ಕೂದಲು ಉದುರುವಿಕೆಯ ಸಮಸ್ಯೆಗೆ ಗುಡ್‌ಬೈ ಹೇಳಲು ನೀವು ಮಾಡಬೇಕಾದದ್ದು ಇಷ್ಟೆ

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದ್ದು, ಮಾಲಿನ್ಯ, ಕೂದಲಿಗೆ ರಾಸಾಯನಿಕ ಉತ್ಪನ್ನಗಳ ಅತಿಯಾದ ಬಳಕೆ, ಒತ್ತಡ, ಆಹಾರ ಪದ್ಧತಿ, ಜೀವನಶೈಲಿ ಇವೆಲ್ಲವೂ ಇದಕ್ಕೆ ಮುಖ್ಯ ಕಾರಣ ಅಂತಾನೇ ಹೇಳಬಹುದು. ಹೀಗಿರುವಾಗ ಕೂದಲಿನ ಆರೈಕೆಯ ಬಗ್ಗೆ ಸಾಕಷ್ಟು ಗಮನವನ್ನು ಹರಿಸಬೇಕಾಗುತ್ತದೆ. ಅದಕ್ಕಾಗಿ ಮೊದಲು ನೀವು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಕೂದಲು ಉದುರುವಿಕೆಯ ಸಮಸ್ಯೆಗೆ  ಗುಡ್‌ಬೈ ಹೇಳಲು ನೀವು ಮಾಡಬೇಕಾದದ್ದು ಇಷ್ಟೆ
ಸಾಂದರ್ಭಿಕ ಚಿತ್ರ
Image Credit source: vecteezy

Updated on: Nov 17, 2025 | 3:17 PM

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ (hair fall) ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮಾಲಿನ್ಯ, ಅನಾರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿಯ ಬದಲಾವಣೆ, ಕೂದಲಿಗೆ ರಾಸಾಯನಿಕಯುಕ್ತ ಉತ್ಪನ್ನಗಳ ಬಳಕೆ, ಒತ್ತಡ ಇವೆಲ್ಲವೂ ಈ ಸಮಸ್ಯೆಗೆ ಅತಿ ಮುಖ್ಯ ಕಾರಣ ಅಂತಾನೇ ಹೇಳಬಹುದು. ಇನ್ನೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಹಲವರು ದುಬಾರಿ ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಇದರ ಬದಲು ಕೂದಲ ಆರೋಗ್ಯಕ್ಕೆ ಬೇಕಾದ ಈ ಕೆಲವೊಂದು ಆರೈಕೆ ಸಲಹೆಗಳನ್ನು ಪಾಲಿಸುವ ಮೂಲಕ 90% ರಷ್ಟು ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಹಾಗಿದ್ರೆ ಕೂದಲು ಉದುರುವಿಕೆಯ ಸಮಸ್ಯೆಗೆ ಗುಡ್‌ ಬೈ ಹೇಳಲು ನೀವು ಮೊದಲು ಮಾಡಬೇಕಾದದ್ದೇನು ಎಂಬುದನ್ನು ನೋಡಿ.

ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಏನು ಮಾಡಬೇಕು?

ಎಣ್ಣೆ ಮಸಾಜ್: ಹೆಚ್ಚಿನವರು ಕೂದಲಿಗೆ ಎಣ್ಣೆ ಹಚ್ಚುವುದಿಲ್ಲ, ಇದು ನೀವು ಮಾಡುವ ಬಹಳ ದೊಡ್ಡ ತಪ್ಪು. ಗಿಡಗಳಿಗೆ ನೀರು ಹಾಕುವಂತೆ, ಕೂದಲು ಆರೋಗ್ಯಕರವಾಗಿರಲು ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡುವುದು ತುಂಬಾನೇ ಮುಖ್ಯ. ವಾರಕ್ಕೆ ಕನಿಷ್ಟ ಮೂರು ದಿನಗಳಾದರೂ ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡಬೇಕು. ಇದು ಕೂದಲು ದಪ್ಪವಾಗಿ ಬೆಳೆಯಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಎರಡರಿಂದ ಮೂರು ದಿನ ತಲೆ ಸ್ನಾನ: ಕೆಲವರು ಕೂದಲನ್ನು ಆರೋಗ್ಯಕರವಾಗಿಟ್ಟುಕೊಳ್ಳಬೇಕು ಎಂದು ಪ್ರತಿನಿತ್ಯ ತಲೆಸ್ನಾನ ಮಾಡುತ್ತಾರೆ. ಅದರ ಬದಲು, ವಾರಕ್ಕೆ 2 ಅಥವಾ 3 ಬಾರಿ ತಲೆ ಸ್ನಾನ ಮಾಡಿದರೆ ಸಾಕು.  ಸ್ನಾನ ಮಾಡುವ ಕನಿಷ್ಠ ಅರ್ಧ ಗಂಟೆ ಮೊದಲು ಕೂದಲಿಗೆ ಎಣ್ಣೆ ಹಚ್ಚಿ. ಇದು ನಿಮ್ಮ ನೆತ್ತಿಯನ್ನು ಡ್ರೈ ಆಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಒಂದು ವೇಳೆ ನೆತ್ತಿ ಒಣಗಿದರೆ ನಿಮ್ಮ ಕೂದಲು ದುರ್ಬಲವಾಗುತ್ತದೆ ಮತ್ತು ಬೇಗನೆ ಉದುರುತ್ತದೆ. ಆದ್ದರಿಂದ, ನಿಮ್ಮ ಕೂದಲನ್ನು ಪೋಷಿಸಿ. ಎಣ್ಣೆ ಹಚ್ಚಿದ ನಂತರ ಸ್ನಾನ ಮಾಡಿ. ಸ್ನಾನ ಮಾಡಲು ಉಗುರು ಬೆಚ್ಚಗಿನ ನೀರನ್ನು ಬಳಸಿ, ತುಂಬಾ ಬಿಸಿ ಅಥವಾ ತಣ್ಣನೆಯ ನೀರು ಸೂಕ್ತವಲ್ಲ. ಮುಖ್ಯವಾಗಿ ಕೂದಲು ತೊಳೆಯಲು ಸಲ್ಫೇಟ್ ಮುಕ್ತ ಸೌಮ್ಯ ಶಾಂಪೂಗಳನ್ನು ಬಳಸಿ.

ಸರಿಯಾದ ಪೋಷಣೆ: ಕೂದಲಿನ ಆರೋಗ್ಯಕ್ಕಾಗಿ ಹೊರಗಿನಿಂದ ಕೂದಲನ್ನು ಪೋಷಿಸುವುದು ಎಷ್ಟು ಮುಖ್ಯವೋ, ಅದೇ ರೀತಿ ಒಳಗಿನಿಂದ ಪೋಷಿಸುವುದು ಸಹ ಅಷ್ಟೇ ಮುಖ್ಯ. ಇದಕ್ಕಾಗಿ ನೀವು ಮೊಟ್ಟೆ, ವಾಲ್ನಟ್ಸ್, ಬಾದಾಮಿ, ನೆಲ್ಲಿ, ಪಾಲಕ್,  ಕ್ಯಾರೆಟ್,  ಮೀನು ಇತ್ಯಾದಿ ಪೋಷಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡಬೇಕು. ಇವೆಲ್ಲವೂ ಕೂದಲನ್ನು ಒಳಗಿನಿಂದ ಬಲಪಡಿಸುತ್ತವೆ.

ಇದನ್ನೂ ಓದಿ: ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಿದರೆ ಉತ್ತಮ? ನೀವು ತಿಳಿಯಲೇಬೇಕಾದ ಮಾಹಿತಿ ಇದು

ನೈಸರ್ಗಿಕ ವಿಟಮಿನ್‌ ಡಿ: ಪ್ರತಿದಿನ ಬೆಳಗ್ಗೆ ಕನಿಷ್ಠ 15 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ. ಇದು  ದೇಹದಲ್ಲಿ ವಿಟಮಿನ್ ಡಿ ಉತ್ಪಾದಿಸಲು ಸಹಾಯ ಮಾಡುತ್ತದೆ. ಸಾಕಷ್ಟು ವಿಟಮಿನ್‌ ದೊರೆತಾಗ ಕೂದಲು ಉದುರುವಿಕೆಯೂ ಸಹ ಕಡಿಮೆಯಾಗುತ್ತದೆ ಮತ್ತು ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ.

ಜಲಸಂಚಯನವೂ ಮುಖ್ಯ: ಕೂದಲು ಆರೋಗ್ಯಕರವಾಗಿ ಬೆಳೆಯಲು ದೇಹಕ್ಕೆ ಜಲಸಂಚಯನವೂ ಮುಖ್ಯ. ಅದಕ್ಕಾಗಿ ದಿನಕ್ಕೆ ಎರಡರಿಂದ ಮೂರು ಲೀಟರ್‌ ನೀರು ಕುಡಿಯಿರಿ. ಎಳನೀರು, ನಿಂಬೆ ಪಾನಕ ಕುಡಿಯಿರಿ. ಕೂದಲಿನ ಆರೈಕೆಗೆ ಬೇಕಾಗಿರುವ ಈ ಎಲ್ಲಾ ಸಲಹೆಗಳನ್ನು ಪಾಲಿಸಿದರೆ ಕೂದಲು ಉದುರುವಿಕೆಯ ಸಮಸ್ಯೆಗೆ ಬಹಳ ಸುಲಭವಾಗಿ ಗುಡ್‌ ಬೈ ಹೇಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ