ಸಂಬಂಧವನ್ನು ಜೋಪಾನವಾಗಿ ಕಾಪಾಡಿಕೊಂಡು ಹೋಗುವುದು ಸುಲಭದ ಮಾತಲ್ಲ. ಸಂಬಂಧದಲ್ಲಾಗುವ ಸಣ್ಣ ಪುಟ್ಟ ತಪ್ಪುಗಳೇ ಬಿರುಕು ಮೂಡಲು ಕಾರಣವಾಗುತ್ತದೆ. ಹೀಗಾಗಿ ಸಂಗಾತಿಗಳಿಬ್ಬರೂ ಅಥವಾ ಪ್ರೇಮಿಗಳಿಬ್ಬರೂ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡರೂ ಸಾಲುವುದಿಲ್ಲ. ಕೆಲವೊಮ್ಮೆ ಹುಡುಗರ ಈ ಗುಣಗಳಿಂದ ಹುಡುಗಿಯರು ದೂರವಾಗುವ ಸಂದರ್ಭವೇ ಹೆಚ್ಚು. ಹುಡುಗರೇ, ಈ ವಿಚಾರಗಳು ಇಬ್ಬರ ಬಂಧವನ್ನು ಹಾಳು ಮಾಡುತ್ತಿದ್ದರೆ ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳುವುದು ಮುಖ್ಯ.
* ಖಾಸಗಿ ಅಂತರವನ್ನು ಕಸಿದುಕೊಳ್ಳುವುದು : ಸಂಬಂಧವು ಎಷ್ಟೇ ಪ್ರೀತಿ ಹಾಗೂ ಕಾಳಜಿಯನ್ನು ಹೊಂದಿದ್ದರೂ, ಖಾಸಗಿ ಅಂತರವೆನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ದಿನವಿಡಿ ತನ್ನೊಂದಿಗೆ ಮಾತನಾಡಬೇಕು, ಎಲ್ಲಿ ಹೋಗುವುದಾದರೂ ತನ್ನ ಅನುಮತಿ ಪಡೆದುಕೊಂಡು ಹೋಗಬೇಕು ಎನ್ನುವ ಹುಡುಗರೆಂದರೆ ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಒಂದು ವೇಳೆ ಇಂತಹ ಹುಡುಗರ ಪ್ರೀತಿಯಲ್ಲಿ ಹುಡುಗಿಯರು ಬಿದ್ದಿದ್ದರೆ ತಾನು ಬಂಧಿಯಲ್ಲಿದ್ದೇವೆ ತನಗೆ ಸ್ವಾತಂತ್ರವಿಲ್ಲ ಎನ್ನುವ ಭಾವ ಮೂಡಬಹುದು. ಈ ಗುಣಗಳು ಬ್ರೇಕಪ್ ಹಂತಕ್ಕೂ ತಲುಪಬಹುದು.
* ಸಣ್ಣ ಪುಟ್ಟ ವಿಷಯಗಳಿಗೂ ರೇಗಾಡುವ ವ್ಯಕ್ತಿ : ಪ್ರತಿಯೊಬ್ಬ ಹುಡುಗಿಯು ತನ್ನ ಸಂಗಾತಿಯು ತನ್ನ ಜೊತೆಗೆ ಪ್ರೀತಿಯಿಂದ ನಡೆದುಕೊಳ್ಳಲಿ ಎಂದು ಬಯಸುವುದು ಸಹಜ. ಆದರೆ ಸಣ್ಣ ಪುಟ್ಟ ವಿಷಯಗಳಿಗೂ ಕಿರುಚಾಡುತ್ತಾ ರೇಗಾಡುತ್ತಿದ್ದರೆ ಅಂತಹ ವ್ಯಕ್ತಿಗಳು ಯಾರಿಗೂ ಕೂಡ ಇಷ್ಟವಾಗುವುದಿಲ್ಲ. ಕೆಲವು ಸೂಕ್ಷ್ಮ ವಿಚಾರಗಳನ್ನು ಪ್ರೀತಿಯಿಂದ ಹೇಳಿದರೇನೇ ಒಳ್ಳೆಯದು. ಏರು ಧ್ವನಿಯಲ್ಲಿ ಹೇಳುವುದರಿಂದ ಸಂಬಂಧವು ಹಾಳಾಗುತ್ತದೆ. ಅಂತಹ ಗುಣವು ತನ್ನ ಸಂಗಾತಿ ಅಥವಾ ಹುಡುಗನಲ್ಲಿದ್ದರೆ ಆತನನ್ನು ಆದಷ್ಟು ದೂರವಿಡುತ್ತಾಳೆ.
* ಪದೇ ಪದೇ ಅನುಮಾನಿಸುವುದು : ಪ್ರತಿಯೊಬ್ಬ ವ್ಯಕ್ತಿಗೂ ಸ್ವಾಭಿಮಾನ ಹಾಗೂ ಆತ್ಮಗೌರವ ಎನ್ನುವುದಿರುತ್ತದೆ. ಫೋನ್ ಬ್ಯುಸಿ ಬಂದಾಗ ಈ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದರೆ ಯಾವ ಹುಡುಗಿಯು ಇದನ್ನು ಇಷ್ಟ ಪಡುವುದಿಲ್ಲ. ಹೀಗಾಗಿ ಅನಮಾನಿಸುವ ಹುಡುಗರೆಂದರೆ ಹುಡುಗಿಯರಿಗೆ ಅಷ್ಟಕಷ್ಟೆ. ಪ್ರಾರಂಭದಲ್ಲಿ ಇದು ಪೊಸೆಸಿವ್ ನೆಸ್ ಎಂದು ಭಾವಿಸಿದರೂ ಕ್ರಮೇಣವಾಗಿ ದ್ವೇಷಿಸಲು ಪ್ರಾರಂಭಿಸುತ್ತಾರೆ.
ಇದನ್ನೂ ಓದಿ: ಆಷಾಢ ಮಾಸಕ್ಕೆ ಗಂಡ ಹೆಂಡತಿ ಒಟ್ಟಿಗೆ ಇರುವಂತಿಲ್ಲ ಯಾಕೆ?
* ಹಳೆಯ ಸಂಬಂಧದ ಬಗ್ಗೆ ಪದೇ ಪದೇ ಚುಚ್ಚಿ ಮಾತನಾಡುವ ಸ್ವಭಾವ : ಸಾಮಾನ್ಯವಾಗಿ ಸಂಬಂಧವು ಚೆನ್ನಾಗಿರಬೇಕೆಂದರೆ ಯಾವುದೇ ಮುಚ್ಚುಮರೆ ಇರಬಾರದು. ಹೀಗಾಗಿ ಹುಡುಗಿ ತನ್ನ ಹುಡುಗ ಅಥವಾ ಸಂಗಾತಿಯ ಬಳಿ ವೈಯುಕ್ತಿಕ ವಿಷಯಗಳನ್ನು ಹಂಚಿಕೊಂಡಿರಬಹುದು. ಆದರೆ ಹಳೆಯ ಸಂಬಂಧದ ವಿಷಯವನ್ನೇ ಇಟ್ಟುಕೊಂಡು ಚುಚ್ಚಿ ಮಾತನಾಡುವ ಹುಡುಗನನ್ನು ಹುಡುಗಿಯು ಇಷ್ಟ ಪಡುವುದೇ ಇಲ್ಲ. ಪ್ರಾರಂಭದಲ್ಲಿ ಸಹಿಸಿಕೊಂಡು ಹೋದರೂ ತದನಂತರದಲ್ಲಿ ದ್ವೇಷಿಸಲು ಪ್ರಾರಂಭಿಸುವುದಂತೂ ಖಂಡಿತ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ