ಬಾತ್‌ರೂಮ್‌ ಬಕೆಟ್‌ಗಳಲ್ಲಿನ ಕಲೆ, ಕೊಳೆಯನ್ನು ತೊಡೆದು ಹಾಕಲು ಈ ಸಿಂಪಲ್ ಸಲಹೆ ಪಾಲಿಸಿ

ಬಾತ್‌ರೂಮ್‌ನಲ್ಲಿರುವ ಬಕೆಟ್‌ಗಳನ್ನು ಸ್ವಚ್ಛವಾಗಿಡುವುದು ತುಂಬಾನೇ ಮುಖ್ಯ ಏಕೆಂದರೆ ಕಲೆಗಟ್ಟಿದ ಬಕೆಟ್‌ಗಳು ಗಲೀಜಾಗಿ ಕಾಣುವುದು ಮಾತ್ರವಲ್ಲದೆ, ಇವುಗಳಲ್ಲಿ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಜೀವಿಗಳು ಸಂಗ್ರಹವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಕೆಟ್‌ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ. ಅದರಲ್ಲೂ ಈ ಟಿಪ್ಸ್‌ಗಳನ್ನು ಪಾಲಿಸಿದರೆ ಬಕೆಟ್‌ನಲ್ಲಿ ಅಂಟಿರುವ ಕಲೆ, ಕೊಳೆಗಳನ್ನು ಸುಲಭವಾಗಿ ಹೋಗಲಾಡಿಬಹುದು.

ಬಾತ್‌ರೂಮ್‌ ಬಕೆಟ್‌ಗಳಲ್ಲಿನ  ಕಲೆ, ಕೊಳೆಯನ್ನು ತೊಡೆದು ಹಾಕಲು ಈ ಸಿಂಪಲ್ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Aug 27, 2025 | 5:36 PM

ಸಾಮಾನ್ಯವಾಗಿ ಬಾತ್‌ರೂಮ್‌ಗಳಲ್ಲಿ ಪ್ಲಾಸ್ಟಿಕ್‌ ಬಕೆಟ್‌ (bathroom buckets) ಮತ್ತು ಮಗ್‌ಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಆದ್ರೆ ಈ ಪ್ಲಾಸ್ಟಿಕ್‌ ಬಕೆಟ್‌ಗಳಲ್ಲಿ ಬಹಳ ಬೇಗ ಕಲೆ ಕಟ್ಟುತ್ತವೆ. ಎಷ್ಟೇ ಸ್ವಚ್ಛಗೊಳಿಸಿದರೂ ಇವುಗಳಲ್ಲಿ ಪದೇ ಪದೇ ಪಾಚಿಗಟ್ಟುತ್ತವೆ. ಹೀಗೆ ಕಲೆಗಟ್ಟಿದ ಬಕೆಟ್‌ಗಳು ನೋಡಲು ಗಲೀಜಾಗಿ ಕಾಣುವುದು ಮಾತ್ರವಲ್ಲದೆ, ಇವುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ಜೀವಿಗಳು ಸಂಗ್ರಹವಾಗಿ ಅರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಆದ್ದರಿಂದ ಸ್ನಾನಗೃಹದ ಬಕೆಟ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಅದರಲ್ಲೂ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಬಹಳ ಸುಲಭವಾಗಿ ಕಲೆಯನ್ನು ತೊಡೆದುಹಾಬಹುದು ಮತ್ತು ಬಕೆಟ್‌ಗಳು ಸಹ ಫಳ ಪಳ ಹೊಳೆಯುತ್ತವೆ ನೋಡಿ.

ಬಾತ್‌ರೂಮ್‌ ಬಕೆಟ್‌ಗಳ ಕಲೆಯನ್ನು ತೊಡೆದು ಹಾಕಲು ಈ ಸಲಹೆ ಪಾಲಿಸಿ:

ವಿನೆಗರ್‌ ಮತ್ತು ಅಡುಗೆ ಸೋಡಾ: ವಿನೆಗರ್‌ ಮತ್ತು ಅಡುಗೆ ಸೋಡಾದ ಸಹಾಯದಿಂದ ಬಾತ್‌ರೂಮ್‌ ಬಕೆಟ್‌ಗಳಲ್ಲಿ ಅಂಟಿರುವ ಕಲೆಗಳನ್ನು ಸುಲಭವಾಗಿ ತೊಡೆದುಹಾಕಬಹುದು. ಈ ಎರಡೂ ವಸ್ತುಗಳು ನೈಸರ್ಗಿಕ ಕ್ಲೀನರ್‌ಗಳಾಗಿದ್ದು, ಇವುಗಳು ಸುಲಭವಾಗಿ ಕಲೆಗಳನ್ನು ತೊಡೆದುಹಾಕುತ್ತವೆ. ಇದಕ್ಕಾಗಿ, ಮೊದಲು ಒಂದು ಕಪ್ ವಿನೆಗರ್ ಮತ್ತು ಎರಡು ಚಮಚ ಅಡುಗೆ ಸೋಡಾವನ್ನು ಬಕೆಟ್‌ಗೆ ಸುರಿಯಿರಿ. ನಂತರ ಅದಕ್ಕೆ ಬೆಚ್ಚಗಿನ ನೀರಿನಿಂದ ತುಂಬಿಸಿ. ಅರ್ಧಗಂಟೆಯ ಬಳಿಕ ಬ್ರಷ್‌ ಸಹಾಯದಿಂದ ಚೆನ್ನಾಗಿ ತೊಳೆಯಿರಿ.

ನಿಂಬೆ ಮತ್ತು ಉಪ್ಪು: ನಿಂಬೆ ಮತ್ತು ಉಪ್ಪಿನ ಸಹಾಯದಿಂದಲೂ ಬಕೆಟ್‌ ಮೇಲಿನ ಕಲೆಯನ್ನು ಹೋಗಲಾಡಿಸಬಹುದು. ಇದಕ್ಕಾಗಿ ಮೊದಲಿಗೆ ನಿಂಬೆಹಣ್ಣನ್ನು ಕತ್ತರಿಸಿ, ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಅದನ್ನು ಚೆನ್ನಾಗಿ ಬಕೆಟ್‌ಗೆ ತಿಕ್ಕಿಕೊಳ್ಳಿ. ಸ್ವಲ್ಪ ಹೊತ್ತು ಅದನ್ನು ಹಾಗೆಯೇ ಬಿಟ್ಟು, ಬ್ರಷ್‌ ಸಹಾಯದಿಂದ ಸ್ವಚ್ಛಗೊಳಿಸಿ. ಆಗ ಬಕೆಟ್‌ನಲ್ಲಿ ಅಂಟಿಕೊಂಡ ಕಲೆಗಳು ಸುಲಭವಾಗಿ ಹೋಗುತ್ತವೆ.

ಇದನ್ನೂ ಓದಿ
ವಾಶ್‌ ಬೇಸಿನ್‌ನಲ್ಲಿ ಸಣ್ಣ ರಂಧ್ರ ಏಕಿರುತ್ತವೆ ಗೊತ್ತಾ?
ನಾವು ಧರಿಸುವ ಕೆಲ ಬಟ್ಟೆಗಳು ಒಗೆದ ನಂತರ ಕುಗ್ಗುವುದೇಕೆ?
ಈ ಎರಡು ಅಂಶಗಳಿರುವ ಲಿಪ್‌ಸ್ಟಿಕ್‌ ಮುಟ್ಟಿನ ತೊಂದರೆಗೆ ಕಾರಣವಾಗಬಹುದು
ಮನೆಗೆ ಬಂದಂತಹ ಅತಿಥಿಗಳಿಗೆ ಮೊದಲು ನೀರು ಕೊಟ್ಟು ಸತ್ಕರಿಸುವುದೇಕೆ ಗೊತ್ತಾ?

ಇದನ್ನೂ ಓದಿ: ವಾಶ್‌ ಬೇಸಿನ್‌ನಲ್ಲಿ ಸಣ್ಣ ರಂಧ್ರ ಏಕಿರುತ್ತವೆ, ಇದರ ಕಾರ್ಯವಾದರೂ ಏನು?

ಟೂತ್‌ಪೇಸ್ಟ್: ಬಕೆಟ್‌ ಮೇಲಿನ ಹಳದಿಗಟ್ಟಿದ ಕಲೆಗಳು ಹೋಗುತ್ತಿಲ್ಲ ಎಂದು ಚಿಂತೆಯಾಗಿದ್ಯಾ ಹಾಗಿದ್ರೆ ನೀವು ಟೂತ್‌ಪೇಸ್ಟ್‌ನಿಂದ ಈ ಕಲೆಗಳನ್ನು ಸುಲಭವಾಗಿ ತೊಡೆದುಹಾಕಬಹುದು. ಅದಕ್ಕಾಗಿ ಮೊದಲಿಗೆ ಕಲೆಗಳಿರುವ ಜಾಗಕ್ಕೆ ಟೂತ್‌ಪೇಸ್ಟ್‌ ಹಚ್ಚಿ ಬ್ರಷ್‌ನಿಂತ ತೊಳೆಯಿರಿ. ಈ ಟ್ರಿಕ್ಸ್‌ ಕೂಡ ಕಲೆಯನ್ನು ಹೋಗಲಾಡಿಸಲು ತುಂಬಾನೇ ಸಹಕಾರಿ.

ಬ್ಲೀಚ್‌ ಪೌಡರ್:‌ ಬ್ಲೀಚ್‌ ಪೌಡರ್‌ನಿಂದಲೂ ಬಾತ್‌ರೂಮ್‌ ಬಕೆಟ್‌ಗಳ ಮೇಲಿನ ಕಲೆಯನ್ನು ತೊಡೆದುಹಾಕಬಹುದು. ಇದಕ್ಕಾಗಿ ಅರ್ಧ ಕಪ್‌ ಬ್ಲೀಚ್‌ ಪೌಡರ್‌ ತೆಗೆದುಕೊಂಡು, ಅದನ್ನು ನೀರಿನೊಂದಿಗೆ ಬೆರೆಸಿ, ನಂತರ ಈ ಪೇಸ್ಟನ್ನು ಬಕೆಟ್‌ಗೆ ಹಚ್ಚಿ, ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ಸ್ಕ್ರಬ್‌ ಮಾಡಿ. ಹೀಗೆ ಮಾಡುವುದರಿಂದ ಬಕೆಟ್‌ನಿಂದ ಕೊಳೆ ಬಲು ಬೇಗನೆ ನಿವಾರಣೆಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ