಪ್ಪಿಗೆ ಆಗುವ ಜೀವನಶೈಲಿಗಳನ್ನು ಮಾತ್ರ ಅನುಸರಿಸುತ್ತದೆ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ಮುಖ ಊದಿಕೊಳ್ಳುವುದು ಸಹಜ, ಆದರೆ ಕೆಲವರಿಗೆ ಆ ಸ್ಥಿತಿ ತುಂಬಾ ಸಮಯದವರೆಗೆ ಇರುತ್ತದೆ. ಹಾಗಾಗಿ ಇದಕ್ಕೆ ಏನ್ ಮಾಡೋದು. ಇದಕ್ಕೆ ಒಂದು ಪರಿಹಾರವೊಂದನ್ನು ನಟಿ ಮಲೈಕಾ ಅರೋರಾ ಅವರು ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಟಿ ಮಲೈಕಾ ಅರೋರಾ ಆಗ್ಗಾಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನೇಕ ಇಂತಹ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.
ಮುಖದ ಊತವನ್ನು ಕಡಿಮೆ ಮಾಡಲು ನಾನು ಅದ್ಭುತವಾದ ಹ್ಯಾಕ್ ಅನ್ನು ಅನುಸರಿಸುತ್ತೇನೆ. ಇದಕ್ಕಾಗಿ ನಿಮಗೆ ಕೇವಲ ಎರಡು ರಬ್ಬರ್ ಬ್ಯಾಂಡ್‌ಗಳು ಬೇಕಾಗುತ್ತವೆ. ಬೆಳಿಗ್ಗೆ ಎದ್ದ ಕೂಡಲೇ ಎರಡು ರಬ್ಬರ್ ಬ್ಯಾಂಡ್‌ಗಳನ್ನು ತೆಗೆದುಕೊಂಡು ನಿಮ್ಮ ಕಿವಿಗೆ ಕಟ್ಟಿಕೊಳ್ಳಿ. ಇದು ನಿಮಗೆ ವಿಚಿತ್ರವೆನಿಸಬಹುದು, ಆದರೆ ಈ ವಿಧಾನವನ್ನು ಅನುಸರಿಸುವುದರಿಂದ ಮುಖವು ಹೆಚ್ಚಿನ ಪ್ರಮಾಣದಲ್ಲಿ ಉಬ್ಬಿಕೊಳ್ಳುತ್ತದೆ ಮತ್ತು ತುಂಬಾ ಬಿಗಿಯಾಗಿ ಕಾಣಲು ಪ್ರಾರಂಭಿಸುತ್ತದೆ. ರಬ್ಬರ್ ಬ್ಯಾಂಡ್ ಅನ್ನು ಬಿಗಿಯಾಗಿ ಧರಿಸಿದಷ್ಟೂ ಅದರ ಪರಿಣಾಮ ಹೆಚ್ಚಾಗುತ್ತದೆ ಏಕೆಂದರೆ ಅದು ನಿಮ್ಮ ಮುಖದ ಚರ್ಮವನ್ನು ಎಳೆದು ಹಿಡಿದಿಟ್ಟುಕೊಳ್ಳುತ್ತದೆ ಎಂದು ನಟಿ ಹೇಳಿದ್ದಾರೆ.
ಇದನ್ನೂ ಓದಿ:ಈ ಚಿತ್ರದಲ್ಲಿ ಒಂದು ಜೋಡಿಯನ್ನು ಆರಿಸಿ, ನೀವು ಎಂತಹ ಲವ್ ಲೈಫ್ ಇಷ್ಟಪಡುವವರು ಎಂದು ತಿಳಿಯಿರಿ
ನಮ್ಮ ಕಿವಿ ಮತ್ತು ಕುತ್ತಿಗೆಯ ಸುತ್ತಲೂ ದುಗ್ಧರಸ ಗ್ರಂಥಿಗಳು ಇರುವುದರಿಂದ ಈ ವಿಧಾನವು ಬಹುಶಃ ಕೆಲಸ ಮಾಡುತ್ತದೆ, ಇದು ದೇಹದಿಂದ ಊತ ಮತ್ತು ಅನಗತ್ಯ ವಿಚಾರಗಳನ್ನು ತೆಗೆದುಹಾಕುತ್ತದೆ. ಕಿವಿಗಳ ಮೇಲೆ ರಬ್ಬರ್ ಬ್ಯಾಂಡ್‌ಗಳನ್ನು ಹಾಕಿದಾಗ, ಅದು ದುಗ್ಧರಸದಲ್ಲಿ ಕೆಟ್ಟ ಅಂಶಗಳನ್ನು ವೇಗವಾಗಿ ತೆಗೆದು ಹಾಕುತ್ತದೆ. ಹಾಗಾಗಿ ಮೇಕಪ್ ಹಚ್ಚುವ ಮೊದಲು, ನೀವು ರಬ್ಬರ್ ಬ್ಯಾಂಡ್ ಧರಿಸಿ ಸ್ವಲ್ಪ ಹೊತ್ತು ಮನೆಯಲ್ಲಿ ಇರಿ. ಸ್ವಲ್ಪ ಸಮಯದ ನಂತರ ನಿಮ್ಮ ಮುಖವು ಕಡಿಮೆ ಊದಿಕೊಂಡಂತೆ ಮತ್ತು ಹೆಚ್ಚು ಆಕಾರದಲ್ಲಿ ಕಾಣಲು ಆರಂಭಿಸುತ್ತಿದೆ ಎಂದು ಅರಿವಿಗೆ ಬರುವುದು ಕಾಣುತ್ತದೆ. ನಂತರ ಆ ರಬ್ಬರ್ನ್ನು ತೆಗೆಯಿರಿ. ಇದರಿಂದ ಮುಖದ ಸ್ನಾಯುಗಳು ಕೂಡ ತುಂಬಾ ಆರೋಗ್ಯವಾಗಿರುತ್ತದೆ. ಜತೆಗೆ ಪ್ರತಿದಿನ ಬೆಳಿಗ್ಗೆ ಈ ರೀತಿ ಮಾಡಿದ್ರೆ ಖಂಡಿತ ಮುಖದ ಸೌಂದರ್ಯದಲ್ಲೂ ಬದಲಾವಣೆ ಆಗುತ್ತದೆ ಎಂದು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ