AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nails Health: ಈ ನಿಮ್ಮ ತಪ್ಪುಗಳು ನಿಮ್ಮ ಉಗುರುಗಳ ಆರೋಗ್ಯವನ್ನು ಹಾಳು ಮಾಡಬಹುದು

ದೇಹದ ಇತರೆ ಭಾಗಗಳಿಗೆ ಹೋಲಿಕೆ ಮಾಡಿದರೆ ಉಗುರಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಸುಲಭ. ಆದರೆ ನಿಮ್ಮ ಕೆಲವು ತಪ್ಪುಗಳು ಉಗುರಿನ ಆರೋಗ್ಯವನ್ನು ಹಾಳು ಮಾಡಬಹುದು.

Nails Health: ಈ ನಿಮ್ಮ ತಪ್ಪುಗಳು ನಿಮ್ಮ ಉಗುರುಗಳ ಆರೋಗ್ಯವನ್ನು ಹಾಳು ಮಾಡಬಹುದು
Nails
TV9 Web
| Edited By: |

Updated on: Jul 20, 2022 | 11:20 AM

Share

ದೇಹದ ಇತರೆ ಭಾಗಗಳಿಗೆ ಹೋಲಿಕೆ ಮಾಡಿದರೆ ಉಗುರಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಸುಲಭ. ಆದರೆ ನಿಮ್ಮ ಕೆಲವು ತಪ್ಪುಗಳು ಉಗುರಿನ ಆರೋಗ್ಯವನ್ನು ಹಾಳು ಮಾಡಬಹುದು.

ಆ ಆರು ತಪ್ಪುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ

ಉಗುರು ಕಚ್ಚುವುದು: ಉಗುರುಗಳು ಮನುಷ್ಯನ ಕೈಯಲ್ಲಿರುವ ಬೆರಳುಗಳಿಗೆ ರಕ್ಷಣಾ ಕವಚದಂತಿರುತ್ತದೆ. ಪುಟ್ಟ ಮಕ್ಕಳಿಗೆ ಉಗುರನ್ನು ಕಚ್ಚುವ ಅಭ್ಯಾಸವಿರುತ್ತದೆ. ಕೆಲವು ಮಂದಿ ದೊಡ್ಡವರಾದ ಮೇಲೂ ಈ ಅಭ್ಯಾಸ ಮುಂದುವರೆಸಿಕೊಂಡು ಬಂದಿರುತ್ತಾರೆ. ಅಧ್ಯಯನಗಳು ಹೇಳುವ ಹಾಗೆ ಶೇಕಡ 40ರಷ್ಟು ಮಂದಿ ಉಗುರು ಕಚ್ಚುವ ಅಭ್ಯಾಸ ವನ್ನು ಹೊಂದಿರುತ್ತಾರೆ. ಎಲ್ಲರೂ ಸಾಮಾನ್ಯ ಅಭ್ಯಾಸ ವೆಂದು ಅಂದುಕೊಳ್ಳೋ ಈ ವರ್ತನೆಯಿಂದ ಆರೋಗ್ಯಕ್ಕೆ ಹೆಚ್ಚಿನ ಹಾನಿಯುಂಟಾಗುತ್ತದೆ.

ಉಗುರಿನಿಂದಲೇ ನೈಲ್​ ಪಾಲಿಶ್ ತೆಗೆಯುವುದು: ನಿಮ್ಮ ಉಗುರಿಗೆ ಹಚ್ಚಿರುವ ನೈಲ್ ಪಾಲಿಶ್ ತೆಗೆಯಲು ರಿಮೂವರ್ ಇದ್ದರೂ ಕೂಡ ಉಗುರಿನಿಂದಲೇ ನೈಲ್​ ಪಾಲಿಶ್ ತೆಗೆಯುವ ಅಭ್ಯಾಸವು ಉಗುರುಗಳಿಗೆ ಹಾನಿಯುಂಟು ಮಾಡುತ್ತದೆ.

ಉಗುರಿನ ಪಕ್ಕದಲ್ಲಿರುವ ಚರ್ಮವನ್ನು ಕತ್ತರಿಸುವುದು: ಕೆಲವೊಮ್ಮೆ ಉಗುರಿನ ಪಕ್ಕದಲ್ಲಿರುವ ಚರ್ಮವು ಜಿಡ್ಡುಗಟ್ಟಿದಂತೆ ಸ್ವಲ್ಪ ಗಟ್ಟಿಯಾಗಿರುತ್ತದೆ. ಆ ಚರ್ಮವನ್ನು ಕತ್ತರಿಸುವುದರಿಂದ ಉಗುರಿಗೆ ಹಾನಿಯುಂಟಾಗುತ್ತದೆ.

ಗುಣಮಟ್ಟದ ನೈಲ್ ಪಾಲಿಶ್ ಬಳಕೆ ಮಾಡದಿರುವುದು: ಗುಣಮಟ್ಟದ ನೈಲ್ ಪಾಲಿಶ್ ಬಳಕೆ ಮಾಡದಿದ್ದರೆ ನಿಮ್ಮ ಉಗುರುಗಳ ಆರೋಗ್ಯ ಹಾಳಾಗುತ್ತದೆ.

ಕೆಮಿಕಲ್​ ಬಳಕೆ: ಕ್ಲೀನಿಂಗ್ ಸ್ಪ್ರೇಗಳು, ಟಾಯ್ಲೆಟ್ ಕ್ಲೀನರ್‌ಗಳು ಅಥವಾ ಡಿಶ್ ವಾಶ್‌ಗಳಂತಹ ರಾಸಾಯನಿಕಗಳೊಂದಿಗೆ ನೀವು ಕೆಲಸ ಮಾಡುವಾಗ, ಉಗುರು ಹಾನಿಯಾಗದಂತೆ ಉಳಿಸಲು ಯಾವಾಗಲೂ ಲ್ಯಾಟೆಕ್ಸ್ ಕೈಗವಸುಗಳನ್ನು ಬಳಸಿ. ರಾಸಾಯನಿಕ ಸ್ಪ್ರೇಗಳು ಅವುಗಳನ್ನು ತೆಳುವಾದ ಮತ್ತು ಹಾನಿಗೊಳಗಾಗುವಂತೆ ಮಾಡುತ್ತದೆ.

ಜಂಕ್​ ಫುಡ್​ಗಳನ್ನು ತಿನ್ನುವುದು: ನೀವು ಅನಾರೋಗ್ಯಕರ ಆಹಾರವನ್ನು ಸೇವಿಸಿದರೆ ಮತ್ತು ಸೋಡಾಗಳನ್ನು ಸೇವಿಸಿದರೆ ಅಥವಾ ಸಿಗರೇಟ್ ಸೇದಿದರೆ, ನಿಮ್ಮ ಉಗುರುಗಳು ಬಣ್ಣ ಬದಲಾಗಿ ಉಗುರುಗಳನ್ನು ಮತ್ತಷ್ಟು ಸೆನ್ಸಿಟೀವ್ ಆಗುತ್ತದೆ. ಉಗುರುಗಳ ಆರೋಗ್ಯ ಕಾಪಾಡಲು ಸಮತೋಲಿತ ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸಬೇಕಾಗುತ್ತದೆ. ಮದ್ಯ ಮತ್ತು ಧೂಮಪಾನದಿಂದ ದೂರವಿರಿ.

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್