AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dental Anxiety: ದಂತ ವೈದ್ಯರ ಬಳಿ ಹೋಗಲು ಆತಂಕವೇ? ಇಲ್ಲಿದೆ ಸುಲಭ ಮಾರ್ಗ

ನಿಯಮಿತ ಹಲ್ಲಿನ ತಪಾಸಣೆಯು ಬಹಳ ಮುಖ್ಯವಾದವು ಆದರೆ ನಮ್ಮಲ್ಲಿ ಅನೇಕರು ಅದನ್ನು ವಿಳಂಬಗೊಳಿಸುತ್ತಾರೆ ಏಕೆಂದರೆ ಅವರು ದಂತ ವೈದ್ಯರ ಬಳಿ ಹೋಗಲು ಭಯ ಪಡುತ್ತಾರೆ. ಇದರಿಂದ ಅವರು ಅಗತ್ಯವಿರುವ ಹಲ್ಲಿನ ಆರೈಕೆಯನ್ನು ಪಡೆಯಲು ಸಾಧ್ಯವಾಗದಿರಬಹುದು. ಈ ಹಲ್ಲಿನ ಆತಂಕವನ್ನು ಹೋಗಲಾಡಿಸಲು ಕೆಲವು ಸುಲಭ ಮಾರ್ಗಗಳಿವೆ.

Dental Anxiety: ದಂತ ವೈದ್ಯರ ಬಳಿ ಹೋಗಲು ಆತಂಕವೇ?  ಇಲ್ಲಿದೆ  ಸುಲಭ ಮಾರ್ಗ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:May 02, 2023 | 5:05 PM

Share

ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಒಟ್ಟಾರೆ ಆರೋಗ್ಯದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ದಂತವೈದ್ಯರ ಬಳಿ ಹೋಗಿ ಹಲ್ಲಿನ ಆರೋಗ್ಯದ ತಪಾಸಣೆ ಮಾಡುವುದೆಂದರೆ ಅನೇಕ ಜನರು ಭಯ ಪಡುತ್ತಾರೆ. ಈ ಹಲ್ಲಿನ ಆತಂಕ ಅಥವಾ ಫೋಬಿಯಾವನ್ನು ‘ದಂತ ವೈದ್ಯರ ಭಯ’ ಎಂದು ಕರೆಯುತ್ತಾರೆ. ಈ ನಿರ್ದಿಷ್ಟ ಫೋಬಿಯಾ ಹೊಂದಿರುವ ಜನರು ದಂತ ವೈದ್ಯರ ಬಳಿಗೆ ಹೋಗುವುದನ್ನು ಅಥವಾ ದಂತ ವೈದ್ಯರನ್ನು ಭೇಟಿ ಮಾಡುವ ಬಗ್ಗೆ ಯೋಚಿಸಿದಾಗ ಆತಂಕವನ್ನು ಅನುಭವಿಸುತ್ತಾರೆ. ಈ ಆತಂಕವು ಹಲ್ಲಿಗೆ ಅಗತ್ಯವಿರುವ ಆರೈಕೆಯನ್ನು ಪಡೆಯುವಲ್ಲಿ ತಡೆಯಾಗಬಹುದು. ನಿಯಮಿತ ಹಲ್ಲಿನ ತಪಾಸಣೆಯು ಬಹಳ ಮುಖ್ಯವಾದವು ಆದರೆ ನಮ್ಮಲ್ಲಿ ಹಲವರು ಅದನ್ನು ವಿಳಂಬಗೊಳಿಸುತ್ತಾರೆ ಏಕೆಂದರೆ ಅವರು ದಂತ ವೈದ್ಯರ ಬಳಿ ಹೋಗಲು ಭಯ ಪಡುತ್ತಾರೆ. ಬಾಯಿಗೆ ಹಾಕುವ ಡ್ರಿಲ್​​​​ಗಳು ಮತ್ತು ವಿಚಿತ್ರವಾದ ಪೈಪ್​​​​ಗಳ ಶಬ್ದಕ್ಕೆ ಹಾಗೂ ವಿಪರೀತ ನೋವಿನ ಅನುಭವಕ್ಕೆ ಭಯಪಟ್ಟು ಹಲ್ಲಿನ ತಪಾಸಣೆ ಮಾಡಲು ವಿಳಂಬ ಮಾಡುತ್ತಾರೆ. ಇಂತಹ ಹಲ್ಲಿನ ಫೋಬಿಯಾ ಹೊಂದಿರುವ ಜನರು ಹಲ್ಲಿನ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಬಿಡದೆ ಹಲ್ಲಿನ ಆತಂಕವನ್ನು ನಿಭಾಯಿಸಲು ಕೆಲವು ಮಾರ್ಗಗಳನ್ನು ಅನುಸರಿಸುವುದು ಮುಖ್ಯವಾಗದೆ.

ಹಲ್ಲಿನ ಆತಂಕವನ್ನು ನಿಭಾಯಿಸಲು ಸಲಹೆಗಳು:

ಮುಂಬೈನ ಹೌಸ್ ಆಫ್ ಟೂತ್​​ನ ಸಂಸ್ಥಾಪಕರು ಹಾಗೂ ಸೆಲೆಬ್ರಿಟಿ ದಂತವೈದ್ಯರಾದ ಡಾ. ಕ್ಷಮಾ ಚಂದನ್ ಅವರು, ಹಲ್ಲಿನ ಆತಂಕವನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ: ನಿಮ್ಮ ಸಮಸ್ಯೆಗಳನ್ನು ಮತ್ತು ಪ್ರಶ್ನೆಗಳನ್ನು ನಿಮ್ಮ ದಂತ ವೈದ್ಯರಿಗೆ ತಿಳಿಸಲು ನಾಚಿಕೆಪಡಬೇಡಿ. ಮುಕ್ತವಾಗಿ ಸಂವಹನ ನಡೆಸುವ ಮೂಲಕ ಸಮಸ್ಯೆಗಳನ್ನು ಹೇಳಿಕೊಳ್ಳಿ. ನಿಮ್ಮ ಆತಂಕದ ಸಮಸ್ಯೆಗಳು ಮತ್ತು ಕಾಳಜಿಯನ್ನು ತಿಳಿದುಕೊಳ್ಳುವ ಮೂಲಕ ವೈದ್ಯರು ಅವರ ಚಿಕಿತ್ಸಾ ಪ್ರಕ್ರಿಯೆಗಳನ್ನು ಸುಲಭಗೊಳಿಸಬಹುದು.

ವ್ಯಾಕುಲತೆ: ದಂತವೈದ್ಯರು ನಿಮ್ಮ ಹಲ್ಲುಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೀವು ನಿಮ್ಮ ಗಮನವನ್ನು ಬೇರೆಡೆ ಸೆಳೆಯಲು ವ್ಯಾಕುಲತೆಯ ರೂಪವಾದ ಸಂಗೀತವನ್ನು ಆಳಿಸುವುದು, ನೆಟ್ ಫ್ಲಿಕ್ಸ್ ಅಥವಾ ಚಲನಚಿತ್ರವನ್ನು ವೀಕ್ಷಿಸುವುದು ವೀಡಿಯೋ ಗೇಮ್ ಗಳನ್ನು ಆಡಬಹುದು. ಇದರಿಂದ ಚಿಕಿತ್ಸೆಯ ಸಂದರ್ಭದಲ್ಲಿ ಹಲ್ಲಿನ ಆತಂಕವನ್ನು ಕಡಿಮೆ ಮಾಡಬಹುದು. ವೈದ್ಯರ ಬಳಿ ಅನುಮತಿಯನ್ನು ಕೇಳಿ ಈ ಚಿಕಿತ್ಸೆಯ ಸಮಯದಲ್ಲಿ ತಂತ್ರವನ್ನು ಅಳವಡಿಸಿಕೊಳ್ಳಿ.

ಇದನ್ನೂ ಓದಿ: Dental Care: ಈ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಹಲ್ಲುಗಳಿಗೆ ಹಾನಿಯಾಗಬಹುದು ಎಚ್ಚರ

ಸ್ನೇಹಿತರನ್ನು ಜತೆಗೆ ಕರೆತನ್ನಿ: ಸಂಬಂಧಿಕರು ಅಥವಾ ಸ್ನೇಹಿತರನ್ನು ನಿಮ್ಮ ಚಿಕಿತ್ಸೆಯ ಸಮಯದಲ್ಲಿ ಕರೆದುಕೊಂಡು ಹೋಗುವುದರಿಂದ ಅದು ನಿಮ್ಮ ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚಿಕಿತ್ಸೆಯ ಸಮಯದಲ್ಲಿ ನಿಮ್ಮ ಸುತ್ತಲೂ ಸ್ನೇಹಪರ ಮುಖಗಳನ್ನು ನಿವು ನೋಡುತ್ತಿದ್ದರೆ, ನೀವು ಕಡಿಮೆ ಒಂಟಿತನವನ್ನು ಅನುಭವಿಸುತ್ತೀರಿ. ಮತ್ತು ಸ್ನೇಹಿತರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಮೂಲಕ ಆತಂಕವನ್ನು ದೂರಮಾಡಬಹುದು.

ಧ್ಯಾನ ಮತ್ತು ಸ್ನಾಯುಗಳ ವಿಶ್ರಾಂತಿ: ನೀವು ಹಲ್ಲಿನ ಚಿಕಿತ್ಸೆಗೆಂದು ಚಿಕಿತ್ಸಾ ಕೋಣೆಯಲ್ಲಿ ಕುಳಿತಾಗ ನೀವು ಹೆಚ್ಚು ಆತಂಕಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಕಣ್ಣುಮುಚ್ಚಿ ಧ್ಯಾನವನ್ನು ಮಾಡುವ ಮೂಲಕ ಭಯವನ್ನು ಹೋಗಲಾಡಿಸಬಹುದು.

ಪ್ರಜ್ಞಾಪೂರ್ವಕ ನಿದ್ರಾಜನಕ: ತೀವ್ರವಾದ ಹಲ್ಲಿನ ಆತಂಕ ಹೊಂದಿರುವವರಿಗೆ ನಿದ್ರಾಜನಕವು ಅತ್ಯುತ್ತಮ ಆಯ್ಕೆಯಾಗಿದೆ. ನಿದ್ರಾಜನಕವು ರೋಗಿಯನ್ನು ಭಾಗಶಃ ನಿದ್ರಿಸುವುದನ್ನು ಒಳಗೊಂಡಿರುತ್ತದೆ. ಇದರಿಂದ ಹಲ್ಲಿನ ಚಿಕಿತ್ಸೆಯ ಸಮಯದಲ್ಲಿ ಅವರ ಬಾಯಿಯೊಳಗೆ ನಡೆಯುವ ಚಲನೆಗಳು ಅವರ ಅನುಭವಕ್ಕೆ ಬರುವುದಿಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:13 pm, Tue, 2 May 23