AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕರ್ನಾಟಕದ ಸ್ಪೆಷಲ್ ಸಾಂಪ್ರದಾಯಿಕ ಸಿಹಿ ತಿನಿಸು ಮಾದ್ಲಿ, ರೆಸಿಪಿ ಮಾಡೋದು ಸುಲಭ

ಉತ್ತರ ಕರ್ನಾಟಕದ ಮಂದಿ ಖಾರ ಪ್ರಿಯರು. ಖಾರವಾದ ಚಟ್ನಿ ಹಾಗೂ ಹಸಿಮೆಣಸನ್ನು ಸವಿದು ತಿನ್ನುವ ಇಲ್ಲಿನ ಜನರನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಆದರೆ ಇಲ್ಲಿ ಕೆಲ ಸಿಹಿ ತಿನಿಸುಗಳು ಭಾರಿ ಫೇಮಸ್ ಆಗಿದೆ. ಅದರಲ್ಲಿ ಒಂದು ಉತ್ತರ ಕರ್ನಾಟಕದ ಸ್ಪೆಷಲ್ ಮಾದಲಿ ಅಥವಾ ಮಾದ್ಲಿ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಈ ವಿಶೇಷ ಸಿಹಿ ತಿಂಡಿಯನ್ನು ಎಲ್ಲರೂ ಮಾಡುತ್ತಾರೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಉತ್ತರ ಕರ್ನಾಟಕದ ಸ್ಪೆಷಲ್ ಸಾಂಪ್ರದಾಯಿಕ ಸಿಹಿ ತಿನಿಸು ಮಾದ್ಲಿ, ರೆಸಿಪಿ ಮಾಡೋದು ಸುಲಭ
ಸಿಹಿ ತಿನಿಸು ಮಾದ್ಲಿ
ಸಾಯಿನಂದಾ
| Edited By: |

Updated on: Aug 01, 2024 | 3:03 PM

Share

ಕರ್ನಾಟಕವೆಂದ ಕೂಡಲೇ ವಿವಿಧ ಆಚಾರ ವಿಚಾರ, ಸಂಪ್ರದಾಯ ಹಾಗೂ ಆಹಾರ ಪದ್ಧತಿವು ನೆನಪಾಗುತ್ತದೆ. ಆದರೆ ಈ ಉತ್ತರ ಕರ್ನಾಟಕವು ತನ್ನ ಭಾಷೆಗಾಗಿ, ಅಡುಗೆಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಉತ್ತರ ಕರ್ನಾಟಕದ ಹೆಸರು ಕೇಳಿದ ತಕ್ಷಣ ಕೇಳ್ಳೋದೆ “ನಿಮ್ಮಲ್ಲಿ ರೊಟ್ಟಿ ಊಟ ಫೇಮಸ್‌ ಅಲ್ವಾ” ಎಂದು ಹೇಳುವುದಿದೆ. ಆದರೆ ಖಡಕ್ ರೊಟ್ಟಿ ಹಾಗೂ ಖಾರವಾದ ಚಟ್ನಿ ಜೊತೆಗೆ ಇಲ್ಲಿ ಕೆಲವು ಸಾಂಪ್ರದಾಯಿಕ ಸಿಹಿ ತಿಂಡಿಗಳು ಫೇಮಸ್. ಅಂತಹ ಖಾದ್ಯಗಳಲ್ಲಿ ಮಾದಲಿ ಅಥವಾ ಮಾದ್ಲಿ ಒಂದು. ಮನೆಯಲ್ಲಿ ಈ ಕೆಲವು ಸಾಮಗ್ರಿಗಳಿದ್ದರೆ ಸುಲಭವಾಗಿ ಮಾದ್ಲಿ ಮಾಡಿ ಸವಿಯಬಹುದು.

ಮಾದ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು

* ಗೋದಿ ಹಿಟ್ಟು

* ಸಣ್ಣ ರವೆ

* ಬೆಲ್ಲ

* ಏಲಕ್ಕಿ

* ಶುಂಠಿ

* ತುರಿದ ಒಣಕೊಬ್ಬರಿ

* ಸ್ವಲ್ಪ ಹುರಿದುಕೊಂಡಿರುವ ಗಸಗಸೆ

* ಸ್ವಲ್ಪ ಪುಟಾಣಿ

ಇದನ್ನೂ ಓದಿ: ಬಾಯಲ್ಲಿಟ್ಟರೆ ಕರಗುವ ರಾಗಿ ಹಲ್ವಾ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ

ಮಾದ್ಲಿ ಮಾಡುವ ವಿಧಾನ

* ಮೊದಲಿಗೆ ಗೋದಿಯ ಹಿಟ್ಟು, ರವೆ ಮತ್ತು ಚಿಟಿಕೆ ಉಪ್ಪು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

* ಹತ್ತು ನಿಮಿಷ ಬಿಟ್ಟು ಈ ಹಿಟ್ಟಿನಿಂದ ಸ್ವಲ್ಪ ದಪ್ಪನೆಯ ಚಪಾತಿ ತಯಾರಿಸಿಕೊಂಡು, ಕೆಂಬಣ್ಣ ಬರುವರೆಗೆ ಬೇಯಿಸಿಕೊಳ್ಳಿ.

* ಬಿಸಿ ಬಿಸಿ ಚಪಾತಿಯನ್ನು ಸಣ್ಣಗೆ ತುಂಡುಗಳಾಗಿ ಮಾಡಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ.

* ಈ ಪುಡಿಗೆ ಬೆಲ್ಲ, ಏಲಕ್ಕಿ, ಶುಂಠಿ, ತುರಿದ ಒಣಕೊಬ್ಬರಿ, ಪುಟಾಣಿ ಹಾಗೂ ಹುರಿದಿಟ್ಟ ಗಸಗಸೆ ಸೇರಿಸಿ ಚೆನ್ನಾಗಿ ಕಲಸಿಕೊಂಡರೆ ಸಿಹಿ ಸಿಹಿಯಾದ ಮಾದ್ಲಿ ಸವಿಯಲು ಸಿದ್ಧ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ