AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nails: ಪದೇ ಪದೇ ಉಗುರುಗಳು ತಾನಾಗಿಯೇ ತುಂಡಾಗುವುದು ಯಾವುದರ ಸಂಕೇತ?

ಸ್ವಚ್ಛ ಮತ್ತು ಸುಂದರವಾದ ಉಗುರುಗಳು ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಒಟ್ಟಾರೆ ಆರೋಗ್ಯದ ಬಗ್ಗೆಯೂ ಸೂಚಿಸುತ್ತವೆ. ಉಗುರುಗಳು ಬಿಳಿಯಾಗುವುದು, ಹಳದಿ ಬಣ್ಣಕ್ಕೆ ತಿಗುಗುವುದು, ತುಂಟಾಗುವುದು ಅಥವಾ ಬಿರುಕುಗಳು ರೋಗಗಳ ಸಂಕೇತವಾಗಿದೆ. 

Nails: ಪದೇ ಪದೇ ಉಗುರುಗಳು ತಾನಾಗಿಯೇ ತುಂಡಾಗುವುದು ಯಾವುದರ ಸಂಕೇತ?
Nails
TV9 Web
| Updated By: ನಯನಾ ರಾಜೀವ್|

Updated on:Sep 20, 2022 | 11:39 AM

Share

ಸ್ವಚ್ಛ ಮತ್ತು ಸುಂದರವಾದ ಉಗುರುಗಳು ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಒಟ್ಟಾರೆ ಆರೋಗ್ಯದ ಬಗ್ಗೆಯೂ ಸೂಚಿಸುತ್ತವೆ. ಉಗುರುಗಳು ಬಿಳಿಯಾಗುವುದು, ಹಳದಿ ಬಣ್ಣಕ್ಕೆ ತಿಗುಗುವುದು, ತುಂಟಾಗುವುದು ಅಥವಾ ಬಿರುಕುಗಳು ರೋಗಗಳ ಸಂಕೇತವಾಗಿದೆ.  ಯಕೃತ್ತು, ಶ್ವಾಸಕೋಶ ಮತ್ತು ಹೃದಯದಲ್ಲಿ ಸಂಭವಿಸುವ ಯಾವುದೇ ಸಮಸ್ಯೆಯನ್ನು ಉಗುರುಗಳ ಮೂಲಕ ಕಂಡುಹಿಡಿಯಬಹುದು.

ಅಸಹಜ ಉಗುರುಗಳು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಉಗುರುಗಳ ಸ್ಥಿತಿಯನ್ನು ನೋಡುವ ಮೂಲಕ ಯಾವುದೇ ರೋಗವನ್ನು ಕಂಡುಹಿಡಿಯಬಹುದು. ಉದಾಹರಣೆಗೆ, ಹಳದಿ ಉಗುರುಗಳು ರಕ್ತಹೀನತೆ, ಹೃದ್ರೋಗ, ಯಕೃತ್ತಿನ ರೋಗ ಅಥವಾ ಅಪೌಷ್ಟಿಕತೆಯನ್ನು ಸೂಚಿಸುತ್ತವೆ. ಹಾಗಾದರೆ ಉಗುರುಗಳು ಆರೋಗ್ಯದ ಬಗ್ಗೆ ಏನು ಹೇಳುತ್ತವೆ ಎಂದು ತಿಳಿಯೋಣ.

ಒಣ ಅಥವಾ ಕಟ್ ಆದ ಉಗುರುಗಳು ಥೈರಾಯ್ಡ್ ಅನ್ನು ಸೂಚಿಸುತ್ತವೆ. ಹಳದಿ ಬಣ್ಣದ ಉಗುರುಗಳು ಕಟ್​ ಆಗಿರುವ ಅಥವಾ ಬೀಳುವುದು ಸಹ ಕೆಲವು ರೀತಿಯ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.

ಬಣ್ಣರಹಿತ ಉಗುರುಗಳು ಬಣ್ಣರಹಿತ ಉಗುರುಗಳನ್ನು ಲ್ಯುಕೋನಿಚಿಯಾ ಎಂದೂ ಕರೆಯಬಹುದು. ಈ ಸ್ಥಿತಿಯಲ್ಲಿ ಉಗುರುಗಳು ಬಿಳಿಯಾಗುತ್ತವೆ. ಬಣ್ಣರಹಿತ ಉಗುರುಗಳು ಗಾಯ, ರಕ್ತಹೀನತೆ, ಅಪೌಷ್ಟಿಕತೆ, ಹೃದಯ ಅಥವಾ ಮೂತ್ರಪಿಂಡದ ಕಾಯಿಲೆ ಅಥವಾ ವಿಷದಂತಹ ಅನೇಕ ಕಾರಣಗಳಿಂದಾಗಿರಬಹುದು.

ಹಳದಿ ಉಗುರುಗಳು ಉಗುರುಗಳು ಹಳದಿಯಾಗಲು ಸಾಮಾನ್ಯ ಕಾರಣವೆಂದರೆ ಶಿಲೀಂಧ್ರಗಳ ಸೋಂಕು. ಸೋಂಕು ತುಂಬಾ ತೀವ್ರವಾದಾಗ, ಉಗುರು ಸಡಿಲವಾಗುತ್ತದೆ ಮತ್ತು ತುಂಟಾಗಬಹುದು ಅಪರೂಪದ ಸಂದರ್ಭಗಳಲ್ಲಿ, ಹಳದಿ ಉಗುರುಗಳು ಥೈರಾಯ್ಡ್, ಶ್ವಾಸಕೋಶ, ಮಧುಮೇಹ ಅಥವಾ ಸೋರಿಯಾಸಿಸ್ ಮುಂತಾದ ಹೆಚ್ಚು ಗಂಭೀರವಾದ ರೋಗವನ್ನು ಸಹ ಸೂಚಿಸಬಹುದು.

ನೀಲಿ ಉಗುರುಗಳು ನೀಲಿ ಉಗುರುಗಳು ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತಿಲ್ಲ ಎಂಬುದರ ಸಂಕೇತವಾಗಿದೆ. ಇದರ ಇನ್ನೊಂದು ಚಿಹ್ನೆ ನ್ಯುಮೋನಿಯಾ ಅಥವಾ ಇತರ ರೀತಿಯ ಸೋಂಕು ಆಗಿರಬಹುದು. ಕೆಲವು ಸಂದರ್ಭಗಳಲ್ಲಿ ನೀಲಿ ಉಗುರುಗಳು ಸಹ ಹೃದಯ ರೋಗವನ್ನು ಸೂಚಿಸುತ್ತವೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Tue, 20 September 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್