ಕೆಲವರಿಗೆ ತಾವು ಬಳಸುವ ಎಲ್ಲವೂ ಬ್ರ್ಯಾಂಡೆಡ್ ಆಗಿರಬೇಕು ಎಂಬ ಮನೋಭಾವವಿರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ತಾನು ಕುಡಿಯುವ ನೀರು (Drinking Water) ಕೂಡ ಬ್ರ್ಯಾಂಡೆಡ್ ಆಗಬೇಕಂತೆ. ಅದಕ್ಕಾಗಿ ಆತ ಪ್ರತಿ ತಿಂಗಳು ಖರ್ಚು ಮಾಡುವ ಹಣ ಎಷ್ಟು ಎಂದು ಗೊತ್ತಾದರೆ ನಿಮಗೆ ಶಾಕ್ ಆಗುವುದು ಗ್ಯಾರಂಟಿ. ಈ ಕುರಿತು ಟಿಕ್ಟಾಕ್ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ರಿಯಾನ್ ಡಬ್ಸ್ ಎಂಬಾತ ತಾನು ಪ್ರತಿ ತಿಂಗಳು ಕುಡಿಯುವ ನೀರಿಗಾಗಿ 1.5 ಲಕ್ಷ ರೂ. ಖರ್ಚು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ತಾನು ಬಳಸುವ ಬ್ರ್ಯಾಂಡೆಡ್ ವಾಟರ್ ಬಾಟಲ್ಗಳ ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾನೆ.
ನನಗೆ ಶುದ್ಧವಾದ ನೀರು ಬೇಕೇ ಬೇಕು. ನಲ್ಲಿಯಲ್ಲಿ ಅಥವಾ ಫಿಲ್ಟರ್ನಲ್ಲಿ ಹಿಡಿದು ಕುಡಿಯುವ ನೀರು ನನಗೆ ಇಷ್ಟವಾಗುವುದಿಲ್ಲ. ಹೀಗಾಗಿ, ನನ್ನ ಮನೆಗೆ ನೇರವಾಗಿ ತಲುಪುವ ಹೈ ಎಂಡ್ ವಾಟರ್ ಬಾಟಲಿಗಳಿಗಾಗಿ ನಾನು ತಿಂಗಳಿಗೆ 1.5 ಲಕ್ಷ ರೂ. ಖರ್ಚು ಮಾಡುತ್ತೇನೆ ಎಂದಿದ್ದಾರೆ.
‘ನಾನು ಈ ವಾಟರ್ ಬಾಟಲ್ಗಳನ್ನು ಎಲ್ಲಿಡುತ್ತೇನೆ ಎಂದು ನೀವು ಯೋಚಿಸುತ್ತಿರಬಹುದು. ನನ್ನ ಬಳಿ ನಾಲ್ಕು ಫ್ರಿಡ್ಜ್ಗಳಿವೆ. ಅವುಗಳಲ್ಲಿ ನಾನು ವಾಟರ್ ಬಾಟಲ್ಗಳನ್ನು ಇಡುತ್ತೇನೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕೆಂಬ ಕಾರಣಕ್ಕೆ ನಾನು ಪರಿಸರ ಸ್ನೇಹಿಯಾದ ಗಾಜಿನ ವಾಟರ್ ಬಾಟಲ್ಗಳನ್ನು ಉತ್ಪಾದಿಸುವ ಬ್ರ್ಯಾಂಡ್ನಿಂದ ನೀರಿನ ಬಾಟಲ್ಗಳನ್ನು ತರಿಸಿಕೊಳ್ಳುತ್ತೇನೆ’ ಎಂದು ರಯಾನ್ ಹೇಳಿದ್ದಾರೆ.
ಇದಕ್ಕೆ ಹಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ‘ನಮಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ಜಗತ್ತಿನಲ್ಲಿ 3 ಜನರಲ್ಲಿ ಒಬ್ಬರು ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ, ಈ ವ್ಯಕ್ತಿ ಕುಡಿಯುವ ನೀರಿಗಾಗಿ ತಿಂಗಳಿಗೆ 1.5 ಲಕ್ಷ ರೂ. ಖರ್ಚು ಮಾಡುತ್ತಿದ್ದಾನೆ’ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: Viral News: 42 ಲಕ್ಷ ರೂ. ವೆಚ್ಚದಲ್ಲಿ ಕೃಷ್ಣನ ದೇವಸ್ಥಾನ ಕಟ್ಟಿಸಿ ಸಾಮರಸ್ಯ ಮೆರೆದ ಮುಸ್ಲಿಂ ಉದ್ಯಮಿ
Viral News: ಆ ಒಂದು ಫೋಟೋದಿಂದ ಅದೃಷ್ಟವೇ ಬದಲಾಯ್ತು; ಕೇರಳದ ಕೂಲಿ ಕಾರ್ಮಿಕ ಈಗ ಸೂಪರ್ ಮಾಡೆಲ್!