ಕೆಲಸ ಮಾಡಿ ಸುಸ್ತೋ ಸುಸ್ತು ಎನ್ನುವವರನ್ನು ನೋಡುತ್ತಿರುತ್ತೇವೆ. ವಿಶ್ರಾಂತಿ, ಆಹಾರ ಹಾಗೂ ನಿದ್ದೆಯ ಕೊರತೆಯು ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಪೋಷಕಾಂಶಭರಿತ ಆಹಾರ ಸೇವಿಸಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ ಕೆಲಸ ಮಾಡಲು ದೇಹ ಹಾಗೂ ಮನಸ್ಸು ಸಿದ್ಧವಾಗುತ್ತದೆ. ಬಿಡುವಿಲ್ಲದೆ ಕೆಲಸ ಮಾಡಿ ಸುಸ್ತಾದಾಗ ಈ ಆಹಾರಗಳನ್ನು ಸೇವಿಸಿದರೆ ಸದಾ ಉಲ್ಲಾಸದಿಂದಿರಬಹುದು.
* ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಸುಕ್ರೋಸ್, ಗ್ಲೂಕೋಸ್ ಮತ್ತು ಫ್ರಕ್ಟೋಸ್ ಅಂಶಗಳು ಸೇರಿವೆ. ಹೀಗಾಗಿ ಪ್ರತಿ ನಿತ್ಯ ಬಾಳೆಹಣ್ಣು ಸೇವನೆ ಮಾಡುತ್ತ ಬಂದರೆ ಆಯಾಸವನ್ನು ದೂರವಾಗಿಸಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
* ಖರ್ಜೂರ: ಪ್ರತಿದಿನ 2-3 ಖರ್ಜೂರಗಳನ್ನು ಸೇವಿಸುವುದರಿಂದ ದೇಹಕ್ಕೆ ಉತ್ತಮ ಶಕ್ತಿ ದೊರೆಯುವುದಲ್ಲದೆ ಆಯಾಸ ಸುಸ್ತನ್ನು ದೂರ ಮಾಡಿ ದೇಹಕ್ಕೆ ಚೈತನ್ಯ ನೀಡುತ್ತದೆ.
* ಮೊಟ್ಟೆ : ಮೊಟ್ಟೆಯಲ್ಲೂ ಪ್ರೋಟೀನ್, ಆರೋಗ್ಯಕರ ಕೊಬ್ಬು, ಕೋಲೀನ್, ಕಬ್ಬಿಣ, ವಿಟಮಿನ್ ಡಿ ಮತ್ತು ಬಿ12 ಪೌಷ್ಟಿಕಾಂಶಗಳು ಹೇರಳವಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು. ಪ್ರತಿ ನಿತ್ಯ ಮೊಟ್ಟೆ ಸೇವಿಸುತ್ತಿದ್ದರೆ, ದೇಹಕ್ಕೆ ಶಕ್ತಿಯು ಸಿಗುತ್ತದೆ. ಇದರಿಂದ ಸದಾ ಲವಲವಿಕೆಯಿಂದಿರಲು ಸಾಧ್ಯ.
ಇದನ್ನೂ ಓದಿ: ಬೆಳಗ್ಗೆ 8 ಗಂಟೆಯಾದ್ರೂ ಹಾಸಿಗೆಯಲ್ಲೇ ಇರ್ತೀರಾ? ಬೇಗ ಏಳಲು ಇಲ್ಲಿದೆ ಟಿಪ್ಸ್
* ಬೀಟ್ ರೂಟ್ : ಬೀಟ್ ರೂಟ್ ನಲ್ಲಿ ನೈಟ್ರೇಟ್ ಸಮೃದ್ಧವಾಗಿದ್ದು, ಇದರ ಸೇವನೆಯು ಜೀವಕೋಶಗಳನ್ನು ಉತ್ತಮಗೊಳಿಸಿ ದೇಹಕ್ಕೆ ಶಕ್ತಿ ನೀಡುತ್ತದೆ.
* ಮೊಸರು : ಮೊಸರಿನಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ 12 ನಲ್ಲಿ ಸಮೃದ್ಧವಾಗಿರುವ ತ್ವರಿತ ಶಕ್ತಿ ವರ್ಧಕ ಆಹಾರವಾಗಿದೆ. ನಿಯಮಿತವಾಗಿ ಮೊಸರನ್ನು ಸೇವಿಸಿದರೆ ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: