Skin Care : ಮೊಸರಿನಲ್ಲಿದೆ ಸೌಂದರ್ಯದ ಗುಟ್ಟು, ಹೀಗೆ ಬಳಸಿದರೆ ತ್ವಚೆಯಲ್ಲಾಗುತ್ತೆ ಮ್ಯಾಜಿಕ್
ಎಲ್ಲರ ಮುಂದೇ ತಾನು ಸುಂದರವಾಗಿ ಕಾಣಬೇಕು ಎನ್ನುವುದು ಯಾರಿಗಿಲ್ಲ ಹೇಳಿ? ಹೀಗಾಗಿ ಹುಡುಗಿಯರು ಪಾರ್ಲರ್, ಸೌಂದರ್ಯ ಉತ್ಪನ್ನಗಳಿಗೆ ಖರ್ಚು ಮಾಡುವ ದುಡ್ಡು ಅಷ್ಟಿಷ್ಟಲ್ಲ. ಆದರೆ ಎಷ್ಟೇ ದುಡ್ಡು ಖರ್ಚು ಮಾಡಿದರೂ ಈ ಉತ್ಪನ್ನಗಳು ಕೆಲವೊಮ್ಮೆ ಸ್ಕಿನ್ ಟೋನ್ ಗೆ ಹೊಂದಿಕೊಳ್ಳದೇ ಅಡ್ಡಪರಿಣಾಮಗಳನ್ನು ಬಿರುತ್ತದೆ. ಆದರೆ ಅಡುಗೆ ಮನೆಯಲ್ಲಿರುವ ಮೊಸರನ್ನು ಬಳಸಿ ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು.

ಸಾಮಾನ್ಯವಾಗಿ ಮೊಸರನ್ನು ಎಲ್ಲರೂ ಇಷ್ಟಪಟ್ಟೆ ಸೇವಿಸುತ್ತಾರೆ. ಅನ್ನ, ಮೊಸರು ಹಾಗೂ ಉಪ್ಪಿನಕಾಯಿ ಇದ್ದು ಬಿಟ್ಟರೆ, ಯಾವ ಊಟಕ್ಕೂ ಇದು ಕಡಿಮೆಯಿಲ್ಲ. ಈ ಮೊಸರಿನಲ್ಲಿ ವಿಟಮಿನ್ ಬಿ 2, ವಿಟಮಿನ್ ಬಿ 12, ಪೊಟ್ಯಾಸಿಯಮ್ ಮತ್ತು ಮೆಗ್ನೀಷಿಯಂ ಪೋಷಕಾಂಶಗಳನ್ನು ಹೊಂದಿರುವ ಹೇರಳವಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. ಆರೋಗ್ಯಕ್ಕೆ ಮಾತ್ರವಲ್ಲದೇ ಮುಖದ ಅಂದವನ್ನು ಹೆಚ್ಚಿಸಲು ಈ ಮೊಸರನ್ನು ಬಳಸಬಹುದು.
* ಎರಡು ಚಮಚ ಮೊಸರಿಗೆ ಒಂದು ಚಿಟಿಕೆಯಷ್ಟು ಸಕ್ಕರೆ ಹಾಕಿ ಸೇರಿಸಿ ಇದನ್ನು ಮುಖಕ್ಕೆ ಹಚ್ಚಿ, ಸುಮಾರು 15 ನಿಮಿಷ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ಇದು ಮುಖದಲ್ಲಿನ ಕೊಳೆಯೂ ನಿವಾರಣೆ ಮಾಡಿ ಮುಖದ ಕಾಂತಿ ಹೆಚ್ಚಿಸುತ್ತದೆ.
* ಒಂದು ಚಮಚ ಮೊಸರನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಅರ್ಧ ಗಂಟೆ ನಂತರ ಮುಖವನ್ನು ತೊಳೆದರೆ ಕಪ್ಪುಕಲೆ ಮಾಯವಾಗುತ್ತದೆ.
* ಅರ್ಧ ಕಪ್ ಮೊಸರಿಗೆ ಮೂರು ಚಮಚ ತುರಿದ ಸೌತೆಕಾಯಿಯನ್ನು ಬೆರೆಸಿ, ಈ ಮಿಶ್ರಣವನ್ನು ಡಾರ್ಕ್ ಸರ್ಕಲ್ ಹಾಗೂ ಟ್ಯಾನ್ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಹದಿನೈದು ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆದರೆ ಮುಖದ ಕಾಂತಿಯು ಹೆಚ್ಚಾಗುತ್ತದೆ.
ಇದನ್ನೂ ಓದಿ: ಬೆಳಗ್ಗೆ 8 ಗಂಟೆಯಾದ್ರೂ ಹಾಸಿಗೆಯಲ್ಲೇ ಇರ್ತೀರಾ? ಬೇಗ ಏಳಲು ಇಲ್ಲಿದೆ ಟಿಪ್ಸ್
* ಒಂದು ಚಮಚ ಕಡಲೆ ಹಿಟ್ಟಿಗೆ 2 ಚಮಚ ಮೊಸರನ್ನು ಸೇರಿಸಿ, ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖ ತೊಳೆದರೆ ಮುಖದ ಮೇಲಿನ ಜಿಡ್ಡಿನ ಅಂಶವು ಕಡಿಮೆಯಾಗುತ್ತದೆ.
* ಎರಡು ಚಮಚ ಮೊಸರಿಗೆ ಒಂದು ಚಮಚ ಅರಶಿಣವನ್ನು ಸೇರಿಸಿ ಮಿಶ್ರಣ ಮಾಡಿ, ಇದನ್ನು ಮುಖಕ್ಕೆ ಲೇಪಿಸಿದರೆ ಮುಖದ ಕಾಂತಿಯು ಹೆಚ್ಚಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:




