ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ ಹೀಗೆ ಹತ್ತು ಹಲವು ಸಮಾರಂಭಗಳು ಪ್ರತಿಯೊಂದು ಕುಟುಂಬದಲ್ಲಿ ನಡೆಯುವುದು ಸರ್ವೇ ಸಾಮಾನ್ಯ. ಆದ್ದರಿಂದ ಅಂತಹ ವಿಶೇಷ ದಿನಗಳ ಸಮಯದಲ್ಲಿ ಕಲಬೆರಕೆಯ ಕೇಕ್ ಗಳನ್ನು ಸೇವಿಸಿ ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಆರೋಗ್ಯಕರ ಕೇಕ್ ತಯಾರಿಸಿ ಆನಂದಿಸಿ.
ಈ ಕೇಕ್ ರೆಸಿಪಿಗೆ ಬೆರಳೆಣಿಕೆಯಷ್ಟು ಪದಾರ್ಥಗಳು ಬೇಕಾಗಿರುವುದು. ಆದ್ದರಿಂದ ಅತ್ಯಂತ ಸುಲಭವಾಗಿ ಹಾಗೂ ತ್ವರಿತವಾಗಿ ಕೇಕ್ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
1 ಕಪ್ ರವೆ
1 1/4 ಕಪ್ ಹಾಲು
1/4 ಕಪ್ ಕೋಕೋ ಪೌಡರ್
1 ಚಮಚ ಬೇಕಿಂಗ್ ಪೌಡರ್
6 ಚಮಚ ಒಣಗಿದ ತೆಂಗಿನಕಾಯಿ ತುರಿ
1/2 ಕಪ್ ಪುಡಿ ಸಕ್ಕರೆ
1/4 ಕಪ್ ಬೆಣ್ಣೆ
1 ಚಮಚ ವೆನಿಲ್ಲಾ ಎಸೆನ್ಸ್
1/2 ಚಮಚ ಅಡಿಗೆ ಸೋಡಾ
ಅಗತ್ಯಕ್ಕೆ ತಕ್ಕಂತೆ ಹಾಲಿನ ಕೆನೆ
1 ಚಿಟಿಕೆ ಉಪ್ಪು
ಮಾಡುವ ವಿಧಾನ:
ಹಂತ 1: ರವೆ ತೆಗೆದುಕೊಂಡು ಅದನ್ನು ಮಿಕ್ಸರ್‌ನಲ್ಲಿ 1ನಿಮಿಷಗಳ ಕಾಲ ಚೆನ್ನಾಗಿ ರುಬ್ಬಿ ಕೊಳ್ಳಿ. ನಂತರ ಈ ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿ, ಕೋಕೋ ಪೌಡರ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಹಂತ 2: ಒಂದು ಪಾತ್ರೆಯಲ್ಲಿ, ಹಾಲು, ಬೆಣ್ಣೆ, ಸಕ್ಕರೆ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಮತ್ತು ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಕಡಿಮೆ ಉರಿಯಲ್ಲಿ ಇರಿಸಿ.
ಹಂತ 3: ಈ ಬೆಚ್ಚಗಿನ ಮಿಶ್ರಣವನ್ನು ಒಣ ಪದಾರ್ಥಗಳಿಗೆ ನಿಧಾನವಾಗಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬೇಕಿಂಗ್ ಟಿನ್ ಮೇಲೆ ಸ್ವಲ್ಪ ಎಣ್ಣೆ ಮತ್ತು ಹಿಟ್ಟನ್ನು ಹಾಕಿ. ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾವನ್ನು ಸೇರಿಸಿ.
ಹಂತ 4: ಈಗ ಇವೆಲ್ಲಾವುಗಳನ್ನು ಬೇಕಿಂಗ್ ಟಿನ್‌ಗೆ ಸುರಿಯಿರಿ ಮತ್ತು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 25-30 ನಿಮಿಷಗಳ ಕಾಲ ಬೇಯಿಸಿ.
ಹಂತ 5: ಬಾಣಲೆಯಲ್ಲಿ, ಒಣಗಿದ ತೆಂಗಿನಕಾಯಿಯನ್ನು ಚಿನ್ನದ ಬಣ್ಣಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ತಟ್ಟೆಯಲ್ಲಿ ತೆಗೆದುಹಾಕಿ ಮತ್ತು ಸ್ವಲ್ಪ ತಣ್ಣಗಾಗಲು ಬಿಡಿ. ಇದನ್ನು 2 ಟೀಸ್ಪೂನ್ ಪುಡಿ ಸಕ್ಕರೆಯೊಂದಿಗೆ ಮಿಶ್ರಣ ಮಾಡಿ.
ಹಂತ 6: ಬೇಯಿಸಿದ ಕೇಕ್ ಮೇಲೆ ಸ್ವಲ್ಪ ಹಾಲಿನ ಕೆನೆ ಹರಡಿ ಮತ್ತು ತೆಂಗಿನ ಮಿಶ್ರಣದಿಂದ ಅಲಂಕರಿಸಿ. ಜೊತೆಗೆ ಇನ್ನಷ್ಟು ಆರೋಗ್ಯಕ್ಕಾಗಿ ಈ ಕೇಕಿನ ಮೇಲೆ ಕೆಲವೊಂದಿಷ್ಟು ಒಣ ದ್ರಾಕ್ಷಿ, ಗೋಡಂಬಿಗಳಿಂದ ಅಲಂಕರಿಸಿ.
ಇದನ್ನು ಓದಿ: ಅತ್ಯಂತ ಸುಲಭವಾಗಿ ಮನೆಯಲ್ಲೇ ರುಚಿಕರ ಆಲೂ ಹಲ್ವಾ ತಯಾರಿಸಿ
ಕೇಕ್ ಅನ್ನು ಆರೋಗ್ಯಕರವಾಗಿಸಲು ನೀವು ಸಕ್ಕರೆಯ ಬದಲಿಗೆ ಬೆಲ್ಲದ ಪುಡಿ ಅಥವಾ ನಿಮ್ಮ ಆಯ್ಕೆಯ ಯಾವುದೇ ಸಿಹಿಕಾರಕವನ್ನು ಬಳಸಬಹುದು. ಪಾರ್ಟಿಗಳು, ಹುಟ್ಟುಹಬ್ಬಗಳು, ವಾರ್ಷಿಕೋತ್ಸವಗಳು, ಗೆಟ್-ಟುಗೆದರ್‌ಗಳು ಇತ್ಯಾದಿಗಳಿಗಾಗಿ ನೀವು ಈ ತೆಂಗಿನಕಾಯಿ ಕೇಕ್ ತಯಾರಿಸುವುದ್ದರಿಂದ ಪ್ರತಿಯೊಬ್ಬರೂ ಇದನ್ನು ಖಂಡಿತವಾಗಿ ಇಷ್ಟಪಡುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:24 pm, Sat, 12 November 22