Relationship Tips: ಸಂಗಾತಿಯೊಂದಿಗೆ ಸದಾ ಜಗಳವಾಡುತ್ತೀರಾ? ವಾದವನ್ನು ಅಂತ್ಯಗೊಳಿಸುವ ಮಾರ್ಗಗಳು ಇಲ್ಲಿವೆ

ವಾದ ಎನ್ನುವುದು ನಮ್ಮ ಮನಸ್ಸಿನ ಜತೆಗೆ ಸಂಬಂಧವನ್ನೂ ಹಾಳು ಮಾಡುತ್ತದೆ. ಈ ಜಗಳಕ್ಕೆ ಬ್ರೇಕ್ ಹಾಕದಿದ್ದರೆ ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನೇ ಎದುರಿಸಬೇಕಾದೀತು.

Relationship Tips: ಸಂಗಾತಿಯೊಂದಿಗೆ ಸದಾ ಜಗಳವಾಡುತ್ತೀರಾ? ವಾದವನ್ನು ಅಂತ್ಯಗೊಳಿಸುವ ಮಾರ್ಗಗಳು ಇಲ್ಲಿವೆ
Relationship
Follow us
TV9 Web
| Updated By: ನಯನಾ ರಾಜೀವ್

Updated on: Sep 29, 2022 | 9:00 AM

ವಾದ ಎನ್ನುವುದು ನಮ್ಮ ಮನಸ್ಸಿನ ಜತೆಗೆ ಸಂಬಂಧವನ್ನೂ ಹಾಳು ಮಾಡುತ್ತದೆ. ಈ ಜಗಳಕ್ಕೆ ಬ್ರೇಕ್ ಹಾಕದಿದ್ದರೆ ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನೇ ಎದುರಿಸಬೇಕಾದೀತು. ನೀವು ಯಾರೊಂದಿಗಾದರೂ ಅಸಮಾಧಾನಗೊಂಡಾಗ ಸಂವಹನ ಮಾಡುವುದು ಮುಖ್ಯ ಆದರೆ ಅವರು ಕಿರುಚಾಡುತ್ತಿದ್ದರೆ, ನೀವು ಕೂಡ ತಾಳ್ಮೆಯನ್ನು ಮೀರಿ ವರ್ತಿಸಬೇಕಾಗುತ್ತದೆ. ಆದರೆ ವಾದವನ್ನು ಅಂತ್ಯಗೊಳಿಸುವ ಸುಲಭ ವಿಧಾನ ಇಲ್ಲಿದೆ.

ಪ್ರತಿಯೊಬ್ಬ ವ್ಯಕ್ತಿಯು ವಿಷಯಗಳನ್ನು ಯೋಚಿಸುವ ಮತ್ತು ಗ್ರಹಿಸುವ ರೀತಿ ಭಿನ್ನವಾಗಿರುತ್ತದೆ ಮತ್ತು ಆದ್ದರಿಂದ, ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳು ವಾದ ಮಾಡುವುದು ಸಾಮಾನ್ಯ. ಆದರೆ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಜಗಳವಾಡಿದರೆ ನಿಮ್ಮ ಮನಸ್ಸಿಗೆ ನೋವುಂಟಾಗುತ್ತದೆ ಎಂಬುದನ್ನು ಮರೆಯಬೇಡಿ. ವಾದವನ್ನು ಹೇಗೆ ಕೊನೆಗೊಳಿಸುವುದು?

1. ವ್ಯಕ್ತಿಯನ್ನು ಟೀಕಿಸಬೇಡಿ ಇನ್ನೊಬ್ಬ ವ್ಯಕ್ತಿಗೆ ಕಟುವಾದ ಮಾತುಗಳನ್ನು ಹೇಳುವುದು ಅಥವಾ ಯಾವಾಗಲೂ ಅವರನ್ನು ಟೀಕಿಸುವುದು ವಾಗ್ವಾದಕ್ಕೆ ಕಾರಣವಾಗುತ್ತದೆ. ನೀವು ಮಾತನಾಡುವ ಮೊದಲು ನೀವು ಯೋಚಿಸಬೇಕು. ವಾದದ ಸಮಯದಲ್ಲಿ, ಒಬ್ಬ ವ್ಯಕ್ತಿಯನ್ನು ಟೀಕಿಸುವುದು ಟೀಕೆ ಅಥವಾ ದೂರು ನೀಡುವುದಕ್ಕಿಂತ ಭಿನ್ನವಾಗಿರುತ್ತದೆ. ನೀವು ಆಗಾಗ ಟೀಕೆಗಳನ್ನು ಬಳಸುತ್ತಿದ್ದರೆ, ಒಟ್ಟಾರೆಯಾಗಿ ವ್ಯಕ್ತಿಯ ಮೇಲೆ ಕೇಂದ್ರೀಕರಿಸುವ ಬದಲು ಸಂಭಾಷಣೆ ಅಥವಾ ವಾದವನ್ನು ಮಾಡುವಾಗ ನೀವು ಪರಿಸ್ಥಿತಿಗೆ ಅಂಟಿಕೊಳ್ಳಲು ಪ್ರಯತ್ನಿಸಬಹುದು.

2. ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸಿ ಘರ್ಷಣೆಗಳಿಂದ ತಿರಸ್ಕಾರ ಭಾವ ಉಂಟಾಗುತ್ತದೆ. ತಿರಸ್ಕಾರವು ನೀವು ಇತರ ವ್ಯಕ್ತಿಯ ಮೇಲೆ ನೈತಿಕ ಶ್ರೇಷ್ಠತೆಯ ಸ್ಥಾನವನ್ನು ಪಡೆದುಕೊಳ್ಳುವ ಸ್ಥಿತಿ ಎಂದೇ ಹೇಳಬಹುದು.

ನೀವು ಇತರರನ್ನು ಅಗೌರವದಿಂದ ನಡೆಸಿಕೊಳ್ಳಬಹುದು, ವ್ಯಂಗ್ಯದಿಂದ ಅವರನ್ನು ಅಪಹಾಸ್ಯ ಮಾಡಬಹುದು, ಅವರ ಹೆಸರನ್ನು ಪದೇ ಪದೇ ಉಲ್ಲೇಖಿಸಬಹುದು, ಕಣ್ಣು ಕೆಂಪಗಾಗಿಸಬಹುದು, ಅವರು ನಡವಳಿಕೆಯ ಅನುಕರಣೆ ಮಾಡಬಹುದು. ನೀವು ತಿರಸ್ಕಾರದ ಭಾವನೆಯನ್ನು ಅನುಭವಿಸಿದರೆ, ವಾದ ಅಥವಾ ಸಂಭಾಷಣೆಯ ಸಮಯದಲ್ಲಿ ವಿರಾಮಗೊಳಿಸಲು ಪ್ರಯತ್ನಿಸಿ ಮತ್ತು ನಿಮ್ಮ ಮುಂದೆ ಇರುವ ವ್ಯಕ್ತಿಯ ಸಕಾರಾತ್ಮಕ ಗುಣಗಳ ಬಗ್ಗೆ ನಿಮ್ಮನ್ನು ನೆನಪಿಸಿಕೊಳ್ಳಿ.

3. ಬೇರೆಯವರ ಮೇಲೆ ವಿನಾಕಾರಣ ತಪ್ಪು ಹೊರಿಸಬೇಡಿ ಬೇರೆಯವರ ಮೇಲೆ ವಿನಾಕಾರಣ ತಪ್ಪುಗಳನ್ನು ಹೊರಿಸಬೇಡಿ, ಕೆಲವೊಮ್ಮೆ ನಾವು ಮಾಡಿದ ಆರೋಪಗಳು ನಮಗೇ ತಿರುಗುಬಾಣವಾಗಬಹುದು. ಹಾಗಾಗಿ ನಿಮ್ಮದು ತಪ್ಪಿದ್ದರೆ ಒಪ್ಪಿಕೊಳ್ಳಿ, ಬೇರೆಯವರದ್ದು ತಪ್ಪಿದ್ದರೆ ಶಾಂತ ರೀತಿಯಲ್ಲಿ ಅವರಿಗೆ ಅರ್ಥವಾಗುವಂತೆ ಹೇಳಿ.

4. ಮೌನ ಉತ್ತರವಲ್ಲ, ಮಾತನಾಡಿದರೆ ಸಮಸ್ಯೆ ಬಗೆಹರಿಯುವುದು ಜಗಳ ನಡೆಯುವ ಸಂದರ್ಭದಲ್ಲಿ ನೀವು ಮೌನವಾಗಿದ್ದರೆ ಅದು ಪರಿಹಾರವಲ್ಲ, ಅದರಿಂದ ಜಗಳ ಮತ್ತಷ್ಟು ಹೆಚ್ಚಾಗುತ್ತದೆ. ಯಾವ ಕಾರಣಕ್ಕಾಗಿ ಜಗಳವಾಗಿದೆ ಎಂಬುದರ ಕುರಿತು ಆಲೋಚಿಸಿ, ಬಳಿಕ ಹೇಗೆ ಮಾತನಾಡಿದರೆ ಜಗಳ ಕಡಿಮೆಯಾಗುತ್ತದೆ ಎಂಬುದನ್ನು ಆಲೋಚಿಸಿ, ಮಾತನಾಡಿ ಬಗೆಹರಿಸಿಕೊಳ್ಳಿ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್