ಹೆಣ್ಣು ಮಕ್ಕಳಲ್ಲಿ ಪ್ರತಿ ತಿಂಗಳು ಕಾಡುವ ಸಮಸ್ಯೆಗಳಲ್ಲಿ ಮುಟ್ಟಿನ ಸಮಸ್ಯೆಯೂ ಕೂಡ ಒಂದು. ಸ್ವಾಭಾವಿಕ ಪ್ರಕ್ರಿಯೆಯಾಗಿದ್ದರೂ ಕೂಡ ಮೂರು ದಿನಗಳ ಕಾಲ ನರಕಯಾತನೆಯನ್ನು ಅನುಭವಿಸುತ್ತಾರೆ. ತಿಂಗಳ ಮುಟ್ಟು ಯಾವಾಗ ಆಗುತ್ತದೆ ಎಂದು ತಿಳಿದಿರುತ್ತದೆ. ಆ ಸಮಯದಲ್ಲಿ ಮನೆಯಲ್ಲಿ ಪೂಜೆ ಹಾಗೂ ಶುಭಕಾರ್ಯಗಳಿದ್ದರೆ ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಯಾಗುತ್ತದೆ ಎನ್ನುವ ಕಾರಣಕ್ಕೆ ಅದಕ್ಕಿಂತ ಮುಂಚೆ ಮುಟ್ಟಾಗಲು ಮಾತ್ರೆಗಳತ್ತ ಮೊರೆ ಹೋಗುವವರೇ ಹೆಚ್ಚು. ಆದರೆ ಈ ಮಾತ್ರೆಗಳು ಆರೋಗ್ಯಕ್ಕೆ ಮಾರಕವೆಂದು ತಿಳಿದಿದ್ದರೂ ಸೇವಿಸುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ
* ತಿಂಗಳ ಮುಟ್ಟು ಐದು ದಿನ ಮೊದಲೇ ಆಗಲು ಅರಿಶಿನ ಉತ್ತಮ ಔಷಧಿಯಾಗಿದೆ. ಮುಟ್ಟಿನ ದಿನಾಂಕಕ್ಕಿಂತ ಒಂದು ವಾರ ಮೊದಲು ಕುದಿಯುತ್ತಿರುವ ನೀರಿಗೆ ಒಂದು ಚಿಟಕಿ ಅರಿಶಿನ ಹಾಕಿ ಬೆಳಿಗ್ಗೆ ಹಾಗೂ ರಾತ್ರಿ ಕುಡಿಯುತ್ತ ಬಂದರೆ ಮುಟ್ಟು ಬೇಗನೇ ಆಗುತ್ತದೆ.
* ನಿಮ್ಮ ತಿಂಗಳ ಮುಟ್ಟು ಪ್ರಾರಂಭವಾಗುವ ಕೆಲವು ದಿನಗಳಿಗಿಂತ ಮುಂಚೆ ಕೊತ್ತಂಬರಿ ಬೀಜವನ್ನು ನೀರಿಗೆ ಹಾಕಿ ಕುದಿಸಿ, ದಿನಕ್ಕೆ ಮೂರು ಬಾರಿ ಕುಡಿಯಿರಿ.
* ಮುಟ್ಟಿನ ದಿನಾಂಕಕ್ಕಿಂತ ಹದಿನೈದು ದಿನ ಮುಂಚಿತವಾಗಿ ಬಿಸಿ ನೀರಿಗೆ ಸ್ವಲ್ಪ ಎಳ್ಳನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯುತ್ತಿದ್ದರೆ ಬೇಗ ಮುಟ್ಟಾಗುತ್ತದೆ.
* ಮುಟ್ಟು ಹಿಂದೆ ಬರಲು ಶುಂಠಿ ರಸಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಸೇವಿಸುವುದು ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ: ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ರೆ, ಈ ಆಹಾರಗಳನ್ನು ಅಪ್ಪಿತಪ್ಪಿಯು ಸೇವಿಸಲೇಬೇಡಿ
* ನಿಯಮಿತವಾಗಿ ಪಪ್ಪಾಯಿಯನ್ನು ಸೇವಿಸುವುದರಿಂದಲೂ ಮುಟ್ಟನ್ನು ಮುಂದೆ ಹೋಗುವಂತೆ ಮಾಡಬೇಕು.
* ತಿಂಗಳ ಮುಟ್ಟು ಬೇಗ ಆಗಲು ಮುಟ್ಟಿನ ದಿನಗಳಿಗಿಂತ ಮುಂಚಿತವಾಗಿ ರಾತ್ರಿಯಿಡೀ ಸೋಂಪು ಕಾಳನ್ನು ನೀರಿನಲ್ಲಿ ನೆನೆಸಿಟ್ಟು ಕುದಿಸಿ ಕುಡಿಯುವುದರಿಂದ ಅವಧಿಕ್ಕಿಂತ ಬೇಗನೇ ಮುಟ್ಟಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: