ಹುಡುಗಿಯರೇ… ಈ ರೀತಿ ಮಾಡಿದರೆ ಮುಖದಲ್ಲಿ ಎಷ್ಟೇ ಮೊಡವೆಗಳಿದ್ದರೂ ಮಾಯವಾಗಿ ಮುಖದ ಕಾಂತಿ ಹೆಚ್ಚುತ್ತದೆ
ಮುಖದಲ್ಲಿ ಮೊಡವೆಗಳಾಗುವುದು ಸಹಜ. ಎಲ್ಲರಿಗೂ ಒಂದಲ್ಲಾ ಒಂದು ಬಾರಿ ಈ ರೀತಿಯ ಸಮಸ್ಯೆ ಕಂಡು ಬರದಿರುವುದಿಲ್ಲ. ಆದರೆ ಈ ರೀತಿಯ ಸಮಸ್ಯೆಗೆ ರಾಸಾಯನಿಕ ಪ್ರಾಡಕ್ಟ್ ಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ, ಸೌಂದರ್ಯ ಹಾಳು ಮಾಡುವ ಮೊಡವೆಗಳಿಂದ ಮುಕ್ತಿ ಪಡೆಯಬಹುದು. ಸೌಂದರ್ಯ ತಜ್ಞರು ಈ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಲು ನೈಸರ್ಗಿಕ ವಿಧಾನಗಳನ್ನು ಆಯ್ಕೆಮಾಡಲು ಸಲಹೆ ನೀಡುತ್ತಾರೆ. ಹಾಗಾದರೆ, ಮೊಡವೆ ಕಡಿಮೆ ಮಾಡಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಪೌಷ್ಟಿಕಾಂಶದ ಕೊರತೆಯ ಜೊತೆಗೆ, ಮಾಲಿನ್ಯ, ಧೂಳು ಮತ್ತು ಕೊಳಕು ಸೌಂದರ್ಯವನ್ನು ಹಾಳು ಮಾಡುತ್ತದೆ. ಇದರ ಪರಿಣಾಮ ಮುಖದಲ್ಲಿ ಮೊಡವೆಗಳನ್ನು ಮತ್ತು ಕಪ್ಪು ಕಲೆಗಳನ್ನು ಉಂಟುಮಾಡುತ್ತವೆ. ಮಾತ್ರವಲ್ಲ, ಮೊಡವೆಗಳು ಹಣೆಯ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಇವುಗಳನ್ನು ನಿರ್ಲಕ್ಷಿಸುವುದರಿಂದ ಸಮಸ್ಯೆ ಇನ್ನಷ್ಟು ಹದಗೆಡಬಹುದು. ಈ ರೀತಿ ಹಣೆಯ ಮೇಲೆ ಕಂಡುಬರುವ ಮೊಡವೆಗಳನ್ನು ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ಹಲವು ರೀತಿಯ ಪ್ರಾಡಕ್ಟ್ ಗಳು ಲಭ್ಯವಿದೆ. ಆದರೆ ಇದನ್ನು ಬಳಕೆ ಮಾಡುವುದರಿಂದ ಕೆಲವು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಆದ್ದರಿಂದ, ಸೌಂದರ್ಯ ತಜ್ಞರು ಈ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಲು ನೈಸರ್ಗಿಕ ವಿಧಾನಗಳನ್ನು ಆಯ್ಕೆಮಾಡಲು ಸಲಹೆ ನೀಡುತ್ತಾರೆ. ಹಾಗಾದರೆ, ಮೊಡವೆ (Pimple) ಕಡಿಮೆ ಮಾಡಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅಲೋವೆರಾ:
ಅಲೋವೆರಾ ಪ್ರಯೋಜನಗಳ ಬಗ್ಗೆ ನಿರ್ದಿಷ್ಟವಾಗಿ ಹೇಳಬೇಕಾಗಿಲ್ಲ. ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅಲೋವೆರಾ ಜೆಲ್ ಚರ್ಮವನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಹಣೆಯ ಮೇಲಿನ ಮೊಡವೆಗಳ ಮೇಲೆ ಸ್ವಲ್ಪ ಅಲೋವೆರಾ ಜೆಲ್ ಅನ್ನು ಹಚ್ಚಬೇಕು. ಬೆಳಿಗ್ಗೆ ಎದ್ದು ಅಥವಾ ಹಚ್ಚಿ ಅರ್ಧ ಗಂಟೆ ಬಳಿಕ ಅದನ್ನು ಶುದ್ಧ ನೀರಿನಿಂದ ತೊಳೆಯಬೇಕು. ಈ ರೀತಿ ಮಾಡಿದರೆ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.
ದಾಲ್ಚಿನ್ನಿ:
ಭಕ್ಷ್ಯಗಳ ಪರಿಮಳವನ್ನು ಹೆಚ್ಚಿಸುವ ದಾಲ್ಚಿನ್ನಿ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಇದಕ್ಕಾಗಿ, ದಾಲ್ಚಿನ್ನಿ ಪುಡಿಯನ್ನು ತೆಗೆದುಕೊಂಡು ಸ್ವಲ್ಪ ಜೇನುತುಪ್ಪದೊಂದಿಗೆ ಬೆರೆಸಿ. ಆ ಪೇಸ್ಟ್ ಅನ್ನು ಹಣೆಯ ಮೇಲಿನ ಮೊಡವೆಗಳ ಮೇಲೆ ಹಚ್ಚಬೇಕು. ನೀವಿದನ್ನು ಕೆಲವು ದಿನಗಳ ವರೆಗೆ ತಪ್ಪದೆ ಮುಖಕ್ಕೆ ಹಚ್ಚಿದರೆ ಮೊಡವೆಗಳು ಕಡಿಮೆಯಾಗಿ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.
ಇದನ್ನೂ ಓದಿ: 8 ರಿಂದ 16 ವರ್ಷದೊಳಗಿನ ಮಕ್ಕಳಲ್ಲಿ ಮೊಡವೆ ಬೀಳಲು ಈ ಆಹಾರಗಳು ಕಾರಣ
ಪುದೀನ, ರೋಸ್ ವಾಟರ್:
ಮುಖದ ಮೇಲಿರುವ ಮೊಡವೆಗಳಿಂದ ಮುಕ್ತಿ ಪಡೆಯಲು ಮತ್ತು ಚರ್ಮದ ಆರೈಕೆ ಮಾಡಲು ಪುದೀನವನ್ನು ಬಳಕೆ ಮಾಡಬೇಕು. ಅದಕ್ಕಾಗಿ, 10 ರಿಂದ 12 ಪುದೀನ ಎಲೆಗಳನ್ನು ಪುಡಿಮಾಡಿ ಸ್ವಲ್ಪ ರೋಸ್ ವಾಟರ್ ನೊಂದಿಗೆ ಮಿಶ್ರಣ ಮಾಡಿ. ಆ ಪೇಸ್ಟ್ ಅನ್ನು ಮೊಡವೆಗಳ ಮೇಲೆ ಹಚ್ಚಿ ಕೆಲವು ನಿಮಿಷಗಳ ನಂತರ ನೀರಿನಿಂದ ತೊಳೆದರೆ ಮೊಡವೆ ಮಾತ್ರವಲ್ಲ ಮುಖದ ಮೇಲಿರುವ ಕಲೆಗಳಿಂದಲೂ ಮುಕ್ತಿ ಸಿಗುತ್ತದೆ.
ಗ್ರೀನ್ ಟೀ ಟೋನರ್:
ಚರ್ಮವನ್ನು ಆರೋಗ್ಯಕರವಾಗಿಡಲು, ರಾತ್ರಿ ಮಲಗುವ ಮುನ್ನ ಟೋನರ್ ಹಚ್ಚುವುದು ಉತ್ತಮ. ನೀವು ಗ್ರೀನ್ ಟೀ ಬಳಸಿ ಮನೆಯಲ್ಲಿಯೇ ನೈಸರ್ಗಿಕ ಟೋನರ್ ತಯಾರಿಸಬಹುದು. ಇದಕ್ಕಾಗಿ, ಗ್ರೀನ್ ಟೀ ಪುಡಿಯನ್ನು ತೆಗೆದುಕೊಂಡು ಸ್ವಲ್ಪ ರೋಸ್ ವಾಟರ್ ನೊಂದಿಗೆ ಬೆರೆಸಿ, ನಂತರ ಅದನ್ನು ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಇದನ್ನು ನಿಯಮಿತವಾಗಿ ಬಳಸಿದರೆ, ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ತಪ್ಪಿಯೂ ಈ ರೀತಿ ಮಾಡಬೇಡಿ
ಯಾವುದೇ ಕಾರಣಕ್ಕೂ ಹಣೆಯ ಮೇಲಿನ ಮೊಡವೆಗಳನ್ನು ಸ್ಕ್ರಬ್ ಮಾಡಬೇಡಿ ಅಥವಾ ಅದನ್ನು ಉಗುರಿನಿಂದ ಕಿವುಚಬೇಡಿ. ಈ ರೀತಿ ಮಾಡುವುದರಿಂದ ಮೊಡವೆಗಳು ಇನ್ನಷ್ಟು ಹೆಚ್ಚಾಗುತ್ತದೆ. ಮಾತ್ರವಲ್ಲ ಮುಖದಲ್ಲಿ ಕಪ್ಪು ಕಲೆಗಳು ಹಾಗೆಯೇ ಉಳಿದುಹೋಗುತ್ತದೆ. ಹಾಗಾಗಿ ಮೇಲೆ ತಿಳಿಸಿದ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ. ಮೊಡವೆಗಳನ್ನು ಬಹುಬೇಗ ಕಡಿಮೆ ಮಾಡಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




