ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಜಾತಿ ಮತಗಳ ಭೇದವನ್ನು ಮರೆತು ಎಲ್ಲರೂ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಹೋಳಿ ಹಬ್ಬ ಸಮೀಪಿಸುತ್ತಿದ್ದಂತೆ ಬಣ್ಣಗಳ ಓಕುಳಿಯಾಟದ ನಡುವೆ ಯಾವ ರೀತಿ ಉಡುಪನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲವು ಎಲ್ಲರಿಗೂ ಇರುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಆಯ್ಕೆಗಳು ಲಭ್ಯವಿರುವುದರಿಂದ ಹೋಳಿಗೆ ಪರಿಪೂರ್ಣವಾದ ಉಡುಪನ್ನು ಆಯ್ಕೆಮಾಡಿಕೊಳ್ಳುವುದು ಕಷ್ಟವೇನಲ್ಲ ಬಿಡಿ. ಹೀಗಾಗಿ ಹೋಳಿ ಹಬ್ಬವನ್ನು ಇನ್ನಷ್ಟು ರಂಗಗಿಸಲು ಬೆಸ್ಟ್ ಔಟ್ ಫಿಟ್ ಗಳ ಬಗ್ಗೆ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.
* ಸೀರೆಗಳು : ಹೆಚ್ಚಿನ ಯುವತಿಯರು ಹಬ್ಬದ ದಿನಗಳಲ್ಲಿ ಸೀರೆ ಉಡುವುದಕ್ಕೆ ಇಷ್ಟಪಡುವುದಿಲ್ಲ. ಅದರಲ್ಲಿಯೂ ಈ ಹೋಳಿ ಹಬ್ಬದಂದು ಓಡಾಡಲು ಕಷ್ಟವಾಗುತ್ತದೆ ಎನ್ನುವುದಕ್ಕೆ ಸೀರೆಯನ್ನು ಎರಡನೇ ಆಯ್ಕಯಾಗಿ ಇಟ್ಟಿರುತಾರೆ. ಸೀರೆಯೆನ್ನುವುದು ಸಾಕಷ್ಟು ಆರಾಮದಾಯಕವಲ್ಲ ಎನ್ನುವ ಭಾವನೆ. ಆದರೆ ಹೋಳಿ ಹಬ್ಬಕ್ಕೆ ಆರ್ಗನ್ಜಾ, ಹತ್ತಿ ಮತ್ತು ಚಿಫೋನ್ ಬಟ್ಟೆಗಳಿಂದ ಕೂಡಿದ ಸೀರೆಗಳನ್ನು ಆರಿಸಿಕೊಂಡು ಭಾರತೀಯ ನಾರಿಯಂತೆ ಕಂಗೊಳಿಸಬಹುದು. ಅದರಲ್ಲಿಯೂ ಈ ಹೋಳಿ ಹಬ್ಬಕ್ಕೆ ಬಿಳಿ ಸೀರೆಯನ್ನು ಆಯ್ಕೆ ಮಾಡಿಕೊಂಡರೆ ಉತ್ತಮ.
* ಶರರಾ ಸೆಟ್ಸ್ : ಶರರಾವು ಹೋಳಿ ಹಬ್ಬಕ್ಕೆ ಹೇಳಿ ಮಾಡಿಸಿದ ಸಾಂಪ್ರದಾಯಿಕ ಉಡುಗೆಗಳಲ್ಲಿ ಒಂದು. ಬಣ್ಣಗಳ ಹಬ್ಬಕ್ಕೆ ಹೊಂದಿಕೊಳ್ಳುವಂತೆ ಬಿಳಿ ಬಣ್ಣದಲ್ಲಿ ಅಥವಾ ಗೋಲ್ಡನ್ ಪ್ರಿಂಟ್‌ಗಳೊಂದಿಗೆ ಆಫ್-ವೈಟ್ ಬಣ್ಣದಲ್ಲಿ ಆಯ್ಕೆ ಮಾಡಿಕೊಂಡರೆ ನಿಮ್ಮ ಸೌಂದರ್ಯವು ಇನ್ನಷ್ಟು ಇಮ್ಮಡಿಯಾಗುತ್ತದೆ.
* ಪಲಾಝೊ ಜೊತೆ ಕುರ್ತಿ : ಆರಾಮದಾಯಕವಾದ ಪಲಾಝೊ ಪ್ಯಾಂಟ್‌ಗಳೊಂದಿಗೆ ಬಿಳಿ ಕುರ್ತಿಯಿದ್ದು ಬಿಟ್ಟರೆ ಬಣ್ಣ ಗಳ ಹಬ್ಬಕ್ಕೆ ಇದಕ್ಕಿಂತ ಅತ್ಯುತ್ತಮ ಎಥ್ನಿಕ್ ವೇರ್ ಮತ್ತೊಂದಿಲ್ಲ. ಈ ಉಡುಗೆಯೂ ನಿಮ್ಮನ್ನು ಸಿಂಪಲ್ ಲುಕ್ ನೊಂದಿಗೆ ಆಕರ್ಷಕವಾಗಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಬಿಳಿ ಬಣ್ಣದ ಉಡುಗೆ ನೀಲಿ ಬಣ್ಣದ ದುಪ್ಪಟ್ಟ ಹಾಗೂ ಶೂ ಧರಿಸಿದರೆ ನೀವು ಮತ್ತಷ್ಟು ಸುಂದರವಾಗಿ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ: ನಿಮ್ಮ ಮಕ್ಕಳನ್ನು ಕರ್ನಾಟಕದ ಈ ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋಗಲೇಬೇಕು
* ಇಂಡೋ-ವೆಸ್ಟರ್ನ್ ಕಾಂಬಿನೇಶನ್ ಉಡುಗೆಗಳು : ಸಾಂಪ್ರದಾಯಿಕತೆ ಹಾಗೂ ಆಧುನಿಕತೆಯ ಉಡುಗೆಯನ್ನು ಮಿಸ್ ಮ್ಯಾಚ್ ಮಾಡಿ ಹಬ್ಬದ ದಿನ ಕಾಣಿಸಿಕೊಳ್ಳುವುದು ಈಗಿನ ಟ್ರೆಂಡ್. ಹೀಗಾಗಿ ನೀಲಿ ಜೀನ್ಸ್‌ನೊಂದಿಗೆ ಅಪ್ಪಟ ಬಿಳಿ ಬಣ್ಣದ ಉದ್ದನೆಯ ಕುರ್ತಿಯನ್ನು ಆಯ್ಕೆ ಮಾಡಿಕೊಂಡರೆ ಆರಾಮದಾಯಕ ಹಾಗೂ ಆತ್ಮ ವಿಶ್ವಾಸದಿಂದ ಕಂಗೊಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
* ಜೀನ್ ಜೊತೆ ಟ್ಯೂನಿಕ್ : ಅಗಲವಾದ ಕಾಲಿನ ಜೀನ್ಸ್‌ನೊಂದಿಗೆ ಸಾಂಪ್ರದಾಯಿಕ ಟ್ಯೂನಿಕ್ ಟಾಪ್ ಧರಿಸಿದರೆ ಹೋಳಿಗೆ ಪರಿಪೂರ್ಣ ಉಡುಪಾಗಿದೆ. ಈ ಉಡುಗೆಗೆ ಹೊಂದುವಂತೆ ಬಾಲಿ ಕಿವಿಯೋಲೆಗಳು ಅಥವಾ ಜುಮ್ಕಾಗಳು ಹಾಗೂ ಬಳೆಗಳನ್ನು ಹಾಕಿದರೆ ಹಬ್ಬದ ದಿನ ನೀವು ಉಳಿದವರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಬಹುದು.
* ಕ್ರಾಪ್ ಟಾಪ್ ಜೊತೆ ಬೋಹೊ ಸ್ಕರ್ಟ್ : ಕೆಲವರು ಸ್ಕರ್ಟ್ ಗಳನ್ನು ಹೆಚ್ಚು ಇಷ್ಟ ಪಟ್ಟು ಧರಿಸುತ್ತಾರೆ. ಅಂತಹವರು ಹೋಳಿ ಹಬ್ಬದ ದಿನ ಸ್ಲೀವ್ ಲೆಸ್ ಕ್ರಾಪ್ ಟಾಪ್ ಇರುವ ಬೋಹೊ ಸ್ಕರ್ಟನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಉಡುಪಿಗೆ ಹೊಂದುವಂತೆ ಕಂದು ಅಥವಾ ಕಪ್ಪು ಬಣ್ಣದ ಶೂವನ್ನು ಧರಿಸುವುದರಿಂದ ನಿಮ್ಮ ನೋಟವನ್ನು ಇನ್ನಷ್ಟು ತೀಕ್ಷಗೊಳಿಸುತ್ತದೆ.
* ಕಲರ್ ಫುಲ್ ದುಪ್ಪಟ್ಟುಗಳನ್ನು ಧರಿಸಿ : ಹೋಳಿ ಹಬ್ಬಕ್ಕೆ ನಿಮ್ಮ ಉಡುಗೆಗೆ ಹೊಂದುವಂತೆ ದುಪ್ಪಟ್ಟಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಮಾದರಿ ಹಾಗೂ ಬಣ್ಣಗಳ ದುಪ್ಪಟ್ಟುಗಳು ಲಭ್ಯವಿದ್ದು, ಹಬ್ಬದ ದಿನ ನಿಮ್ಮ ಅಂದ ಹೆಚ್ಚಿಸುವಲ್ಲಿ ಈ ದುಪ್ಪಟ್ಟು ಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಲರ್ ಫುಲ್ ಬಣ್ಣಗಳ ಶಾಲುಗಳತ್ತ ಗಮನ ಕೊಡಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ