
ಶುಭದ ಸಂಕೇತವಾಗಿರುವ ಚಿನ್ನ (Gold) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯ ನಾರಿಮಣಿಯರಿಗಂತೂ ಚಿನ್ನ ಎಂದ್ರೆ ಪಂಚಪ್ರಾಣ. ಹೀಗೆ ಮಹಿಳೆಯರು ಹಣವನ್ನು ಕೂಡಿಟ್ಟು ಚಿನ್ನವನ್ನು ಖರೀದಿ ಮಾಡುತ್ತಾರೆ. ವಿಶೇಷವಾಗಿ ಅಕ್ಷಯ ತೃತೀಯ ದೀಪಾವಳಿ ಹಬ್ಬದಂದು ಚಿನ್ನ ಖರೀದಿಸಿದರೆ ತುಂಬಾನೇ ಶ್ರೇಷ್ಠ ಅನ್ನೋ ಕಾರಣಕ್ಕೆ ಹಲವರು ಈ ಶುಭ ಸಂದರ್ಭಗಳಲ್ಲಿಯೇ ಹೆಚ್ಚಾಗಿ ಚಿನ್ನಾಭರಣ ಕೊಳ್ಳುತ್ತಾರೆ. ಯಾವ ಹಬ್ಬದ ದಿನ ಬಂಗಾರ ಕೊಳ್ಳುವುದು ಶುಭವೆಂದು ಹೆಚ್ಚಿನವರಿಗೆ ಗೊತ್ತಿದೆ, ಆದ್ರೆ ವಾರದ ಯಾವ ದಿನ (best day to buy gold) ಚಿನ್ನ ಖರೀದಿ ಮಾಡಿದ್ರೆ ಒಳ್ಳೆಯದು ಎಂದು ಹಲವರಿಗೆ ಗೊತ್ತಿಲ್ಲ. ಹಾಗಿದ್ರೆ ವಾರದ ಯಾವ ದಿನ ಬಂಗಾರವನ್ನು ಖರೀದಿಸಿ, ಮನೆಗೆ ತಂದ್ರೆ ಅದೃಷ್ಟ ಎಂಬ ಮಾಹಿತಿಯನ್ನು ತಿಳಿಯಿರಿ.
ಮದುವೆ, ಗೃಹ ಪ್ರವೇಶ ಇತ್ಯಾದಿ ಶುಭ ಸಮಾರಂಭಗಳಿಗೆ ಸರಿಯಾದ ಸಮಯ, ಘಳಿಗೆಯನ್ನು ಆಯ್ಕೆ ಮಾಡುವಂತೆ, ಶುಭದ ಸಂಕೇತವಾಗಿರುವ ಚಿನ್ನವನ್ನು ಕೂಡ ಸರಿಯಾದ ಸಮಯದಲ್ಲಿ ಖರೀದಿಸುವುದು ಬಹಳ ಮುಖ್ಯ. ಇದಕ್ಕಾಗಿಯೇ ಜನ ದೀಪಾವಳಿ, ಅಕ್ಷಯ ತೃತೀಯ ಹೀಗೆ ಹಬ್ಬದ ಸಂದರ್ಭದಲ್ಲಿ ಬಂಗಾರ ಖರೀದಿ ಮಾಡುತ್ತಾರೆ. ಇದರ ಹೊರತಾಗಿ ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ?
ಶಾಸ್ತ್ರಗಳಲ್ಲಿ ಗುರುವಾರ ಮತ್ತು ಭಾನುವಾರ ಚಿನ್ನ ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಚಿನ್ನವು ಸೂರ್ಯ ಮತ್ತು ಗುರು ಗ್ರಹಕ್ಕೆ ಸಂಬಂಧಿಸಿರುವುದರಿಂದ ಈ ದಿನಗಳಲ್ಲಿ ಖರೀದಿಸಿದ ಚಿನ್ನವು ನಿಮ್ಮ ಜಾತಕದಲ್ಲಿ ಗುರು ಮತ್ತು ಸೂರ್ಯನ ಸ್ಥಾನವನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ. ಇದಲ್ಲದೆ ಪುಷ್ಯ ನಕ್ಷತ್ರ ಯಾವ ದಿನ ಬರುತ್ತದೆಯೋ ಆ ದಿನ ಚಿನ್ನ ಖರೀದಿಸಿದರೂ ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಬಂಗಾರ ಖರೀದಿಸಿದರೆ ಲಕ್ಷ್ಮೀ ದೇವಿಯ ಆಶೀರ್ವಾದ ಲಭಿಸುತ್ತದೆ, ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.
ಇದನ್ನೂ ಓದಿ: ಗಂಡಸರೇ… ಪರ್ಸ್‌ನಲ್ಲಿ ನಿಮ್ ಹೆಂಡ್ತಿ ಫೋಟೋ ಇಟ್ಕೊಂಡ್ರೆ ಏನಾಗುತ್ತೆ ಗೊತ್ತಾ?
ಶನಿವಾರ ಚಿನ್ನ ಖರೀದಿಸುವುದು ಅಶುಭದ ಸಂಕೇತವಾಗಿದೆ. ಚಿನ್ನ ಸೂರ್ಯನ ಸಂಕೇತವಾಗಿದ್ದು, ಶನಿ ಮತ್ತು ಸೂರ್ಯ ದ್ವೇಷ ಭಾವನೆಯನ್ನು ಹೊಂದಿದ್ದಾರೆ. ಆದ್ದರಿಂದ ಶನಿ ದೇವರಿಗೆ ಸಮರ್ಪಿತವಾದ ಶನಿವಾರದಂದು ಚಿನ್ನ ಖರೀದಿ ಮಾಡಬಾರದು ಎಂದು ಹೇಳಲಾಗುತ್ತದೆ. ಶನಿವಾರ ಚಿನ್ನ ಖರೀದಿಸುವುದರಿಂದ ಅದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ಮನೆಯನ್ನು ಬಡತನ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಶನಿವಾರ ಬಂಗಾರ ಕೊಳ್ಳಬೇಡಿ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ