ಕೈ ತುಂಬಾ ಆದಾಯ, ಐಷಾರಾಮಿ ಬದುಕು ಎಲ್ಲರ ಕನಸಾಗಿರುತ್ತದೆ. ಆದರೆ ಕೆಲವರು ಮಾತ್ರ ಶ್ರೀಮಂತ ವ್ಯಕ್ತಿಯಾಗಿ ಜೀವನ ನಡೆಸುತ್ತಾರೆ. ಇನ್ನು ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ ಕೂಡ ಕೈಯಲ್ಲಿ ಒಂದು ರೂಪಾಯಿ ಉಳಿಯುವುದಿಲ್ಲ. ಈಗಿರುವಂತೆ ಬದುಕಿದರೆ ಹಣವನ್ನು ಸಂಪಾದಿಸಲು ಸಾಧ್ಯವೇ ಇಲ್ಲ. ಬುದ್ಧಿವಂತಿಕೆಯನ್ನು ಬಸಿ ಸವಾಲುಗಳನ್ನು ಎದುರಿಸಿ ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು. ಯಶಸ್ವಿ ವ್ಯಕ್ತಿಯಾಗಲು ಹಾಗೂ ಕೈ ತುಂಬಾ ಆದಾಯವು ನಿಮ್ಮದಾಗಬೇಕಾದರೆ ಈ ಕೆಲವು ರಹಸ್ಯಗಳು ತಿಳಿದಿದ್ದರೆ ಒಳ್ಳೆಯದು.
Ad
ಸಾಂದರ್ಭಿಕ ಚಿತ್ರ
Follow us on
ದುಡ್ಡು (Money)ಯಾರಿಗೆ ತಾನೇ ಬೇಡ ಹೇಳಿ? ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ. ಈಗೇನಿದ್ದರೂ ದುಡ್ಡಿನ ಮೇಲೆ ಎಲ್ಲವೂ ನಿಂತಿದೆ. ಕೈಯಲ್ಲಿ ಒಂದಷ್ಟು ಹಣಯಿದ್ದರೆ ಎಲ್ಲಾ ಕೆಲಸಗಳು ಆಗುತ್ತದೆ. ದುಡ್ಡಿದವನಿಗೆ ಮಾತ್ರ ಗೌರವ, ಮರ್ಯಾದೆ ಸಿಗುತ್ತದೆ. ಹಾಗಂತ ಎಲ್ಲರಿಗೂ ಕೂಡ ದುಡ್ಡು ಮಾಡಲು ಸಾಧ್ಯವಿಲ್ಲ. ಹಣ ಸಂಪಾದನೆ ಮಾಡುವುದು ಅನೇಕರಿಗೆ ನಿಗೂಢ ರಹಸ್ಯವಾದ್ರೆ, ಕೆಲವರಿಗೆ ಆ ಟ್ರಿಕ್ಸ್ (Tricks) ಚೆನ್ನಾಗಿ ಗೊತ್ತಿರುತ್ತದೆ. ದುಡ್ಡು ಮಾಡೋಕೆ ಹಗಲು ರಾತ್ರಿ ಕಷ್ಟ ಪಡಬೇಕು ಎನ್ನುವವರ ನಡುವೆ ಈ ಕೆಲವು ರಹಸ್ಯಗಳು ತಿಳಿದಿದ್ದರೆ ಹಣವು ಸಲೀಸಾಗಿ ಹರಿದು ಬರುತ್ತದೆ.
ಬಜೆಟ್ ಹೊಂದಿಸಿಕೊಳ್ಳಿ : ನಿಮ್ಮ ಆರ್ಥಿಕ ಪ್ರಗತಿಯ ಮೂಲಾಧಾರವೇ ಈ ಬಜೆಟ್ ಹೊಂದಿಸಿಕೊಳ್ಳುವುದು. ನೀವು ದುಡಿದ ಹಣವು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಅದಕ್ಕೆ ಅನುಗುಣವಾಗಿ ಬಜೆಟ್ ಹೊಂದಿಸಿಕೊಳ್ಳಿ. ಈ ಮೂಲಕ ಗುರಿಗಳಿಗೆ ಹೊಂದಿಕೆಯಾಗುವ ಮಾರ್ಗಸೂಚಿಯನ್ನು ರಚಿಸಬಹುದು. ಈ ಬಜೆಟ್ ಹೊಂದಿಕೆಯೂ ಹಣ ಉಳಿತಾಯ ಮಾಡುವುದು ಸಹಾಯ ಮಾಡುತ್ತದೆ.
ವೆಚ್ಚಗಳನ್ನು ಟ್ರ್ಯಾಕ್ ಮಾಡಿ : ಕೆಲವರ ಕೈಯಲ್ಲಿ ತಿಂಗಳ ಕೊನೆಯಲ್ಲಿ ಒಂದು ರೂಪಾಯಿ ಕೂಡ ಉಳಿಯಲ್ಲ. ದುಡಿದ ಹಣವು ಎಲ್ಲಿ ಹೋಯಿತು ಎನ್ನುವುದೇ ತಿಳಿಯುವುದೇ ಇಲ್ಲ. ಹೀಗಾಗಿ ವೆಚ್ಚಗಳನ್ನು ಟ್ರ್ಯಾಕ್ ಮಾಡುವುದು ಗೊತ್ತಿರಬೇಕು. ತಿಂಗಳ ಖರ್ಚುಗಳನ್ನು ಟ್ರ್ಯಾಕ್ ಮಾಡಲು ನೀವು ಬಜೆಟ್ ಸಾಫ್ಟ್‌ವೇರ್ ಅಥವಾ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಇದು ನಿಮ್ಮ ಹಣ ಎಲ್ಲಿ ಖರ್ಚಾಯಿತು, ಆ ಹಣವನ್ನು ಹೇಗೆ ಉಳಿಸಬಹುದು ಎನ್ನುವುದು ತಿಳಿಯುತ್ತದೆ. ವೆಚ್ಚಗಳನ್ನು ಟ್ರ್ಯಾಕ್ ಮಾಡುವುದರಿಂದ ಬೇಡದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.
ತ್ವರಿತ ಹೂಡಿಕೆ ತಂತ್ರಗಳು : ಹೆಚ್ಚಿನವರಿಗೆ ಹೆಚ್ಚು ಆದಾಯ ಗಳಿಸಬೇಕು ಎನ್ನುವುದು ಇರುತ್ತದೆ. ಆದರೆ ಹೂಡಿಕೆ ಮಾಡುವ ತಂತ್ರಗಳ ಬಗ್ಗೆ ತಿಳಿದಿರುವುದಿಲ್ಲ. ಆದಾಯವನ್ನು ಹೆಚ್ಚಿಸಲು ಹೂಡಿಕೆ ಮಾಡುವುದು ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ ರಿಯಲ್ ಎಸ್ಟೇಟ್, ಇಟಿಎಫ್‌ಗಳು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯವಚ್ ಹೆಚ್ಚಿಸಿಕೊಳ್ಳಬಹುದು.
ಆದಾಯದ ಮೂಲ ಹೆಚ್ಚಿಸಿ : ಆದಾಯ ಹೆಚ್ಚಿಸಲು ಒಂದೇ ಆದಾಯದ ಮೂಲವನ್ನು ಅವಲಂಬಿಸಿರದೇ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಆದಾಯ ಮೂಲವನ್ನು ಹೊಂದುವುದು. ಇದು ಆರ್ಥಿಕ ಭದ್ರತೆಯನ್ನು ಸೃಷ್ಟಿಸಿ ಹಣವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿ ಆದಾಯ ಗಳಿಸಲು ಡಿಜಿಟಲ್ ಉತ್ಪನ್ನಗಳನ್ನು ರಚಿಸುವುದು, ಲಾಭಾಂಶ ಪಾವತಿಸುವ ಷೇರುಗಳಲ್ಲಿ ಹೂಡಿಕೆ ಮಾಡುವುದು. ಯೂಟ್ಯೂಬ್ ಚಾನೆಲನ್ನು ಪ್ರಾರಂಭಿಸುವುದು, ಈ ಮೂಲಕ ಪ್ರತಿಭೆ ಅಥವಾ ಹವ್ಯಾಸಗಳನ್ನು ಬಳಸಿಕೊಳ್ಳುವುದು ಉತ್ತಮ.