AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಯಶಸ್ಸು ಸಾಧಿಸಬೇಕೆಂದರೆ ಬೆಳಗಿನ ದಿನಚರಿ ಹೀಗಿರಬೇಕು ಎನ್ನುತ್ತಾರೆ ಚಾಣಕ್ಯ

ಪ್ರತಿಯೊಬ್ಬರೂ ಕೂಡ ತಾವು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಬಯಸುತ್ತಾರೆ. ಆದರೆ ಹೆಚ್ಚಿನವರಿಗೆ ಯಶಸ್ಸು ಸಾಧಿಸಲು, ಗುರಿ ತಲುಪಲು ಯೋಜನೆಯನ್ನು ಹೇಗೆ ರೂಪಿಸುವುದು ಎಂದು ತಿಳಿದಿರುವುದಿಲ್ಲ. ಹೀಗಿರುವಾಗ ಯಶಸ್ಸು ಸಾಧಿಸಬೇಕೆಂದರೆ ಏನು ಮಾಡಬೇಕು ಎಂಬುದನ್ನು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ನೀವು ಕೂಡ ಯಶಸ್ಸು ಸಾಧಿಸಲು ಬಯಸಿದರೆ ನಿಮ್ಮ ನಿತ್ಯದ ಬೆಳಗಿನ ದಿನಚರಿ ಹೀಗಿರಲಿ.

Chanakya Niti: ಯಶಸ್ಸು ಸಾಧಿಸಬೇಕೆಂದರೆ ಬೆಳಗಿನ ದಿನಚರಿ ಹೀಗಿರಬೇಕು ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on:Aug 28, 2025 | 9:47 AM

Share

ದಿನದ  ಚೆನ್ನಾಗಿ ಪ್ರಾರಂಭವಾದರೆ, ನಾವು ಇಡೀ ದಿನ ಸಕಾರಾತ್ಮಕವಾಗಿರಬಹುದು, ಎಲ್ಲಾ ಕೆಲಸಗಳು ಸಹ ಪೂರ್ಣಗೊಳ್ಳುತ್ತದೆ. ಅದಕ್ಕಾಗಿಯೇ ಹಿರಿಯರು ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಬೇಕು, ಬೆಳಗಿನ ಸಮಯ ಅತ್ಯಮೂಲ್ಯವಾದದ್ದು, ಅದನ್ನು ವ್ಯರ್ಥ ಮಾಡಬಾರದು ಎಂದು ಹೇಳುವುದು. ಅದರಲ್ಲೂ ಯಶಸ್ಸು ಸಾಧಿಸಬೇಕು, ಜೀವನದಲ್ಲಿ ಮುಂದೆ ಬರಬೇಕು, ಸಮಾಜದಲ್ಲಿ ಸ್ಥಾನಮಾನ ಸಿಗಬೇಕು ಎಂದು ಬಯಸುವವರು ಬೆಳಗಿನ ದಿನಚರಿಯಲ್ಲಿ (Morning routine for success) ಈ ಒಂದಷ್ಟು ಸಲಹೆಗಳನ್ನು ಪಾಲಿಸಬೇಕು. ಇದನ್ನು ನಿತ್ಯ ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಯಶಸ್ಸು ಎನ್ನುವಂತಹದ್ದು ಲಭಿಸುತ್ತದೆ ಎಂದು ಆಚಾರ್ಯ ಚಾಣಕ್ಯರು (Acharya Chanakya) ಹೇಳಿದ್ದಾರೆ. ಹಾಗಿದ್ರೆ ಚಾಣಕ್ಯರು ಹೇಳಿರುವಂತೆ ಯಶಸ್ಸಿಗಾಗಿ ಬೆಳಗಿನ ದಿನಚರಿ ಹೇಗಿರಬೇಕು ಎಂಬುದನ್ನು ನೋಡೋಣ ಬನ್ನಿ.

ಯಶಸ್ಸು ಸಾಧಿಸಲು ಬೆಳಗಿನ ದಿನಚರಿ ಹೀಗಿರಲಿ:

ಬೆಳಗ್ಗೆ ಬೇಗ ಏಳುವುದು: ತಡವಾಗಿ ಮಲಗಿ, ತಡವಾಗಿ ಏಳುವುದು ಆರೋಗ್ಯ ಮತ್ತು ವೃತ್ತಿ ಎರಡಕ್ಕೂ ಹಾನಿಕಾರಕ. ಬೇಗ ಮಲಗುವುದು ಮತ್ತು ಬೇಗ ಏಳುವುದು ಯಶಸ್ಸಿನ ಮೊದಲ ಮೆಟ್ಟಿಲು ಎಂದು ಚಾಣಕ್ಯ ಹೇಳುತ್ತಾರೆ. ಬೆಳಿಗ್ಗೆ ಬೇಗನೆ ಏಳುವುದರಿಂದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಸುಲಭವಾಗುತ್ತದೆ ಮತ್ತು ಬೇಗ ಏಳುವುದರಿಂದ ಜಡತ್ವ ಎನ್ನುವಂತಹದ್ದು ಕೂಡ ಇರುವುದಿಲ್ಲ. ನೀವು ದಿನವಿಡೀ ಉತ್ಪಾದಕತೆಯಿಂದ ಮತ್ತು ಸಕಾರಾತ್ಮಕವಾಗಿರಬಹುದು.

ಯೋಜನೆಗಳನ್ನು ರೂಪಿಸುವುದು: ಚಾಣಕ್ಯನ ಪ್ರಕಾರ, ಬೆಳಿಗ್ಗೆ ಎದ್ದ ನಂತರ, ನೀವು ನಿಮ್ಮ ದಿನವನ್ನು ಯೋಜಿಸಬೇಕು. ತನ್ನ ಇಡೀ ದಿನವನ್ನು ಯೋಜಿಸುವ ವ್ಯಕ್ತಿಯು ತನ್ನ ಗುರಿಗಳನ್ನು ಸಾಧಿಸುವಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ, ಅಲ್ಲದೆ ಈ ಯೋಜನೆಗಳನ್ನು ರೂಪಿಸುವುದರಿಂದ ಅಂದುಕೊಂಡ ಕೆಲಸವನ್ನು ಮುಗಿಸಲು ಸುಲಭವಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.

ಇದನ್ನೂ ಓದಿ
Image
ಶ್ರೀಮಂತರಾಗಲು ಬಯಸುವವರು ಈ ಅಭ್ಯಾಸಗಳನ್ನು ತ್ಯಜಿಸಬೇಕು
Image
ಮಾರ್ನಿಂಗ್ ವಾಕಿಂಗ್‌ ವೇಳೆ ಈ ತಪ್ಪುಗಳನ್ನು ಮಾಡದಿರಿ
Image
ಬೆಳಗ್ಗೆ ಯಾವ ಸಮಯದಲ್ಲಿ ಏಳೋದು ಸೂಕ್ತ?
Image
ಯಶಸ್ಸಿಗಾಗಿ ಯಶಸ್ವಿ ಜನರ ಬೆಳಗಿನ ಈ ಅಭ್ಯಾಸಗಳನ್ನು ತಪ್ಪದೇ ಪಾಲಿಸಿ

ಸಮಯ ನಿರ್ವಹಣೆ: ಸಮಯವು ತುಂಬಾ ಅಮೂಲ್ಯವಾದುದು, ಆದ್ದರಿಂದ ಅದನ್ನು ಬುದ್ಧಿವಂತಿಕೆಯಿಂದ ಬಳಸಬೇಕು ಎಂದು ಚಾಣಕ್ಯರು ಹೇಳುತ್ತಾರೆ. ನೀವು ಮೊದಲೇ ಸಿದ್ಧಪಡಿಸಿದ ಯೋಜನೆಯ ಪ್ರಕಾರ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು. ಯಾವುದೇ ಕೆಲಸವನ್ನು ನಾಳೆಗೆ ಮುಂದೂಡಬಾರದು. ಹೀಗೆ ಮಾಡುವುದರಿಂದ ಒಬ್ಬ ವ್ಯಕ್ತಿಯು ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ನೀವು ಸಕ್ಸಸ್‌ ಆಗ್ಬೇಕಂದ್ರೆ ಯಶಸ್ವಿ ಜನರ ಬೆಳಗಿನ ಈ ಅಭ್ಯಾಸಗಳನ್ನು ತಪ್ಪದೇ ಪಾಲಿಸಬೇಕಂತೆ

ಆರೋಗ್ಯದ ಬಗ್ಗೆ ಕಾಳಜಿ: ಆರೋಗ್ಯದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ ಎಂದು ಚಾಣಕ್ಯ ಹೇಳುತ್ತಾರೆ, ಏಕೆಂದರೆ ಆರೋಗ್ಯದ ಬಗ್ಗೆ ಅಸಡ್ಡೆ ತೋರಿದಾಗ ರೋಗಗಳು ನಮ್ಮನ್ನು ಆವರಿಸುತ್ತದೆ. ಅನಾರೋಗ್ಯಕ್ಕೆ ತುತ್ತಾದರೆ ನಾನು ಅಂದುಕೊಂಡ ಗುರಿಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ದೇಹದಲ್ಲಿ ಶಕ್ತಿ, ಯುಕ್ತಿ ಇದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಹಾಗಾಗಿ ಪ್ರತಿನಿತ್ಯ ಯೋಗ, ವ್ಯಾಯಾಮ ಮಾಡಬೇಕು, ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡಬೇಕು. ಈ ಎಲ್ಲಾ ಆರೋಗ್ಯಕರ ಅಭ್ಯಾಸಗಳು ಖಂಡಿತ ನಿಮಗೆ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:47 am, Thu, 28 August 25