World Bicycle Day 2024: ಆರೋಗ್ಯಕ್ಕೆ ಉಪಕಾರಿ ಈ ಸೈಕ್ಲಿಂಗ್, ಆರೋಗ್ಯ ಲಾಭಗಳು ಹಲವು!
ಪ್ರತಿ ವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಹಾಗೂ ಇದರಿಂದಾಗುವ ಆರೋಗ್ಯ ಸಂಬಂಧಿತ ಪ್ರಯೋಜನಗಳ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಬಡವರ ಪಾಲಿನ ಸಾರ್ವಕಾಲಿಕ ಮಿತ್ರನೇ ಈ ಬೈಸಿಕಲ್. ಆದರೆ ಇಂದು ಸೈಕಲ್ ಸ್ಥಾನವನ್ನು ಬೈಕ್ ನಂತಹ ವಾಹನಗಳು ತುಂಬಿಕೊಂಡಿವೆ. ಇವತ್ತಿಗೂ ಬಡವರು ಓಡಾಟಕ್ಕೆಂದು ಬಳಸುವ ಈ ಸೈಕಲ್, ಶ್ರೀಮಂತರ ಪಾಲಿಗೆ ವ್ಯಾಯಾಮದ ಸಾಧನವಾಗಿ ಬದಲಾಗಿದೆ. ಅದಲ್ಲದೇ, ಪರಿಸರಕ್ಕೆ ಸ್ನೇಹಿಯಾಗಿರುವ ಸೈಕಲ್ ನಿಂದ ಆರೋಗ್ಯ ಪ್ರಯೋಜನಗಳು ಹಲವಾರಿದೆ. ಬೈಸಿಕಲ್ ನ್ನು ಹೆಚ್ಚು ಹೆಚ್ಚು ಬಳಸುವಂತೆ ಪ್ರೋತ್ಸಾಹಿಸುವುದು ಈ ದಿನದ ಉದ್ದೇಶವಾಗಿದೆ.
ವಿಶ್ವ ಬೈಸಿಕಲ್ ದಿನದ ಇತಿಹಾಸ
ವಿಶ್ವಸಂಸ್ಥೆಯು ಏಪ್ರಿಲ್ 2018ರಲ್ಲಿ ಪ್ರತಿ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವಾಗಿ ಆಚರಿಸಲಾಗುವುದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷವು ವಿಶ್ವ ಬೈಸಿಕಲ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ಬೈಸಿಕಲ್ ದಿನದ ಮಹತ್ವ ಹಾಗೂ ಆಚರಣೆ ಹೇಗೆ?
ಶೂನ್ಯ-ಮಾಲಿನ್ಯದ ಸಾರಿಗೆಯಾಗಿರುವ ಈ ಬೈಸಿಕಲ್ ಆರೋಗ್ಯಕ್ಕೆ ಬಹು ಉಪಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಶ್ವಸಂಸ್ಥೆಯು ಸೈಕ್ಲಿಂಗ್ ನ ಅನೇಕ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಆರೋಗ್ಯಕರ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ಈ ದಿನದಂದು ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಸೈಕ್ಲಿಂಗ್ ಮ್ಯಾರಥಾನ್ ಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಭಾರತೀಯ ಸೀರೆಯಲ್ಲಿ ಆಸ್ಟ್ರೇಲಿಯಾ ನೀರೆ; ಸೀರೆಯುಟ್ಟು ರ‍್ಯಾಂಪ್ ವಾಕ್ ಮಾಡಿದ ಮಿಸ್ ಆಸ್ಟ್ರೇಲಿಯಾ
ಸೈಕ್ಲಿಂಗ್ ನಿಂದಾಗುವ ಆರೋಗ್ಯ ಪ್ರಯೋಜನಗಳು
* ನಿಯಮಿತವಾಗಿ ಸೈಕ್ಲಿಂಗ್ ಮಾಡುವುದರಿಂದ ತೂಕವನ್ನು ನಿಯಂತ್ರಿಸಬಹುದು ಹಾಗೂ ಇಳಿಕೆಗೂ ಸಹಕಾರಿಯಾಗಿದೆ.
* ಸೈಕ್ಲಿಂಗ್ ಹೃದಯ ಸ್ನಾಯುಗಳನ್ನು ಬಲಪಡಿಸುತ್ತದೆ. ರಕ್ತದ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡುತ್ತದೆ.
* ಸೈಕ್ಲಿಂಗ್ ಶ್ವಾಸಕೋಶದ ಕಾರ್ಯವನ್ನು ಸುಧಾರಿಸುವುದಲ್ಲದೆ, ಕರುಳಿನ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುತ್ತದೆ.
* ಸೈಕ್ಲಿಂಗ್ ನಿಂದ ಖಿನ್ನತೆ, ಒತ್ತಡ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:35 pm, Mon, 3 June 24