ನಿಮ್ಮ ಅಡುಗೆಮನೆಯಲ್ಲಿ ಈ ವಸ್ತುಗಳಿದ್ದರೆ ಅವುಗಳನ್ನು ತಕ್ಷಣವೇ ತೆಗೆದುಹಾಕಿ

ಅಡುಗೆಮನೆಯು ಮನೆಯ ಅತ ಮುಖ್ಯ ಭಾಗ ಎಂದು ಹೇಳಿದರೆ ತಪ್ಪಾಗಲಾದರು. ಈ ಅಡುಗೆ ಮನೆ ಸರಿ ಇದ್ದರೆ ಮಾತ್ರ ಕುಟುಂಬದಲ್ಲಿ ಸುಖ, ಸಂತೋಷ ಇರಲು ಸಾಧ್ಯ. ಹಾಗಾಗಿ ಅಡುಗೆ ಕೋಣೆಯನ್ನು ಸ್ವಚ್ಛ ಮತ್ತು ವ್ಯವಸ್ಥಿತವಾಗಿಡುವುದು ತುಂಬಾನೇ ಮುಖ್ಯ. ಹೀಗಿದ್ದರೆ ಮಾತ್ರ ಮನೆಯಲ್ಲಿ ಸಕಾರಾತ್ಮ ಶಕ್ತಿ ಉಳಿಯುತ್ತದೆ. ಇನ್ನೂ ಮನೆ ಮಂದಿಯ ಆರೋಗ್ಯದ ದೃಷ್ಟಿಯಿಂದ ಈ ಕೆಲವೊಂದು ವಸ್ತುಗಳನ್ನು ಅಡುಗೆ ಮನೆಯಿಂದ ತೆಗೆದು ಹಾಕಬೇಕು. ಅವು ಯಾವುವು ಎಂಬ ಪೂರ್ಣ ವಿವರ ಇಲ್ಲಿದೆ.

ನಿಮ್ಮ ಅಡುಗೆಮನೆಯಲ್ಲಿ ಈ ವಸ್ತುಗಳಿದ್ದರೆ ಅವುಗಳನ್ನು ತಕ್ಷಣವೇ ತೆಗೆದುಹಾಕಿ
ಸಾಂದರ್ಭಿಕ ಚಿತ್ರ
Image Credit source: Pexels

Updated on: Nov 17, 2026 | 6:39 PM

ಅಡುಗೆಮನೆಯು (kitchen) ಪ್ರತಿ ಮನೆಯ ಅತ್ಯಂತ ಪ್ರಮುಖ ಭಾಗವಾಗಿದ್ದು, ಇದು ಕುಟುಂಬ ಸದಸ್ಯರ ಆರೋಗ್ಯ ಮತ್ತು ಯೋಗಕ್ಷೇಮದ ಅಡಿಪಾಯ ಎಂದರೆ ತಪ್ಪಾಗಲಾರದು. ಹಾಗಾಗಿ ಅಡುಗೆಮನೆಯನ್ನು ಅಚ್ಚುಕಟ್ಟಾಗಿರುವುದು ತುಂಬಾನೇ ಮುಖ್ಯ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಡುವುದಲ್ಲದೆ, ಮನೆಯವರ ಆರೋಗ್ಯವೂ ಉತ್ತಮವಾಗಿರುತ್ತದೆ. ಅದೇ ಅಡುಗೆಮನೆ ಅವ್ಯವಸ್ತವಾಗಿದ್ದರೆ ಅಥವಾ ಕೆಲವೊಂದು ವಸ್ತುಗಳು ಅಡುಗೆ ಕೋಣೆಯಲ್ಲಿದ್ದರೆ, ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹೌದು ಅಡುಗೆ ಮನೆಯಲ್ಲಿರುವ ಕೆಲವೊಂದು ವಸ್ತುಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀಳುತ್ತವೆ. ಹಾಗಾಗಿ ಅಂತಹ ವಸ್ತುಗಳನ್ನು ತೆಗೆದುಹಾಕುವುದೇ ಉತ್ತಮ. ಹಾಗಿದ್ದರೆ ಯಾವೆಲ್ಲಾ ಉಪಕರಣಗಳನ್ನು ಅಡುಗೆಕೋಣೆಯಲ್ಲಿ ಇಡಬಾರದು ಎಂಬುದನ್ನು ನೋಡೋಣ ಬನ್ನಿ.

ಪ್ಲಾಸ್ಟಿಕ್ ಪ್ರಾತೆಗಳು:

ಅನೇಕರ ಮನೆಗಳಲ್ಲಿ ಪ್ಲಾಸ್ಟಿಕ್‌ ಪಾತ್ರೆಗಳು ಇದ್ದೇ ಇರುತ್ತವೆ. ಆದರೆ ಪ್ಲಾಸ್ಟಿಕ್‌ ಪಾತ್ರೆಗಳನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅವು ಕಾಲಾನಂತರದಲ್ಲಿ ಹಾಳಾಗಬಹುದು, ವಿಶೇಷವಾಗಿ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ BPA ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು. ಇವು ಆರೋಗ್ಯಕ್ಕೆ ಗಂಭೀರ ಹಾನಿಯನ್ನು ಉಂಟುಮಾಡುತ್ತದೆ. ಆದ್ದರಿಂದ, ಚಮಚ, ಡಬ್ಬಗಳಂತಹ ಯಾವುದೇ ಪ್ಲಾಸ್ಟಿಕ್‌ ಪಾತ್ರೆಗಳನ್ನು ಬಳಸದಿರುವುದು ಒಳ್ಳೆಯಲ್ಲ. ಇದರ ಬದಲು ಸ್ಟೇನ್‌ಲೆಸ್ ಸ್ಟೀಲ್, ಸಿಲಿಕೋನ್ ಅಥವಾ ಮಣ್ಣಿನ ಪಾತ್ರೆಗಳನ್ನು ಬಳಸುವುದು ಉತ್ತಮ.

Loading...

ಪ್ಲಾಸ್ಟಿಕ್ ಕಟಿಂಗ್ ಬೋರ್ಡ್:

ಪ್ಲಾಸ್ಟಿಕ್ ಕಟಿಂಗ್ ಬೋರ್ಡ್‌ಗಳು ಕಾಲಾನಂತರದಲ್ಲಿ ಹಾಳಾಗಲು ಪ್ರಾರಂಭಿಸುತ್ತವೆ ಮತ್ತು ಇವು ಮೈಕ್ರೋಪ್ಲಾಸ್ಟಿಕ್‌ಗಳನ್ನು ಆಹಾರಕ್ಕೆ ಬಿಡುಗಡೆ ಮಾಡುತ್ತವೆ. ಆದ್ದರಿಂದ, ಮರದ ಅಥವಾ ಗಾಜು, ಸ್ಟೀಲ್ ಕಟಿಂಗ್ ಬೋರ್ಡ್‌ಗಳನ್ನು ಬಳಸುವುದು ಉತ್ತಮ.

ಗೀರು ಬಿದ್ದ ನಾನ್‌ಸ್ಟಿಕ್ ಪ್ಯಾನ್:

ಗೀರು ಬಿದ್ದ ಅಥವಾ  ಟೆಫ್ಲಾನ್‌ ಲೇಪನವು ಹೋದ ನಾನ್‌ಸ್ಟಿಕ್‌ ಪಾತ್ರೆಗಳನ್ನು ಎಂದಿಗೂ ಬಳಸಬಾರದು. ಈ ನಾನ್‌ಸ್ಟಿಕ್ ಪ್ಯಾನ್‌ಗಳು PFA ಗಳನ್ನು ಹೊಂದಿರಬಹುದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾನಿಗೊಳಗಾದ ನಾನ್‌ಸ್ಟಿಕ್ ಪ್ಯಾನ್‌ಗಳು ನಿಮ್ಮ ಆಹಾರಕ್ಕೆ ವಿಷಕಾರಿ ಕಣಗಳನ್ನು ಬಿಡುಗಡೆ ಮಾಡಬಹುದು. ಅವು ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಸಮಸ್ಯೆಗಳನ್ನು ಉಂಟುಮಾಡಬಹುದು. ಇವುಗಳ ಬದಲು ಸ್ಟೇನ್‌ಲೆಸ್ ಸ್ಟೀಲ್, ಕಬ್ಬಿಣ, ಮಣ್ಣಿನ ಅಥವಾ ಸಂಪೂರ್ಣವಾಗಿ ಸೆರಾಮಿಕ್ ಪಾತ್ರೆಗಳನ್ನು ಬಳಸಬಹುದು.

ಇದನ್ನೂ ಓದಿ: ಈ ಸಿಂಪಲ್‌ ಟಿಪ್ಸ್‌ ಅನುಸರಿಸುವ ಮೂಲಕ ಫ್ರೀಜರ್‌ನಲ್ಲಿ ಅತಿಯಾಗಿ ಐಸ್‌ ಕಟ್ಟಿಕೊಳ್ಳುವುದನ್ನು ತಡೆಯಬಹುದು

ಅಲ್ಯೂಮಿನಿಯಂ ಫಾಯಿಲ್:

ಆಹಾರವನ್ನು ಪ್ಯಾಕ್‌ ಮಾಡಲು ಅಥವಾ ಓವನ್‌ನಲ್ಲಿ ಆಹಾರ ಪದಾರ್ಥಗಳನ್ನು ಬೇಯಿಸಲು ಹೆಚ್ಚಿನವರು ಅಲ್ಯೂಮಿನಿಯಂ ಫಾಯಿಲ್‌ಗಳನ್ನು ಬಳಸುತ್ತಾರೆ, ಆದರೆ ಇದು ಒಳ್ಳೆಯದಲ್ಲ. ಏಕೆಂದರೆ ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇವುಗಳ ಬದಲು ಪೇಪರ್‌ ಫಾಯಿಲ್‌ ಅಥವಾ ಸಿಲಿಕಾನ್‌ ಬೇಕಿಂಗ್‌ ಮ್ಯಾಟ್‌ಗಳನ್ನು ಬಳಸಬಹುದು.

ಬಳಸಿದ ಎಣ್ಣೆ:

ಅಡುಗೆ ಮನೆಯಲ್ಲಿ ಬಳಸಿದ ಹಳೆಯ ಎಣ್ಣೆ, ಅವಧಿ ಮೀರಿದ ಮಸಾಲೆಗಳು ಅಥವಾ ಕಾಳುಗಳು ಇದ್ದರೆ ಅವುಗಳನ್ನು ಎಸೆಯಬೇಕು. ಏಕೆಂದರೆ ಅವು ರೋಗವನ್ನು ಉತ್ತೇಜಿಸುವುದಲ್ಲದೆ, ಮನೆಯಲ್ಲಿ ಕೊಳಕು ಮತ್ತು ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ. ಅಲ್ಲದೆ ಔಷಧಿಗಳನ್ನು ಅಡುಗೆ ಕೋಣೆಯಲ್ಲಿ ಇಡುವುದು ಒಳ್ಳೆಯದಲ್ಲ. ಜೊತೆಗೆ ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us