AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mouth Ulcers: ಬಾಯಿ ಹುಣ್ಣು ವಾರವಾದರೂ ವಾಸಿಯಾಗುತ್ತಿಲ್ಲವೇ? ಈ ಟಿಪ್ಸ್ ಬಳಸಿ, ಬೇಗ ಗುಣವಾಗುತ್ತೆ

ಬಾಯಿಹುಣ್ಣಿಗೆ ( Mouth Ulcers) ಹಲವು ಕಾರಣಗಳಿವೆ, ಕೆಲವೊಮ್ಮೆ ಹೊಟ್ಟೆ ಶುದ್ಧಿಯಿಲ್ಲದಿದ್ದರೂ ಇದು ಕಾಣಿಸಿಕೊಳ್ಳುತ್ತದೆ, ಇನ್ನೂ ಕೆಲವೊಮ್ಮೆ ದೇಹದಲ್ಲಿ ಉಷ್ಣಾಂಶ ಏರಿಕೆಯಾದಾಗ, ನಂಜು ಹೆಚ್ಚಾದಾಗ ಬಾಯಿ ಹುಣ್ಣು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

Mouth Ulcers: ಬಾಯಿ ಹುಣ್ಣು ವಾರವಾದರೂ ವಾಸಿಯಾಗುತ್ತಿಲ್ಲವೇ? ಈ ಟಿಪ್ಸ್ ಬಳಸಿ, ಬೇಗ ಗುಣವಾಗುತ್ತೆ
Mouth Ulcers
TV9 Web
| Edited By: |

Updated on:Sep 25, 2022 | 10:44 AM

Share

ಬಾಯಿಹುಣ್ಣಿಗೆ ( Mouth Ulcers) ಹಲವು ಕಾರಣಗಳಿವೆ, ಕೆಲವೊಮ್ಮೆ ಹೊಟ್ಟೆ ಶುದ್ಧಿಯಿಲ್ಲದಿದ್ದರೂ ಇದು ಕಾಣಿಸಿಕೊಳ್ಳುತ್ತದೆ, ಇನ್ನೂ ಕೆಲವೊಮ್ಮೆ ದೇಹದಲ್ಲಿ ಉಷ್ಣಾಂಶ ಏರಿಕೆಯಾದಾಗ, ನಂಜು ಹೆಚ್ಚಾದಾಗ ಬಾಯಿ ಹುಣ್ಣು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.  ಬಾಯಿಯಲ್ಲಿ ಗುಳ್ಳೆ ಕಾಣಿಸಿಕೊಂಡಾಗ ತಿನ್ನಲು, ಕುಡಿಯಲು ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ. ಈ ಮನೆಮದ್ದುಗಳನ್ನು ಅನುಸರಿಸಿದರೆ ಬಹುಬೇಗ ಬಾಯಿಹುಣ್ಣನ್ನು ಕಡಿಮೆ ಮಾಡಬಹುದು.

ಹರ್ಪಿಸ್​ ಸಿಂಪ್ಲೆಕ್ಸ್​ (herpes simplex) ಎನ್ನುವ ವೈರಸ್​ನಿಂದ ತುಟಿಯ ಒಳಗೆ ಉಂಟಾಗುವ ಗುಳ್ಳೆಗಳು ಕ್ರಮೇಣ ಹುಣ್ಣುಗಳಾಗಿ ಕಾಡುತ್ತವೆ. ವಿಪರೀತ ನೋವು ಮತ್ತು ಉರಿಯಿಂದ ಕೂಡಿದ ಹುಣ್ಣಗಳು ನೋವಿನ ಭಯಾನಕತೆಯನ್ನು ತೋರಿಸಬಿಡುತ್ತವೆ.

ಕೊನೇ ಪಕ್ಷ ನೀರು ಕುಡಿಯಲೂ ಕಷ್ಟ ಪಡುವಂತೆ ಮಾಡುವ ಬಾಯಿ ಹುಣ್ಣುಗಳಿಗೆ ಸರಿಯಾದ ಚಿಕಿತ್ಸೆ ಅತ್ಯಗತ್ಯ. ಅದಕ್ಕೆ ನೀವು ವೈದ್ಯರ ಬಳಿಯೇ ಹೋಗಬೇಕೆಂದಿಲ್ಲ. ಮನೆಮದ್ದಿನ ಮೂಲಕವೂ ಬಾಯಿ ಹುಣ್ಣುಗಳನ್ನು ಗುಣಪಡಿಸಿಕೊಳ್ಳಬಹುದು.​

ಬೆಳ್ಳುಳ್ಳಿಯನ್ನು ಬಳಸಿ ಬೆಳ್ಳುಳ್ಳಿಯಲ್ಲಿ ಆ್ಯಂಟಿಬಯೋಟಿಕ್ ಗುಣವಿದ್ದು, ಇದನ್ನು ಬಳಸುವುದರಿಂದ ಅಲ್ಸರ್ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ಬಳಸಲು, ಮೊದಲನೆಯದಾಗಿ, ಕೆಲವು ಬೆಳ್ಳುಳ್ಳಿ ಮೊಗ್ಗುಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಪೇಸ್ಟ್ ಮಾಡಿ. ನಂತರ ಅದನ್ನು ಗುಳ್ಳೆಯ ಮೇಲೆ ಹಚ್ಚಿ. ಹೀಗೆ ಮಾಡುವುದರಿಂದ ಸಾಕಷ್ಟು ಪರಿಹಾರ ಸಿಗುತ್ತದೆ.

ಟೀ ಟ್ರೀ ಎಣ್ಣೆ ಟೀ ಟ್ರೀ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ, ಇದು ಬಾಯಿಯ ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಟೀ ಟ್ರೀ ಎಣ್ಣೆಯನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ತುಪ್ಪವನ್ನು ಬಳಸಿ ದೇಸಿ ತುಪ್ಪವನ್ನು ಬಳಸುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ. ಹುಣ್ಣುಗಳಿಗೆ ತುಪ್ಪವು ತುಂಬಾ ಪ್ರಯೋಜನಕಾರಿಯಾಗಿದೆ, ಇದು ಬಳಸಿದ ಕೆಲವೇ ದಿನಗಳಲ್ಲಿ ಹುಣ್ಣುಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಇದನ್ನು ಮಾಡಲು, ರಾತ್ರಿ ಮಲಗುವ ಮೊದಲು, ಬಾಯಿ ಹುಣ್ಣುಗಳ ಮೇಲೆ ದೇಸಿ ತುಪ್ಪವನ್ನು ಲೇಪಿಸಿ, ನಂತರ ಬೆಳಿಗ್ಗೆ ಎದ್ದು ಅದನ್ನು ತೊಳೆಯಿರಿ.

ಜೇನುತುಪ್ಪ: ಆ್ಯಂಟಿ ಅಕ್ಸಿಡೆಂಟ್​ ಗುಣಗಳನ್ನು ಹೊಂದಿರುವ ಜೇನುತುಪ್ಪ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಸಹಾಯಕವಾಗಿದೆ. ಹೀಗಾಗಿ ನಿಮ್ಮ ಬಾಯಿ ಹುಣ್ಣಿನ ಸಮಸ್ಯೆಗೂ ಉತ್ತಮ ಪರಿಹಾರ ನೀಡಬಲ್ಲದು. ಬಾಯಿ ಹುಣ್ಣಿನ ಮೇಲೆ ಜೇನು ತುಪ್ಪವನ್ನು ಸವರಿದರೆ ಒಂದೆರಡು ದಿನಗಳಲ್ಲಿ ಹುಣ್ಣು ಕ್ರಮೇಣವಾಗಿ ಕಡಿಮೆಯಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:42 am, Sun, 25 September 22

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್