ಕರ್ನಾಟಕದ ಸಾಂಪ್ರದಾಯಿಕ ತಿನಿಸು ಈ ನುಚ್ಚಿನುಂಡೆ, ಮಾಡೋದು ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 16, 2024 | 4:00 PM

ಈಗಿನ ಕಾಲದ ಮಕ್ಕಳಿಗೆ ಫಾಸ್ಟ್ ಫುಡ್ ತಿಂಡಿಗಳ ರುಚಿ ಗೊತ್ತಿದೆಯೇ ಹೊರತು ಹಳೆಕಾಲದ ತಿಂಡಿ ತಿನಿಸಿನ ಪರಿಚಯವೇ ಇಲ್ಲ. ಆದರೆ ನಮ್ಮ ಹಿರಿಯರು ತಯಾರಿಸುತ್ತಿದ್ದ ಆಹಾರ ಪದಾರ್ಥಗಳು ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿತ್ತು. ಅಂತಹ ತಿನಿಸುಗಳಲ್ಲಿ ಹಳೆಯ ಕಾಲದ ರೆಸಿಪಿ ನುಚ್ಚಿನುಂಡೆ ಕೂಡ ಒಂದು. ಪ್ರೊಟೀನ್ ಯುಕ್ತವಾದ ಈ ತಿಂಡಿಯನ್ನು ಮನೆಯಲ್ಲಿರುವ ಈ ಕೆಲವೇ ಕೆಲವು ವಸ್ತುಗಳಿಂದ ಮಾಡಬಹುದು. ಹಾಗಾದ್ರೆ ಈ ರೆಸಿಪಿಯ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

ಕರ್ನಾಟಕದ ಸಾಂಪ್ರದಾಯಿಕ ತಿನಿಸು ಈ ನುಚ್ಚಿನುಂಡೆ, ಮಾಡೋದು ಹೇಗೆ?
ನುಚ್ಚಿನುಂಡೆ
Follow us on

ಬೆಳಗ್ಗೆ ತಿಂಡಿಗೆ ದೋಸೆ, ಇಡ್ಲಿ, ಅವಲಕ್ಕಿ, ಚಿತ್ರಾನ್ನ ತಿಂದು ಬೋರ್ ಆಗಿದ್ದರೆ ಹಳೆಕಾಲದ ಸಾಂಪ್ರಾದಾಯಿಕ ರೆಸಿಪಿ ನುಚ್ಚಿನುಂಡೆಯನ್ನು ಮಾಡಿ ಸವಿಯಬಹುದು. ಹೆಸರು ಕೇಳಿದ ತಕ್ಷಣ ಇದೇನು ಸಿಹಿ ತಿಂಡಿನಾ ಎನ್ನುವ ಪ್ರಶ್ನೆಯೊಂದು ತಲೆಯಲ್ಲಿ ಹುಟ್ಟಬಹುದು. ಆದರೆ ಇದು ಸಿಹಿ ತಿಂಡಿ ಖಂಡಿತವಲ್ಲ. ಪ್ರೊಟೀನ್ ಯುಕ್ತವಾದ ಬೇಳೆಗಳನ್ನು ಬಳಸಿ ಮಾಡುವ ರುಚಿಕರವಾದ ತಿನಿಸಿದು. ಕರ್ನಾಟಕದ ಸಾಂಪ್ರದಾಯಿಕ ಪಾಕವಿಧಾನವಾಗಿದ್ದು ಫಟಾ ಫಟ್ ಎಂದು ಮನೆಯಲ್ಲೇ ಈ ರೆಸಿಪಿಯನ್ನು ಮಾಡಿ ಸವಿಯಬಹುದು.

ನುಚ್ಚಿನುಂಡೆ ಮಾಡಲು ಬೇಕಾದ ಸಾಮಗ್ರಿಗಳು

* ಕಪ್ಪು ಮೆಣಸು

* ಜೀರಿಗೆ

* ಶುಂಠಿ

* ಅರಿಶಿನ ಪುಡಿ

* ಕೊತ್ತಂಬರಿ ಸೊಪ್ಪು

* ಕರಿಬೇವಿನ ಎಲೆಗಳು

* ತುರಿದ ತೆಂಗಿನಕಾಯಿ

* ತೊಗರಿ ಬೇಳೆ

* ಹೆಸರು ಬೇಳೆ

* ಕಡ್ಲೆ ಬೇಳೆ

* ರುಚಿಗೆ ತಕ್ಕಷ್ಟು ಉಪ್ಪು

ನುಚ್ಚಿನುಂಡೆ ಮಾಡುವ ವಿಧಾನ

* ಮೊದಲಿಗೆ ಬೇಳೆಕಾಳುಗಳನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.

* ಹಸಿಮೆಣಸಿನಕಾಯಿ, ಶುಂಠಿ, ಕರಿಮೆಣಸು ಮತ್ತು ಜೀರಿಗೆ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

* ಈಗಾಗಲೇ ನೆನೆಸಿಟ್ಟ ಬೇಳೆಗಳನ್ನೂ ರುಬ್ಬಿಕೊಳ್ಳಿ. ರುಬ್ಬಿಟ್ಟ ಎರಡು ಮಿಶ್ರಣವನ್ನು ಸೇರಿಸಿಕೊಂಡು, ಅದಕ್ಕೆ ಕರಿಬೇವಿನ ಎಲೆಗಳು, ಕೊತ್ತಂಬರಿ ಸೊಪ್ಪು,ತುರಿದ ತೆಂಗಿನಕಾಯಿ, ಅರಿಶಿನ ಪುಡಿ, ಇಂಗು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

* ಇದನ್ನು ಉಂಡೆಗಳನ್ನಾಗಿ ಕಟ್ಟಿ ಇಡ್ಲಿ ಪಾತ್ರೆಯಲ್ಲಿಟ್ಟು, ಮುಚ್ಚಳವನ್ನು ಮುಚ್ಚಿ ಹತ್ತು ನಿಮಿಷಗಳ ಕಾಲ ಬೇಯಿಸಿದರೆ ರುಚಿಕರವಾದ ನುಚ್ಚಿನುಂಡೆ ಸವಿಯಲು ಸಿದ್ಧ.