AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಗಳೆಯರೇ… ಮೇಕಪ್‌ ಇಲ್ಲದೆಯೂ ಸುಂದರವಾಗಿ ಕಾಣಿಸಬೇಕೆಂದರೆ ಈ ಸಲಹೆಗಳನ್ನು ಅನುಸರಿಸಿ

ಸುಂದರವಾಗಿ ಕಾಣಿಸಬೇಕು ಎಂಬ ಬಯಕೆ ಎಲ್ಲರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಹಲವರು ದುಬಾರಿ ಮೇಕಪ್‌ ಉತ್ಪನ್ನಗಳ ಮೊರೆ ಹೋಗ್ತಾರೆ. ಈ ರಾಸಾಯನಿಕ ಉತ್ಪನ್ನಗಳನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಹೀಗಿರುವಾಗ ಸುಂದರವಾಗಿ ಕಾಣಿಸಲು ಹಣ ಖರ್ಚು ಮಾಡುವ ಬದಲು ಈ ಕೆಲವೊಂದಿಷ್ಟು ಸಲಹೆಗಳನ್ನು ಪಾಲಿಸಿ, ಮೇಕಪ್‌ ಇಲ್ಲದೆಯೂ ನೀವು ಬ್ಯೂಟಿಫುಲ್‌ ಆಗಿ ಕಾಣಿಸುವಿರಿ. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹೆಂಗಳೆಯರೇ… ಮೇಕಪ್‌ ಇಲ್ಲದೆಯೂ ಸುಂದರವಾಗಿ ಕಾಣಿಸಬೇಕೆಂದರೆ ಈ ಸಲಹೆಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on: Nov 17, 2025 | 6:53 PM

Share

ಸುಂದರವಾಗಿ ಕಾಣಿಸಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಅದರಲ್ಲೂ ಕಾಲೇಜಿಗೆ ಹೋಗುವ ಹುಡುಗಿಯರು, ಪ್ರತಿನಿತ್ಯ ಕೆಲಸಕ್ಕೆ ಹೋಗುವಂತಹ ಮಹಿಳೆಯರು ತಾವು ಸುಂದರವಾಗಿ ಕಾಣಿಸಲು ಫೌಂಡೇಶನ್‌, ಬಗೆಬಗೆಯ ಕ್ರೀಂ ಅಂತೆಲ್ಲಾ ದುಬಾರಿ ಮೇಕಪ್‌ (makeup) ಉತ್ಪನ್ನಗಳನ್ನು ಮುಖಕ್ಕೆ ಹಚ್ಚುತ್ತಾರೆ. ಈ ರಾಸಾಯನಿಕಯುಕ್ತ ಮೇಕಪ್‌ ಉತ್ಪನ್ನಗಳು ಚರ್ಮಕ್ಕೆ ನೇರವಾಗಿ ಹಾನಿ ಮಾಡುತ್ತವೆ. ಆದ್ದರಿಂದ ಪ್ರತಿನಿತ್ಯ ಮುಖಕ್ಕೆ ಮೇಕಪ್‌ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಹೀಗಿರುವಾಗ ಯಾವುದೇ ಖರ್ಚಿಲ್ಲದೆ ಮುಖದ ಹೊಳಪನ್ನು ಹೆಚ್ಚಿಸಲು , ಮೇಕಪ್‌ ಇಲ್ಲದೆ ಸುಂದರವಾಗಿ ಕಾಣಲು ಈ ಕೆಲವು ಸಲಹೆಗಳನ್ನು ಅನುಸರಿಸಿ.

ಮೇಕಪ್‌ ಇಲ್ಲದೆ ಮುಖ ಸುಂದರವಾಗಿ ಕಾಣಿಸಲು ನೀವು ಪಾಲಿಸಬೇಕಾದ ಸಲಹೆ:

ಆರೋಗ್ಯಕರ ಆಹಾರ ಸೇವನೆ: ಕಳಪೆ ಜೀವನಶೈಲಿ, ಆಹಾರ ಪದ್ಧತಿ ನಿಮ್ಮ ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ, ತ್ವಚೆಯ ಸೌಂದರ್ಯವನ್ನು ಕಾಪಾಡಲು ಒಳಗಿನಿಂದ ಪೋಷಣೆ ನೀಡುವುದು ಮುಖ್ಯ. ಹಾಗಾಗಿ  ನೀವು ಪ್ರೊಟೀನ್, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಿ.

ಸಾಕಷ್ಟು ನಿದ್ರೆ ಪಡೆಯಿರಿ: ನೀವು ಸರಿಯಾಗಿ ಮಾಡದಿದ್ದರೆ ಅದರ ಪರಿಣಾಮ ಮುಖದ ಮೇಲೆ ಗೋಚರಿಸುತ್ತದೆ. ಆದ್ದರಿಂದ ಕನಿಷ್ಠ ಏಳು ಗಂಟೆಗಳ ಕಾಲ ನಿದ್ದೆ ಮಾಡಲು ಪ್ರಯತ್ನಿಸಿ. ಇದು ನಿಮ್ಮ ಚರ್ಮವನ್ನು ತಾಜಾ ಮತ್ತು ಕಾಂತಿಯುತವಾಗಿ ಕಾಣುವಂತೆ  ಮಾಡುತ್ತದೆ. ನಿದ್ದೆ ಮಾಡುವಾಗ, ನಿಮ್ಮ ಚರ್ಮವು ಹೊಸ ಕಾಲಜನ್ ಅನ್ನು ಉತ್ಪಾದಿಸುತ್ತದೆ, ಇದು ಮುಖವನ್ನು ಹೊಳೆಯುವಂತೆ ಮತ್ತು ತಾಜಾವಾಗಿರಿಸುತ್ತದೆ.

ಸಾಕಷ್ಟು ನೀರು ಕುಡಿಯಿರಿ: ನೀವು ಸಾಕಷ್ಟು ನೀರು ಕುಡಿದರೆ, ನಿಮ್ಮ ದೇಹದ ಪ್ರತಿಯೊಂದು ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಮೊಡವೆಗಳು, ಚರ್ಮದ ಶುಷ್ಕತೆಯನ್ನು ಹೋಗಲಾಡಿಸಿ, ನಿಮ್ಮ ಮುಖ ಪಳಪಳ ಹೊಳೆಯುವಂತೆ ಮಾಡುತ್ತದೆ. ಜೊತೆಗೆ ದೈಹಿಕ ಚಟುವಟಿಕೆಯನ್ನು ಅಭ್ಯಾಸ ಮಾಡಲು ಮರೆಯದಿರಿ.

ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಿ:  ಆತ್ಮವಿಶ್ವಾಸದ ನಗು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಯಾವಾಗಲೂ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಿ ಮತ್ತು ನಕಾರಾತ್ಮಕ ಜನರಿಂದ ದೂರವಿರಿ. ಆಗ ನಿಮ್ಮ ಮುಖವು ಸ್ವಾಭಾವಿಕವಾಗಿ ಹೊಳೆಯುತ್ತದೆ. ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ಮೇಕಪ್ ಇಲ್ಲದೆಯೂ ನೀವು ಸುಂದರವಾಗಿ ಕಾಣಿಸಬಹುದು.

ಇದನ್ನೂ ಓದಿ: ಕೂದಲು ಉದುರುವಿಕೆಯ ಸಮಸ್ಯೆಗೆ ಗುಡ್‌ಬೈ ಹೇಳಲು ನೀವು ಮಾಡಬೇಕಾದದ್ದು ಇಷ್ಟೆ

ಚರ್ಮದ ಆರೈಕೆಯ ಬಗ್ಗೆ ಕಾಳಜಿ ವಹಿಸಲು ಮರೆಯದಿರಿ:

  • ದಿನಕ್ಕೆ ಎರಡು ಬಾರಿ ಉತ್ತಮ ಗುಣಮಟ್ಟದ ಫೇಸ್‌ವಾಶ್‌ನಿಂದ ನಿಮ್ಮ ಮುಖವನ್ನು ತೊಳೆಯಿರಿ ಮತ್ತು ಮುಖಕ್ಕೆ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.
  • ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಿ. ಇದು ಮೇಕಪ್‌ ಇಲ್ಲದಿದ್ದರೂ ನಿಮ್ಮ ತ್ವಚೆಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.
  • ನೀವು ಪಾರ್ಲರ್‌ಗೆ ಹೋಗದಿದ್ದರೂ ಮನೆಯಲ್ಲಿಯೇ ತ್ವಚೆಗೆ ಮಾಯಿಶ್ಚರೈಸರ್‌, ಸ್ಕ್ರಬ್ಬಿಂಗ್‌, ಟೋನಿಂಗ್‌ ಸೇರಿದಂತೆ ಆರೋಗ್ಯಕರ ರೀತಿಯಲ್ಲಿ ತ್ವಚೆಯನ್ನು ಆರೈಕೆ ಮಾಡಿ.
  • ಮುಖಕ್ಕೆ ಭಾರವಾದ ಫೌಂಡೇಶನ್‌ ಬದಲಿಗೆ ಹಗುರವಾದ ಬಿಬಿ ಅಥಾ ಸಿಸಿ ಕ್ರೀಮ್‌ ಬಳಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ