
ನಟಿ ಸಮಂತಾ ರುತ್ ಪ್ರಭು (Samantha ruth prabhu) ತಮ್ಮ ನಟನಾ ಕೌಶಲ್ಯಕ್ಕೆ ಮಾತ್ರವಲ್ಲದೆ ಫಿಟ್‌ನೆಸ್ ವಿಚಾರದಲ್ಲೂ ಸಖತ್ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ದೇಹ ಸೌಂದರ್ಯ, ಫಿಟ್‌ನೆಸ್ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮದಿಂದ ಹಿಡಿದು ಆಹಾರ ಪದ್ಧತಿಯವರೆಗೆ ಎಲ್ಲದರ ಬಗ್ಗೆಯೂ ಹೆಚ್ಚಿನ ಗಮನ ಹರಿಸುತ್ತಾರೆ. ಅದರಲ್ಲೂ ದಿನವಿಡೀ ಫ್ರೆಶ್ ಮತ್ತು ಸಕ್ರಿಯವಾಗಿರಲು ಸಮಂತಾ ಪವರ್ ಮಾರ್ನಿಂಗ್ ರೂಟೀನ್ ಅನುಸರಿಸುತ್ತಾರೆ. ದಿನದ ಆರಂಭ ಚೆನ್ನಾಗಿದ್ದರೆ, ಆ ಸಂಪೂರ್ಣ ದಿನವೇ ಸಕಾರಾತ್ಮಕವಾಗಿರುತ್ತದೆ ಎಂಬ ಮಾತಿನಂತೆ ಸಮಂತಾ ಬೆಳಗಿನ ದಿನಚರಿಯಲ್ಲಿ ಎಂಟು ಪವರ್‌ಫುಲ್ ಅಭ್ಯಾಸಗಳನ್ನು ಪಾಲಿಸುತ್ತಾರೆ. ಈ ಅಭ್ಯಾಸಗಳು ದಿನವಿಡೀ ಉಲ್ಲಾಸ ಮತ್ತು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಅಲ್ಲದೆ ನೀವು ಸಹ 21 ದಿನಗಳ ಕಾಲ ಈ ಬೆಳಗಿನ ದಿನಚರಿಯನ್ನು ಪಾಲಿಸಿದರೆ ಹೊಟ್ಟೆಯ ಕೊಬ್ಬನ್ನು ಕರಗಿಸಿ ಆರೋಗ್ಯಕರವಾಗಿರಬಹುದು.
ನಟಿ ಸಮಂತಾ ಹೇಳುವಂತೆ ನಾವು ಎಚ್ಚರವಾದಾಗ, ನಮ್ಮ ದೇಹವು ಸ್ವಾಭಾವಿಕವಾಗಿ ಹೆಚ್ಚಿನ ಮಟ್ಟದ ಒತ್ತಡದ ಹಾರ್ಮೋನುಗಳನ್ನು ಹೊಂದಿರುತ್ತದೆ. ಅದು ಸಾಮಾನ್ಯ. ಆದರೆ ನಾವು ಎಚ್ಚರವಾದ ನಂತರ ಏನು ಮಾಡುತ್ತೇವೆ ಎಂಬುದು ಅತ್ಯಂತ ಮುಖ್ಯ. ಎದ್ದ ತಕ್ಷಣ ಫೋನ್ ನೋಡುವುದು, ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡುವುದು ಮಾಡಿದರೆ ಆ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆ. ಇದು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಇದರಿಂದ ದಿನವಿಡೀ ಕೆಲಸದ ಮೇಲೆ ಗಮನ ಹರಿಸಲು ಕಷ್ಟಸಾಧ್ಯವಾಗುತ್ತದೆ. ಹಾಗಾಗಿ ಕನಿಷ್ಠ 21 ದಿನಗಳ ಕಾಲ ಈ ಬೆಳಗಿನ ದಿನಚರಿಯನ್ನು ಅನುಸರಿ ನೋಡಿ, ಖಂಡಿತವಾಗಿಯೂ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ ಎಂದು ಹೇಳಿದ್ದಾರೆ.
ನಟಿ ಸಮಂತಾ ರುತ್ ಪ್ರಭು ಅವರು ಬೆಳಗಿನ ದಿನಚರಿಯಲ್ಲಿ ಪಾಲಿಸುವ ಎಂಟು ನಿರ್ದಿಷ್ಟ ಅಭ್ಯಾಸಗಳು ಹೊಟ್ಟೆ ಉಬ್ಬರ ಕಡಿಮೆ ಮಾಡಲು ಮತ್ತು ದೇಹದ ನೈಸರ್ಗಿಕ ಸ್ವ-ಗುಣಪಡಿಸುವ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುವುದಲ್ಲದೆ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನೂ ಸುಧಾರಿಸಲು ಸಹಕಾರಿಯಾಗಿದೆ.
ಇದನ್ನೂ ಓದಿ: ದಾಳಿಂಬೆ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯಲ್ಲೂ ಇವೆ ಸಾಕಷ್ಟು ಪ್ರಯೋಜನ
ನಿಮ್ಮ ದಿನವನ್ನು ಸರಿಯಾಗಿ ಪ್ರಾರಂಭಿಸುವುದರಿಂದ ಅದು ನಿಮ್ಮ ನಿಮ್ಮ ಇಡೀ ದಿನ ಮತ್ತು ಕೆಲಸದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ವ್ಯಾಯಾಮದಿಂದ ಹಿಡಿದು ಆಹಾರಕ್ರಮದವರೆಗೆ ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದರೂ, ಹೊಟ್ಟೆಯ ಕೊಬ್ಬನ್ನು ಕರಗಿಸಲು ಹೆಣಗಾಡುತ್ತಿದ್ದರೆ, ನಿಮ್ಮ ಚರ್ಮದಲ್ಲಿ ಜುಮ್ಮೆನಿಸುವಿಕೆ ಸಂವೇದನೆಗಳನ್ನು ಅನುಭವಿಸುತ್ತಿದ್ದರೆ ಅಥವಾ ಬೆಳಗ್ಗೆ ಎದ್ದಾಗ ಮುಖ ಊದಿಕೊಂಡಿದ್ದರೆ ಇವೆಲ್ಲವನ್ನು ಸರಿಪಡಿಸಲು ಪವರ್ ಮಾರ್ನಿಂಗ್ ರುಟೀನ್ ಪಾಲಿಸಿ ಎನ್ನುತ್ತಾರೆ ನಟಿ ಸಮಂತಾ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 am, Sun, 12 April 26