- Kannada News Photo gallery Darshan Thoogudeepa leaves to Thailand for Devil movie shooting here is pics
ಮಗನೊಂದಿಗೆ ಥಾಯ್ಲೆಂಡ್ಗೆ ಹೊರಟ ನಟ ದರ್ಶನ್, ಇಲ್ಲಿವೆ ಚಿತ್ರಗಳು
Darshan Thoogudeepa: ನಟ ದರ್ಶನ್ ತೂಗುದೀಪ ‘ಡೆವಿಲ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಥಾಯ್ಲೆಂಡ್ಗೆ ತೆರಳಿದ್ದಾರೆ. ದರ್ಶನ್ ಥಾಯ್ಲೆಂಡ್ಗೆ ತಮ್ಮ ಜೊತೆಗೆ ಪುತ್ರ ವಿನೀಶ್ನನ್ನು ಸಹ ಕರೆದುಕೊಂಡು ಹೋಗಿದ್ದಾರೆ. ದರ್ಶನ್, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಇಲ್ಲಿವೆ ಚಿತ್ರಗಳು.
Updated on: Jul 16, 2025 | 5:50 PM

ನಟ ದರ್ಶನ್, ‘ಡೆವಿಲ್’ ಸಿನಿಮಾದ ಚಿತ್ರೀಕರಣಕ್ಕಾಗಿ ಥಾಯ್ಲೆಂಡ್ಗೆ ತೆರಳಿದ್ದಾರೆ. ವಿದೇಶ ಯಾತ್ರೆಗಾಗಿ ನ್ಯಾಯಾಲಯದಿಂದ ವಿಶೇಷ ಅನುಮತಿಯನ್ನು ನಟ ದರ್ಶನ್ ಪಡೆದುಕೊಂಡಿದ್ದಾರೆ.

ಇಂದು (ಜುಲೈ 16) ಕೆಂಪೇಗೌಡ ವಿಮಾನ ನಿಲ್ದಾಣದಿಂದ ಥಾಯ್ಲೆಂಡ್ ಕಡೆಗೆ ಪ್ರವಾಸ ಬೆಳೆಸಿದ್ದಾರೆ ದರ್ಶನ್. ಅವರ ಜೊತೆಗೆ ಪುತ್ರ ವಿನೀಶ್ ಸಹ ಥಾಯ್ಲೆಂಡ್ಗೆ ಹೋಗಿದ್ದಾರೆ.

ದರ್ಶನ್, ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕೆಲ ಚಿತ್ರಗಳು ಇದೀಗ ವೈರಲ್ ಆಗಿವೆ. ಚಿತ್ರಗಳಲ್ಲಿ ದರ್ಶನ್ ಜೊತೆಗೆ ವಿನೀಶ್ ಸಹ ಇದ್ದಾರೆ. ಜೊತೆಗೆ ನಿರ್ದೇಶಕ ಪ್ರಕಾಶ್ ಸಹ ಇದ್ದಾರೆ.

ದರ್ಶನ್ ಜೊತೆಗೆ ಕೆಲ ಏರ್ಪೋರ್ಟ್ ಸಿಬ್ಬಂದಿ ಚಿತ್ರಗಳನ್ನು ಸಹ ತೆಗೆಸಿಕೊಂಡಿದ್ದಾರೆ. ದರ್ಶನ್ ಸಹ ಯಾವುದೇ ಬಿಗುಮಾನಗಳಿಲ್ಲದೆ ಕೇಳಿದವರಿಗೆ ಚಿತ್ರಗಳನ್ನು ನೀಡಿದ್ದಾರೆ.

ಥಾಯ್ಲೆಂಡ್ನಲ್ಲಿ ಐದು ದಿನಗಳ ಕಾಲ ದರ್ಶನ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಾದ ಬಳಿಕ ಇನ್ನೈದು ದಿನ ವಿಶ್ರಾಂತಿ ಪಡೆದು ಮತ್ತೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

‘ಡೆವಿಲ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಇದಾಗಿದೆ. ಥಾಯ್ಲೆಂಡ್ನಲ್ಲಿ ಐದು ದಿನಗಳ ಚಿತ್ರೀಕರಣ ಮುಗಿದರೆ ‘ಡೆವಿಲ್’ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಂತೆ ಆಗುತ್ತದೆ.




