ಹೆಚ್ಚಿನ ವ್ಯಾಯಾಮ ಕೂಡ ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು ಹೌದು ಹೆಚ್ಚಿನ ವ್ಯಾಯಾಮ ಅಥವಾ ವರ್ಕೌಟ್ ನಿಮ್ಮ ಮುಟ್ಟಿ(Periods )ನ ದಿನಾಂಕವನ್ನೇ ಬದಲಿಸುತ್ತದೆ. ಕೆಲವು ಮಹಿಳೆಯರು ಕೆಲವು ಗಂಟೆಗಳ ಮುಂಚೆಯೇ ತಾವು ಮುಟ್ಟಾಗುವುದನ್ನು ಊಹಿಸಬಲ್ಲರು. ಪ್ರತಿ ಮುಟ್ಟಿನಲ್ಲೂ ರಕ್ತಸ್ರಾವವಾಗುವ ಪ್ರಮಾಣ ಮಹಿಳೆಯರಿಂದ ಮಹಿಳೆಗೆ ಬದಲಾಗುತ್ತದೆ. ನೀವು ಅನಿಯಮಿತ ಮುಟ್ಟನ್ನು ಅನುಭವಿಸುತ್ತಿದ್ದರೆ, ನಿಮ್ಮ ದೇಹ ಆ ತಿಂಗಳ ಋತುಚಕ್ರಕ್ಕೆ ಸಿದ್ಧವಾಗಿಲ್ಲವೆಂದು ಅರ್ಥ. ನಿಮ್ಮ ಕಳೆದ ಕೆಲವು ಮುಟ್ಟಿನ ಅವಧಿಗೆ ಹೋಲಿಸಿದರೆ ನಿಮ್ಮಲ್ಲಿ ಈಗ ಅಸಹಜ ರಕ್ತಸ್ರಾವವಾದರೆ ಅದನ್ನು ಅನಿಯಮಿತ ಮುಟ್ಟು ಎಂದು ಪರಿಗಣಿಸಲಾಗುತ್ತದೆ.
ಕಾಬ್ರೋಹೈಡ್ರೇಟ್ ಅಧಿಕವಾಗಿರುವ ಅನಾರೋಗ್ಯಕರ ಆಹಾರವನ್ನು ಸೇವಿಸಿ ಅಧಿಕ ತೂಕವನ್ನು ಪಡೆದಿದ್ದರೆ, ನಿಮ್ಮ ದೇಹಲ್ಲು ಹಾರ್ಮೀನ್ ಉತ್ಪಾದನೆಯ ಮಟ್ಟದಲ್ಲಿ ವ್ಯತ್ಯಾಸವುಂಟಾಗಿ ಋತುಚಕ್ರ ಸರಿಯಾಗಿ ಆಗುವುದಿಲ್ಲ. ಇದೇ ರೀತಿ ಅತ್ಯಂತ ತೆಳ್ಳಗಿರುವ ಮಹಿಳೆಯರಲ್ಲೂ ಇದೇ ಸಮಸ್ಯೆ ಉಂಟಾಗಬಹುದು.
ಅತಿಯಾದ ಒತ್ತಡ: ಒತ್ತಡ, ಅನಿಯಮಿತ ಮುಟ್ಟಿಗೆ ಅತ್ಯಂತ ಸಾಮಾನ್ಯ ಕಾರಣ. ಎರಡು ಲೈಂಗಿಕ ಹಾರ್ಮೋನ್ ಗಳಾದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ನಮ್ಮ ದೇಹದಲ್ಲಿ ಎಷ್ಟು ಉತ್ಪಾದನೆಯಾಗುತ್ತದೆ ಎಂಬುದರ ಮೇಲೆ ಕಾರ್ಟಿಸಾಲ್ ಒತ್ತಡ ಹಾರ್ಮೋನ್ ಪ್ರಭಾವ ಬೀರುತ್ತದೆ. ನಿಮ್ಮ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ಕಾರ್ಟಿಸೋಲ್ ಇದ್ದರೆ, ನಿಮ್ಮ ಮುಟ್ಟಿನ ಅವಧಿಯೂ ಬದಲಾಗುತ್ತದೆ.
ಹೆಚ್ಚಿನ ವ್ಯಾಯಾಮ: ವ್ಯಾಯಾಮ ನಮ್ಮ ಶರೀರಕ್ಕೆ ಋತುಚಕ್ರವನ್ನು ಅನುಭವಿಸಲು ಶಕ್ತಿಯ ಅಗತ್ಯವಿದೆ. ನೀವು ನಿಮ್ಮ ಶಕ್ತಿಯನ್ನು ಜಿಮ್ , ವ್ಯಾಯಾಮ ಮಾಡುವುದರಲ್ಲಿಯೇ ಕಳೆದರೆ, ತಿಂಗಳಿನಲ್ಲಿ ಮುಟ್ಟು ಉಂಟಾಗುವುದು ಅನಿಯಮಿತವಾಗುತ್ತದೆ.
ಸಾಮಾನ್ಯವಾಗಿ ಮಹಿಳೆಯರಲ್ಲಿ ಸರಾಸರಿ, ತಿಂಗಳಲ್ಲಿ ಮೂರರಿಂದ ಏಳು ದಿನಗಳ ಕಾಲ ಋತುಚಕ್ರ ಉಂಟಾಗುತ್ತದೆ. ಈ ಋತುಚಕ್ರ ಹಾಗೆಯೇ ಮತ್ತೆ ಮತ್ತೆ ಪುನರ್ರಾವರ್ತನೆಗೊಂಡು ಬಹಳ ವರ್ಷಗಳ ಕಾಲ ಹಾಗೆಯೇ ಮುಂದುವರೆಯುತ್ತದೆ.
ಗರ್ಭಧಾರಣೆ ಸಂದರ್ಭ: ಗರ್ಭಧಾರಣೆ ಗರ್ಭಾವಸ್ಥೆಯಲ್ಲಿರುವಾಗ ಮಹಿಳೆಯರ ದೇಹದಲ್ಲಿ ವಿವಿಧ ಮಟ್ಟಗಳಲ್ಲಿ ಹಾರ್ಮೋನ್ ಗಳು ಉತ್ಪಾದನೆಯಾಗುವುದರಿಂದ ಮುಟ್ಟು ನಿಲ್ಲಲು ಪ್ರಾರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಮಹಿಳೆಯರಲ್ಲಿ ಸಾಮಾನ್ಯ ಮುಟ್ಟಿಗಿಂತಲೂ ಕಡಿಮೆ ರಕ್ತಸಾವ ಅಥವಾ ತಡವಾಗಿ ಮುಟ್ಟು ಸಂಭವಿಸಬಹುದು. ಒಂದುವೇಳೆ ನೀವು ಗರ್ಭಿಣಿಯಾಗುವ ಸಾಧ್ಯತೆಗಳಿದ್ದರೆ, ನಿಮ್ಮ ವೈದ್ಯ ಬಳಿ ಈ ವಿಷಯವನ್ನು ಚರ್ಚಿಸುವುದು ಉತ್ತಮ.
ಅನಿಯಮಿತ ಮುಟ್ಟಿನಲ್ಲಿ ಸಹಾಯ ಮಾಡುವ ಕೆಲವು ಮನೆಮದ್ದುಗಳು ಇಲ್ಲಿವೆ
ಪಪ್ಪಾಯಿ ಕಾಯಿ : ಹಸಿರು, ಮಾಗದ ಪಪ್ಪಾಯಿಯನ್ನು ಮುಟ್ಟಿನ ಹರಿವನ್ನು ನಿಯಂತ್ರಿಸಲು ಉಪಯುಕ್ತವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಗರ್ಭಾಶಯದಲ್ಲಿನ ಮಸಲ್ ಫೈಬರ್ಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಬಲಿಯದ ಪಪ್ಪಾಯಿ ರಸವನ್ನು ಕೆಲವು ತಿಂಗಳುಗಳವರೆಗೆ ನಿಯಮಿತವಾಗಿ ಸೇವಿಸಿ ಆದರೆ ನಿಮ್ಮ ಮುಟ್ಟಿನ ಸಮಯದಲ್ಲಿ ಇದನ್ನು ಕುಡಿಯಬೇಡಿ.
ಅಲೋವೆರಾ: ನಿಮ್ಮ ಮುಟ್ಟಿನ ಸಮಯದಲ್ಲಿ ಈ ಪರಿಹಾರವನ್ನು ಬಳಸಬೇಡಿ. ನಿಮ್ಮ ಹಾರ್ಮೋನುಗಳನ್ನು ನಿಯಂತ್ರಿಸುವ ಮೂಲಕ ಅಲೋವೆರಾ ನೈಸರ್ಗಿಕವಾಗಿ ಮುಟ್ಟನ್ನು ನಿಯಮಿತಗೊಳಿಸಲು ಸಹಾಯ ಮಾಡುತ್ತದೆ.
ಅರಿಶಿನ: ಅರಿಶಿನವು ಅತ್ಯುತ್ತಮ ಔಷಧೀಯ ಗಿಡಮೂಲಿಕೆಗಳಲ್ಲಿ ಒಂದಾಗಿದೆ, ಇದು ಸಾಕಷ್ಟು ಬೆಚ್ಚಗಾಗಿಸುವ ಪದಾರ್ಥವಾಗಿದೆ. ಮುಟ್ಟನ್ನು ನಿಯಂತ್ರಿಸಲು ಮತ್ತು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಇದು ಸಹಾಯ ಮಾಡುತ್ತದೆ.
ಆರೋಗ್ಯ ಹಾಗೂ ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ