Gram Flour Face Pack: ಕಡ್ಲೆಹಿಟ್ಟಿನ ಫೇಸ್ ಪ್ಯಾಕ್​​ನಿಂದ ತ್ವಚೆ ಸಮಸ್ಯೆ ದೂರ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 04, 2023 | 6:44 PM

ಕಡ್ಲೆಹಿಟ್ಟು ನೈಸರ್ಗಿಕ ಶುದ್ಧೀಕರಣ ಗುಣವನ್ನು ಹೊಂದಿದ್ದು, ಅದು ಚರ್ಮದಿಂದ ಕೊಳೆ, ಕಲ್ಮಶ ಮತ್ತು  ಜಿಡ್ಡುತನವನ್ನು ತೆಗೆದುಹಾಕಿ ಚರ್ಮವನ್ನು ಸ್ವಚ್ಛವಾಗಿಡುತ್ತದೆ. ಹೀಗಿರುವಾಗ ನೀವು ಮುಖದಲ್ಲಿನ ಮೊಡವೆಗಳು, ಕಲೆಗಳು ಮತ್ತು ಸುಕ್ಕುಗಳ ಸಮಸ್ಯೆಯನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಬಳಸುವ ಬದಲು ಸುಲಭವಾಗಿ ಮನೆಯಲ್ಲಿಯೇ ಕಡ್ಲೆಹಿಟ್ಟಿನ ಫೇಸ್ ಪ್ಯಾಕ್ ಮಾಡುವ ಮೂಲಕ ವಿವಿಧ ರೀತಿಯ ತ್ವಚೆಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಬಹುದು.  

Gram Flour Face Pack: ಕಡ್ಲೆಹಿಟ್ಟಿನ ಫೇಸ್ ಪ್ಯಾಕ್​​ನಿಂದ ತ್ವಚೆ ಸಮಸ್ಯೆ ದೂರ
ಸಾಂದರ್ಭಿಕ ಚಿತ್ರ
Follow us on

ಪ್ರತಿಯೊಬ್ಬರೂ ತಮ್ಮ ತ್ವಚೆಯು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಪಾರ್ಲರ್ಗೆ ಹೋಗುವ ಮೂಲಕ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಉತ್ಪನ್ನಗಳನ್ನು ಬಳಸುವ ಮೂಲಕ ತ್ವಚೆಯ ಆರೈಕೆಯನ್ನು ಮಾಡುತ್ತಾರೆ. ಈ ಉತ್ಪನ್ನಗಳು ದುಬಾರಿ ಮಾತ್ರವಲ್ಲದೆ ರಾಸಯನಿಕಯುಕ್ತವಾಗಿದೆ. ಇದರಿಂದ ತ್ವಚೆಗೆ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ. ಹೀಗಿರುವಾಗ ದುಬಾರಿ ಉತ್ಪನ್ನಗಳ ಬದಲು ಸಲುಭವಾಗಿ ಮನೆಯಲ್ಲಿ ಲಭ್ಯವಿರುವ ಕಡ್ಲೆಹಿಟ್ಟಿನಿಂದ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ದೀರ್ಘಕಾಲದವರೆಗೆ ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು. ಕಡ್ಲೆಹಿಟ್ಟು ನೈಸರ್ಗಿಕ ಶುದ್ಧೀಕರಣ ಗುಣವನ್ನು ಹೊಂದಿದ್ದು, ಅದು ಚರ್ಮದಿಂದ ಕೊಳೆ, ಕಲ್ಮಶ ಮತ್ತು  ಜಿಡ್ಡುತನವನ್ನು ತೆಗೆದುಹಾಕಿ ಚರ್ಮವನ್ನು ಸ್ವಚ್ಛವಾಗಿಡುತ್ತದೆ ಮತ್ತು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.   ಅಲ್ಲದೆ ಕಡ್ಲೆಹಿಟ್ಟು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು,  ಇದು ಮಖದಲ್ಲಿನ ಮೊಡವೆ, ಕಲೆಗಳು ಮತ್ತು ಸುಕ್ಕುಗಳ ಸಮಸ್ಯೆಯನ್ನು ಹೋಗಲಾಡಿಸಲು  ಸಹಕಾರಿಯಾಗಿದೆ.

ಕಡ್ಲೆಹಿಟ್ಟಿನ ಈ ಮೂರು ಬಗೆಯ ಫೇಸ್ ಪ್ಯಾಕ್ ನಿಮ್ಮ ಹೊಳೆಯುವ ಚರ್ಮಕ್ಕೆ ಸಹಕಾರಿ:

ಕಡ್ಲೆಹಿಟ್ಟು ಮತ್ತು ಮುಲ್ತಾನಿಮಿಟ್ಟಿ ಫೇಸ್ ಪ್ಯಾಕ್:

ಕಡ್ಲೆಹಿಟ್ಟು ಚರ್ಮದ ಆರೈಕೆಗೆ ತುಂಬಾ ಪ್ರಯೋಜನಕಾರಿಯಾಗಿದೆ.  ಅದೇ ರೀತಿ ಮುಲ್ತಾನಿಮಿಟ್ಟಿ ಕೂಡಾ ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇವೆರಡರ ಮಿಶ್ರಣದ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚುವುದರಿಂದ ಕಲೆಗಳು ಮತ್ತು ಮೊಡವೆಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ   ಎರಡು ಚಮಚ ಮುಲ್ತಾನಿ ಮಿಟ್ಟಿ ಮತ್ತು ಒಂದು ಚಮಚ ಕಡ್ಲೆಹಿಟ್ಟನ್ನು ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು, ಮುಖಕ್ಕೆ ಹಚ್ಚಿ  ಮತ್ತು ಸುಮಾರು 15 ರಿಂದ 20 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡರಿಂದ ಮೂರು ಬಾರಿ ಈ ಫೇಸ್ ಪ್ಯಾಕ್ ಹಚ್ಚುವುದರಿಂದ ಮೊಡವೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕಡ್ಲೆ ಹಿಟ್ಟು ಮತ್ತು ಮೊಸರಿನ ಫೇಸ್ ಪ್ಯಾಕ್:

ಕಡ್ಲೆಹಿಟ್ಟನ್ನು ಮೊಸರಿನೊಂದಿಗೆ ಬೆರೆಸಿ ಮುಖಕ್ಕೆ ಅನ್ವಯಿಸುವುದರಿಂದ ಸೂರ್ಯನ ನೇರಳಾತಿತ ಕಿರಣಗಳಿಂದ ಉಂಟಾಗುವ ಟ್ಯಾನಿಂಗ್  ಸಮಸ್ಯೆಯನ್ನು ಹೋಗಲಾಡಿಸಬಹುದು. ಇದಕ್ಕಾಗಿ ಎರಡು ಚಮಚ ಕಡ್ಲೆಹಿಟ್ಟಿಗೆ ಒಂದು ಚಮಚ ಮೊಸರು ಮತ್ತು ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ, ಹಾಗೂ  20 ನಿಮಿಷಗಳ ಬಳಿಕ ಮುಖವನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡರಿಂದ ಮೂರು ಬಾರಿ ಈ ಫೇಸ್ ಅನ್ವಯಿಸುವ ಮೂಲಕ ಟ್ಯಾನಿಂಗ್ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: ಮುಖದ ಕಾಂತಿಯನ್ನು ಕಾಪಾಡುವ ಸಿಂಪಲ್ ಫೇಸ್​ ಪ್ಯಾಕ್​ಗಳು ಇಲ್ಲಿವೆ

ಕಡ್ಲೆಹಿಟ್ಟು ಮತ್ತು ಅರಶಿನ ಫೇಸ್ ಪ್ಯಾಕ್:

ಅರಶಿನವು ಉರಿಯೂತ ನಿವಾರಕ ಗುಣಗಳಿಂದ ಕೂಡಿದೆ. ಇದು ಚರ್ಮಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಅರಶಿನವನ್ನು ಕಡ್ಲೆ ಹಿಟ್ಟಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಅರಶಿನ ಮತ್ತು ಕಡ್ಲೆಹಿಟ್ಟಿ ಫೇಸ್ ಪ್ಯಾಕ್ ಮಾಡಲು ನೀವು ಎರಡು ಚಮಚ ಕಡ್ಲೆಹಿಟ್ಟು ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ಅರಶಿನವನ್ನು ಹಾಕಿ ರೋಸ್ ವಾಟರ್ ಅಥವಾ ಮೊಸರು ಅಥವಾ ನಿಂಬೆರಸವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಮತ್ತು 20 ನಿಮಿಷಗಳ ಬಳಿಕ ಮುಖವನ್ನು ತೊಳೆಯಿರಿ. ಈ ಫೇಸ್ ಪ್ಯಾಕ್ ನಿಮ್ಮ ಮುಖದ ಹೊಳಪನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ