ಧ್ಯಾನವು ಮಾನಸಿಕ ವ್ಯಾಯಾಮವಾಗಿದ್ದು ಅದು ಗಮನ, ಅರಿವು ಮತ್ತು ವಿಶ್ರಾಂತಿಯನ್ನು ಒಳಗೊಂಡಿರುತ್ತದೆ. ಇದು ಮನಸ್ಸಿಗೆ ವ್ಯಾಯಾಮ. ಇದು ಮನಸ್ಸಿಗೆ ಶಾಂತಿಯನ್ನು ಒದಗಿಸಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಆದರೆ ಧ್ಯಾನವೆಂದರೆ ಒಂದೇ ಸ್ಥಳದಲ್ಲಿ ಕುಳಿತುಕೊಂಡೇ ಮಾಡಬೇಕು ಎಂದೇನೂ ಇಲ್ಲ. ಅದನ್ನು ಮಾಡಲು ಹಲವು ಮಾರ್ಗಗಳಿವೆ. ಧ್ಯಾನವನ್ನು ಫೋಕಸ್ಡ್ ಮೆಡಿಟೇಶನ್, ಆಧ್ಯಾತ್ಮಿಕ ಧ್ಯಾನ, ಗಮನ ಧ್ಯಾನ, ಚಲನೆಯ ಧ್ಯಾನ, ಮಂತ್ರ ಧ್ಯಾನದಂತಹ ವಿಧಾನಗಳಲ್ಲಿಯೂ ಮಾಡಬಹುದು.