ಟ್ರೆಕ್ಕಿಂಗ್​​ ಅಥವಾ ದೂರ ಪ್ರಯಾಣ ಮಾಡುವಾಗ ಈ ಆಹಾರಗಳಿಂದ ದೂರವಿರಿ

|

Updated on: Mar 19, 2023 | 4:28 PM

ಟ್ರಕ್ಕಿಂಗ್​​ ಹೋಗುವಾಗ ಸರಿಯಾದ ಬಟ್ಟೆ ಮತ್ತು ಶೂ ಪ್ಯಾಕ್ ಮಾಡುವುದರ ಜೊತೆಗೆ, ನೀವು ನಿಮ್ಮ ಆಹಾರ ಕ್ರಮಗಳ ಬಗ್ಗೆ ಗಮನಹರಿಸುವುದು ಅಗತ್ಯ. ಆದಷ್ಟು ಅಜೀರ್ಣಕ್ಕೆ ಕಾರಣವಾಗುವ ಆಹಾರಗಳನ್ನು ತಪ್ಪಿಸಿ.

ಟ್ರೆಕ್ಕಿಂಗ್​​ ಅಥವಾ ದೂರ ಪ್ರಯಾಣ ಮಾಡುವಾಗ ಈ ಆಹಾರಗಳಿಂದ ದೂರವಿರಿ
ಸಾಂದರ್ಭಿಕ ಚಿತ್ರ
Image Credit source: NDTV
Follow us on

ವಾರಾಂತ್ಯದಲ್ಲಿ ಅಥವಾ ರಜಾದಿನಗಳಲ್ಲಿ ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಟೂರ್​ ಪ್ಲಾನ್​​ ಮಾಡಿದ್ದರೆ, ನೀವು ಹೋಗುವ ಪ್ರವಾಸಿ ತಾಣಗಳ ಆಯ್ಕೆಯ ಜೊತೆಗೆ ನಿಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರ ವಹಿಸಬೇಕು. ಹೆಚ್ಚಾಗಿ ದೂರ ಪ್ರಯಾಣ ಮಾಡುವಾಗ ವಾಂತಿ, ತಲೆನೋವು ಹೆಚ್ಚಿನ ಜನರಲ್ಲಿ ಕಂಡುಬರುತ್ತದೆ. ಇಂತಹ ಸಮಸ್ಯೆಗಳು ಕಂಡುಬರಲು ನಿಮ್ಮ ಆಹಾರಕ್ರಮ ಕೂಡ ಕಾರಣವಾಗಬಹುದು. ಆದ್ದರಿಂದ ನೀವು ದೂರ ಪ್ರಯಾಣ ಮಾಡುವಾಗ ಈ ಕೆಳಗಿನ ಆಹಾರಗಳಿಂದ ದೂರವಿರಿ. ಟ್ರಕ್ಕಿಂಗ್​​ ಹೋಗುವಾಗ ಸರಿಯಾದ ಬಟ್ಟೆ ಮತ್ತು ಶೂ ಪ್ಯಾಕ್ ಮಾಡುವುದರ ಜೊತೆಗೆ, ನೀವು ನಿಮ್ಮ ಆಹಾರ ಕ್ರಮಗಳ ಬಗ್ಗೆ ಗಮನಹರಿಸುವುದು ಅಗತ್ಯ. ಆದಷ್ಟು ಅಜೀರ್ಣಕ್ಕೆ ಕಾರಣವಾಗುವ ಆಹಾರಗಳನ್ನು ತಪ್ಪಿಸಿ.

ಗಿರಿಧಾಮಗಳಿಗೆ ಅಥವಾ ದೂರ ಪ್ರಯಾಣದ ಸಮಯದಲ್ಲಿ ತಪ್ಪಿಸಬೇಕಾದ 6 ಆಹಾರಗಳು ಇಲ್ಲಿವೆ:

ಮಾಂಸಹಾರಗಳು:

ಬಟರ್​​ ಚಿಕನ್​​, ಚಿಕನ್​ ಟಿಕ್ಕಾ ಮುಂತಾದ ಮಾಂಸ ಆಧಾರಿತ ಭಕ್ಷ್ಯಗಳನ್ನು ತಪ್ಪಿಸಿ. ಯಾಕೆಂದರೆ ಇಂತಹ ಆಹಾರಗಳು ಜೀರ್ಣವಾಗಲು ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಅಜೀರ್ಣಕ್ಕೆ ಕಾರಣವಾಗಬಹುದು. ಆದ್ದರಿಂದ ದೂರ ಪ್ರಯಾಣದ ಸಮಯದಲ್ಲಿ ಆದಷ್ಟು ಮಾಂಸಹಾರಗಳನ್ನು ತಪ್ಪಿಸಿ.

ಬಫೆಟ್:

ಬಫೆಟ್​​ಗಳಲ್ಲಿ ಸಾಕಷ್ಟು ಆಹಾರಗಳು ಇರುವುದರಿಂದ ನಿಮಗೆ ಆಕರ್ಷಕವಾಗಿ ಕಾಣುವುದರ ಜೊತೆಗೆ ಎಲ್ಲವನ್ನು ತಿನ್ನಬೇಕು ಎಂಬ ಆಸೆ ಹುಟ್ಟುವುದು ಸಹಜ. ಅತಿಯಾಗಿ ತಿನ್ನುವುದು ಅಜೀರ್ಣ, ಉಬ್ಬುವುದು ಅಥವಾ ಗ್ಯಾಸ್ಟ್ರಿಕ್​​ಗೆ ಕಾರಣವಾಗಬಹುದು. ಪ್ರಯಾಣ ಮಾಡುವಾಗ ನಿಮ್ಮ ಆಹಾರದ ಮೇಲೆ ಕಟ್ಟುನಿಟ್ಟಾದ ನಿಯಂತ್ರಣವನ್ನು ಇಟ್ಟುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಗರಿಗರಿಯಾದ ಬಾಳೆಕಾಯಿ ಚಿಪ್ಸ್ ತಯಾರಿಸಲು ​​​ಈ ಸಲಹೆ ಪಾಲಿಸಿ

ಎಣ್ಣೆಯುಕ್ತ ಆಹಾರಗಳು:

ನೀವು ದೂರ ಪ್ರಯಾಣ ಮಾಡುವಾಗ ಜಿಡ್ಡಿನ ಮತ್ತು ಎಣ್ಣೆಯುಕ್ತ ಆಹಾರಗಳನ್ನು ತಿನ್ನಬೇಡಿ. ಈ ಆಹಾರಗಳು ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಹೊಟ್ಟೆಗೆ ಸೂಕ್ತವಲ್ಲ ಮತ್ತು ಅಜೀರ್ಣ ಉಂಟುಮಾಡುತ್ತವೆ.

ಡೈರಿ ಉತ್ಪನ್ನಗಳು:

ಹಾಲು, ಚೀಸ್, ಕ್ರೀಮ್, ಐಸ್ ಕ್ರೀಮ್ ಮುಂತಾದ ಆಹಾರಗಳು ದೂರ ಪ್ರಯಾಣದ ಸಮಯದಲ್ಲಿ ಆದಷ್ಟು ತಪ್ಪಿಸಿ. ವಿಶೇಷವಾಗಿ ನೀವು ಕಾರು ಅಥವಾ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ಡೈರಿ ಆಧಾರಿತ ಉತ್ಪನ್ನಗಳು ಅಥವಾ ಹಾಲು ಕುಡಿಯುವುದನ್ನು ತಪ್ಪಿಸಿ. ಇದರಿಂದ ನೀವು ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಬಹುದು.

ಕಾರ್ಬೊನೇಟೆಡ್ ಪಾನೀಯಗಳು:

ಕಾರ್ಬೊನೇಟೆಡ್ ಪಾನೀಯಗಳಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುವುದರಿಂದ ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಹುಟ್ಟಿಕೊಳ್ಳಲು ಕಾರಣವಾಗಬಹುದು. ಕೋಲಾ, ಸೋಡಾ ಮತ್ತು ಇತರ ಪಾನೀಯಗಳು ಕರುಳಿನ ಅನಿಲ ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಆದ್ದರಿಂದ ನೀರು ಜೊತೆಗಿರಿಸಿಕೊಳ್ಳಿ.

ಮದ್ಯಪಾನ:

ದೂರ ಪ್ರಯಾಣದ ಸಮಯದಲ್ಲಿ ಕೆಲವರಿಗೆ ಮದ್ಯಪಾನ ಮಾಡುವುದು ರೋಮಾಂಚನಕಾರಿ ಎಂದು ಎನಿಸಬಹುದು. ಪ್ರಯಾಣ ಮಾಡುವಾಗ ಆಲ್ಕೋಹಾಲ್ ಸೇವನೆಯು ನಿಮಗೆ ತಲೆತಿರುಗುವಂತೆ ಮಾಡುತ್ತದೆ. ಬಿಯರ್, ವೋಡ್ಕಾ, ವಿಸ್ಕಿ ಸೇರಿದಂತೆ ಎಲ್ಲಾ ರೀತಿಯ ಆಲ್ಕೋಹಾಲ್​​ಗಳನ್ನು ಪ್ರಯಾಣ ಮಾಡುವಾಗ ತ್ಯಜಿಸುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: