Swapna Shastra: ಕನಸಿನಲ್ಲಿ ಈ ಪ್ರಾಣಿಗಳು ಪದೇ ಪದೇ ಕಾಣಿಸಿಕೊಂಡರೆ ನಿಮ್ಮ ಅದೃಷ್ಟವು ಬದಲಾಗಲಿದೆ

ಬೆಳಗಿನ ಜಾವದಲ್ಲಿ ಬೀಳುವ ಕನಸುಗಳು ನನಸಾಗುತ್ತವೆ ಎನ್ನುವ ಮಾತನ್ನು ನೀವು ಕೇಳಿರಬಹುದು. ಮಲಗಿದಾಗ ಕನಸು ಬೀಳುವುದು ಸಾಮಾನ್ಯ, ಆದರೆ ಕನಸಿನಲ್ಲಿ ಈ ಪ್ರಾಣಿಗಳು ಪದೇ ಪದೇ ಕಾಣಿಸಿಕೊಂಡರೆ ನಿಮ್ಮ ಅದೃಷ್ಟ ಬದಲಾಗಲಿದೆ ಎಂದರ್ಥ.

Swapna Shastra: ಕನಸಿನಲ್ಲಿ ಈ ಪ್ರಾಣಿಗಳು ಪದೇ ಪದೇ ಕಾಣಿಸಿಕೊಂಡರೆ ನಿಮ್ಮ ಅದೃಷ್ಟವು ಬದಲಾಗಲಿದೆ
DreamImage Credit source: Sleepopolis
Follow us
TV9 Web
| Updated By: ನಯನಾ ರಾಜೀವ್

Updated on:Sep 29, 2022 | 12:11 PM

ಬೆಳಗಿನ ಜಾವದಲ್ಲಿ ಬೀಳುವ ಕನಸುಗಳು ನನಸಾಗುತ್ತವೆ ಎನ್ನುವ ಮಾತನ್ನು ನೀವು ಕೇಳಿರಬಹುದು. ಮಲಗಿದಾಗ ಕನಸು ಬೀಳುವುದು ಸಾಮಾನ್ಯ, ಆದರೆ ಕನಸಿನಲ್ಲಿ ಈ ಪ್ರಾಣಿಗಳು ಪದೇ ಪದೇ ಕಾಣಿಸಿಕೊಂಡರೆ ನಿಮ್ಮ ಅದೃಷ್ಟ ಬದಲಾಗಲಿದೆ ಎಂದರ್ಥ.

ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಕಾಣುವ ವಿಷಯಗಳು ನಿಮಗೆ ಮುಂಬರುವ ಭವಿಷ್ಯದ ಸೂಚನೆಯನ್ನು ನೀಡುತ್ತದೆ. ಅನೇಕ ಬಾರಿ ನಾವು ನಮ್ಮ ಕನಸಿನಲ್ಲಿ ಅದೇ ವಿಷಯವನ್ನು ಮತ್ತೆ ಮತ್ತೆ ನೋಡುತ್ತೇವೆ, ಅದು ಬಹಳಷ್ಟು ಬಾರಿ ಕಂಡ ನಂತರ ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದುಬಿಡುತ್ತದೆ.

ಆದರೆ ಪ್ರತಿ ಕನಸು ಏನನ್ನಾದರೂ ಹೇಳುತ್ತದೆ ಎಂದು ನಿಮಗೆ ತಿಳಿದಿದೆಯೇ, ಅಂದರೆ, ಪ್ರತಿ ಕನಸಿನ ಹಿಂದೆ ಕೆಲವು ಅರ್ಥಗಳು ಅಡಗಿರುತ್ತವೆ. ಕನಸಿನಲ್ಲಿ ಕೆಲವು ಪ್ರಾಣಿಗಳನ್ನು ನೋಡುವುದು ತುಂಬಾ ಮಂಗಳಕರವಾಗಿದೆ. ಕನಸಿನಲ್ಲಿ ಯಾವ ಪ್ರಾಣಿಯನ್ನು ನೋಡಿದರೆ ಶುಭ ಇಲ್ಲಿದೆ ಮಾಹಿತಿ.

ಹಸುವನ್ನು ಕಾಣುವುದು ಹಿಂದೂ ಧರ್ಮದಲ್ಲಿ ಗೋವಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ ಮತ್ತು ಒಬ್ಬ ವ್ಯಕ್ತಿಯು ಕನಸಿನಲ್ಲಿ ಹಸುವನ್ನು ನೋಡಿದರೆ ಅದು ಮಂಗಳಕರ ಸಂಕೇತವಾಗಿದೆ. ಕನಸಿನಲ್ಲಿ ಹಸುವನ್ನು ನೋಡುವುದು ಎಂದರೆ ದೇವರು ಆ ವ್ಯಕ್ತಿಯ ಮೇಲೆ ತನ್ನ ಆಶೀರ್ವಾದವನ್ನು ನೀಡಲಿದ್ದಾನೆ, ಮುಂದಿನ ದಿನಗಳಲ್ಲಿ, ಅವರು ಎಲ್ಲದರಲ್ಲೂ ಯಶಸ್ವಿಯಾಗುತ್ತಾರೆ.

ಕನಸಿನಲ್ಲಿ ಆನೆ ಕಾಣಿಸುವುದು ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಆನೆಯನ್ನು ನೋಡಿದರೆ, ಅವನ ಒಳ್ಳೆಯ ಸಮಯವು ಪ್ರಾರಂಭವಾಗಲಿದೆ ಎಂದರ್ಥ. ಈ ಕನಸು ವ್ಯಕ್ತಿಯು ಸಂಪತ್ತು ಮತ್ತು ಐಶ್ವರ್ಯ ಹೆಚ್ಚುವ ಸೂಚನೆಯನ್ನು ನೀಡುತ್ತದೆ. ಶೀಘ್ರದಲ್ಲೇ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.

ಕನಸಿನಲ್ಲಿ ಗೂಬೆ ಕಾಣಿಸಿದರೆ ಏನಾಗುತ್ತೆ? ಅನೇಕ ಬಾರಿ ಗೂಬೆಗಳು ಕನಸಿನಲ್ಲಿಯೂ ಕಾಣಿಸಿಕೊಳ್ಳುತ್ತವೆ. ನಿಮ್ಮ ಕನಸಿನಲ್ಲಿ ಗೂಬೆಗಳನ್ನು ಕಂಡಿದ್ದರೆ, ನಿಮ್ಮ ಜೀವನದಲ್ಲಿ ಸಂಪತ್ತು ಹೆಚ್ಚಲಿದೆ ಎಂದು ಅರ್ಥಮಾಡಿಕೊಳ್ಳಿ. ಲಕ್ಷ್ಮಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿದೆ.

ಕನಸಿನಲ್ಲಿ ಹಾವು ಕಾಣಿಸಿದರೆ ಕನಸಿನಲ್ಲಿ ಕಪ್ಪು ಹಾವು ಕಂಡರೆ ಶುಭ ಮತ್ತು ಮುಂದಿನ ದಿನಗಳಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ ಎಂದರ್ಥ. ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ.

ಮೊಲಗಳು ಕಂಡರೆ ವ್ಯಕ್ತಿಯು ಕನಸಿನಲ್ಲಿ ಮೊಲವನ್ನು ನೋಡಿದರೆ, ಅದು ಮಂಗಳಕರ ಚಿಹ್ನೆ ಎಂದು ಅರ್ಥಮಾಡಿಕೊಳ್ಳಿ. ಇದರರ್ಥ ನಿಮ್ಮ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಮತ್ತು ನೀವು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:06 pm, Thu, 29 September 22

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’