ಸುಂದರವಾಗಿ ಕಾಣಬೇಕೆಂಬ ಒತ್ತಡದಿಂದ ಜೀವ ಕಳೆದುಕೊಳ್ಳಬೇಡಿ, ಎಚ್ಚರಿಕೆ ನೀಡಿದ ವೈದ್ಯರು

ನಟಿ ಶಫಾಲಿ ಝರಿವಾಲ ಅವರ ಸಾವಿನ ಬಗ್ಗೆ ಅನೇಕ ಚರ್ಚೆಗಳು ನಡೆದಿತ್ತು. ಅವರು ಹೃದಯಾಘಾತದಿಂ ಮರಣ ಹೊಂದಿದ್ದು ಎಂಬ ಸುದ್ದಿಗಳು ಹರಡಿತ್ತು. ಆದರೆ ಇದೀಗ ಪೊಲೀಸರ ತನಿಖೆಯಲ್ಲಿ ಮಹತ್ವದ ವಿಚಾರವೊಂದು ಹೊರ ಬಿದ್ದಿದೆ. ಅವರು ತೆಗೆದುಕೊಂಡ ಒಂದು ಇಂಜೆಕ್ಷನ್ನಿಂದ ಅವರ ಜೀವವೇ ಹೋಯಿತು ಎಂದು ಹೇಳಲಾಗಿದೆ. ತನ್ನ ಸೌಂದರ್ಯ ಹೆಚ್ಚಿಸಬೇಕು ಎಂಬ ಒತ್ತಡದಿಂದ, ತಮ್ಮ ಜೀವವನ್ನು ತಾವೇ ನಾಶ ಮಾಡಿಕೊಂಡಿದ್ದಾರೆ. ಆದರೆ ಇಂತಹ ತಪ್ಪುಗಳನ್ನು ನೀವು ಮಾಡಬೇಡಿ ಎಂದು ಮನೋವೈದ್ಯೆ ಡಾ. ರಿಯಾ ಗುಪ್ತಾ ಹೇಳಿದ್ದಾರೆ. ಈ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಸುಂದರವಾಗಿ ಕಾಣಬೇಕೆಂಬ ಒತ್ತಡದಿಂದ ಜೀವ ಕಳೆದುಕೊಳ್ಳಬೇಡಿ, ಎಚ್ಚರಿಕೆ ನೀಡಿದ ವೈದ್ಯರು
ಸಾಂದರ್ಭಿಕ ಚಿತ್ರ

Updated on: Jun 29, 2025 | 8:23 PM

ನಟಿ ಶಫಾಲಿ ಝರಿವಾಲ (Shefali Jariwala) ಜೂನ್ 27ರಂದು ಸಾವನ್ನಪ್ಪಿದರು. ಈ ಸಾವಿಗೆ ಹಲವು ಕಥೆ ಕಟ್ಟಲಾಗುತ್ತಿದೆ. ನಟಿಯ ಸಾವು ಹೃದಯಾಘಾತದಿಂದ ಸಂಭವಿಸಿದೆಯೆಂದೂ  ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ಕೂಡ ತನಿಖೆಯನ್ನು ನಡೆಸಿದ್ದಾರೆ.  ಇದೀಗ ಪೊಲೀಸರ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯಿಂದ ಅಘಾತದ ಸುದ್ದಿ ತಿಳಿದು ಬಂದಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಈ ನಟಿ ನಿಧನ ಹೊಂದುವ ದಿನದಂದು ಕೆಲವು ಮಾತ್ರೆಗಳನ್ನು ತೆಗೆದುಕೊಂಡಿದ್ದರಂತೆ. ಅದೇ ದಿನ ಮಧ್ಯಾಹ್ನ ಅವರು ಆಂಟಿ ಏಜಿಂಗ್ ಡ್ರಗ್ (ವಯಸ್ಸು ಕಡಿಮೆ ಆಗಿರುವಂತೆ ಕಾಣಲು ನೀಡುವ ಔಷಧ) ಇಂಜೆಕ್ಷನ್ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ. ಹಾಗಾದರೆ ಇಂತಹ ಇಂಜೆಕ್ಷನ್ ತೆಗೆದುಕೊಳ್ಳುವುದು ಎಷ್ಟು ಸರಿ? ಇದಕ್ಕೆ ವೈದ್ಯಕೀಯ ಲೋಕದಲ್ಲಿ ಹೇಳೋದೇನು? ಈ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ಮನೋವೈದ್ಯೆ ಡಾ. ರಿಯಾ ಗುಪ್ತಾ ಅವರು ಎನ್​​ಡಿಟಿವಿ ಜತೆಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಡಾ. ರಿಯಾ ಗುಪ್ತಾ ಅವರು ಹೇಳುವ ಪ್ರಕಾರ, ಸುಂದರವಾಗಿ ಕಾಣಲು ತೆಗೆದುಕೊಳ್ಳುವ ಇಂತಹ ಇಂಜೆಕ್ಷನ್ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಒಳ್ಳೆಯದು, ಒಂದು ವೇಳೆ ಸುಂದರವಾಗಿ ಕಾಣಲು ನಮ್ಮ ಜೀವನಶೈಲಿಯನ್ನು ಹೇಗೆ ಸಮತೋಲನಗೊಳಿಸಬಹುದು ಎಂಬುದನ್ನು ಅವರು ತಿಳಿಸಿದ್ದಾರೆ. ಇಂದಿನ ವೇಗದ ಜೀವನದಲ್ಲಿ, ಸಮತೋಲಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ, ಆದರೆ ಇದಕ್ಕಾಗಿ ಹೆಚ್ಚು ಒತ್ತಡ ತೆಗೆದುಕೊಳ್ಳುವ ಅಗತ್ಯ ಇಲ್ಲ. ಮಾನಸಿಕತೆ ಮತ್ತು ಆಲೋಚನೆಯು ನಮ್ಮ ದೈಹಿಕ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಹತಾಶೆ, ಒತ್ತಡ ಅಥವಾ ಆತಂಕದಲ್ಲಿದ್ದಾಗ, ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನುಗಳು ದೇಹದಲ್ಲಿ ಭಾರವನ್ನು ಹೆಚ್ಚು ಮಾಡುತ್ತದೆ. ಇದು ಹೃದಯ, ಜೀರ್ಣಕ್ರಿಯೆ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ
ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿದರೆ ಏನಾಗುತ್ತೆ ನೋಡಿ
ಸುಂದರವಾಗಿ ಕಾಣಲು ಮೇಕಪ್, ಬಟ್ಟೆ ಮಾತ್ರವಲ್ಲ, ಈ ಅಂಶಗಳು ಮುಖ್ಯ
ಕಣ್ಣಿನ ಹುಬ್ಬುಗಳನ್ನು ಟ್ರಿಮ್ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ
ದಕ್ಷಿಣ ಭಾರತದ ಆಹಾರ ಸೇವಿಸಿ 35 ಕೆಜಿ ತೂಕ ಇಳಿಸಿಕೊಂಡ ಯುವಕ


ನಕಾರಾತ್ಮಕ ಚಿಂತನೆಯು ದೇಹದ ಮೇಲೆ ಹೇಗೆಲ್ಲ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬ ಬಗ್ಗೆ ಇಲ್ಲಿ ಡಾ. ರಿಯಾ ಗುಪ್ತಾ ಹೇಳಿದ್ದಾರೆ. ನಿರಂತರ ನಕಾರಾತ್ಮಕ ಚಿಂತನೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಮತ್ತೊಂದೆಡೆ, ಸಕಾರಾತ್ಮಕ ಚಿಂತನೆ, ಆತ್ಮವಿಶ್ವಾಸ ಮತ್ತು ಭಾವನಾತ್ಮಕ ಸ್ಥಿರತೆಯು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹೀಗಿರುವಾಗ ಸಮಯಕ್ಕೆ ಸರಿಯಾಗಿ ಮಲಗುವುದು, ಪೌಷ್ಟಿಕ ಆಹಾರವನ್ನು ಸೇವಿಸುವುದು, ನಿಯಮಿತ ಲಘು ವ್ಯಾಯಾಮ ಮತ್ತು ಡಿಜಿಟಲ್ ಡಿಟಾಕ್ಸ್‌ನಂತಹ ಸಣ್ಣ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಇನ್ನು ಇದರ ಜತೆಗೆ ಧ್ಯಾನ ಅಥವಾ ನೆಚ್ಚಿನ ಹವ್ಯಾಸವಾಗಿರಲಿ, ನಿಮಗಾಗಿ ಸಮಯ ಮಾಡಿಕೊಳ್ಳಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಿವಿಯೊಳಗೆ ಇಯರ್ ಬಡ್ಸ್ ಹಾಕುವ ಮುನ್ನ ಎಚ್ಚರ, ಈ ಬಡ್ಸ್ ಯಾಕೆ ಬಳಸುತ್ತಾರೆ ಗೊತ್ತಾ?

ಇಂದಿನ ಪೀಳಿಗೆ ಮಾಡುವ ದೊಡ್ಡ ತಪ್ಪು ಇತರರೊಂದಿಗೆ  ತಮ್ಮನ್ನು ತಾವು ಹೋಲಿಕೆ ಮಾಡಿಕೊಳ್ಳುವುದು. ಅವರಂತೆ ನಾವು ಆಗಬೇಕು ಎನ್ನುವುದು. ಇದನ್ನು ಮೊದಲು ಬಿಟ್ಟು ಬೀಡಿ. ಇದು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಗಳನ್ನು ಹಾಳು ಮಾಡುತ್ತದೆ. ಇನ್ನು ಧ್ಯಾನ, ಯೋಗ ಮತ್ತು ಚಿಕಿತ್ಸೆಯಂತಹ ತಂತ್ರಗಳು ಮಾನಸಿಕ ಸ್ಥಿತಿಯನ್ನು ಸುಧಾರಿಸುವ ಮೂಲಕ ದೈಹಿಕ ಆರೋಗ್ಯವನ್ನು ಸುಧಾರಿಸಬಹುದು ಎಂದು ಡಾ. ರಿಯಾ ಗುಪ್ತಾ ಹೇಳಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ