Health Tips: ಕೂದಲಿನ ಬೆಳವಣಿಗೆ ಈ ಆಹಾರಗಳಿಂದ ಸಾಧ್ಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 17, 2022 | 12:40 PM

ಕೂದಲಿನ ಆರೈಕೆಗೆ ರಾಸಾಯನಿಕ ಎಣ್ಣೆಗಳನ್ನು ಬಳಸುವ ಬದಲು, ಮನೆಯಲ್ಲಿ ತಯಾರಿಸಿದ ಎಣ್ಣೆಗಳಿಂದ ನಮ್ಮ ತಲೆಗೆ ಹಾಕಿ ಮಸಾಜ್ ಮಾಡಬೇಕು ಇದರ ಜೊತೆಗೆ ನಮ್ಮ ಆಹಾರ ಪದ್ಧತಿಯು ಕೂದಲಿನ ಆರೈಕೆಯ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ.

Health Tips: ಕೂದಲಿನ ಬೆಳವಣಿಗೆ ಈ ಆಹಾರಗಳಿಂದ ಸಾಧ್ಯ
ಸಾಂದರ್ಭಿಕ ಚಿತ್ರ
Follow us on

ಕೂದಲು ಉದುರುವುದು ಸಹಜ, ಆದರೆ ಅದನ್ನು ತಡೆಯುವ ಕೆಲವೊಂದು ಮಾರ್ಗಗಳು ಇದೆ. ನಾವು ಕೂದಲನ್ನು  ಆರೈಕೆ ಮಾಡಲು ಹಲವು ರೀತಿಯಲ್ಲಿ ಖರ್ಚುಗಳನ್ನು ಮಾಡುತ್ತೇವೆ. ಆದರೆ ಅವುಗಳಿಂದ ಯಾವುದೇ ಉತ್ತಮ ಫಲಿತಾಂಶಗಳು ಇರುವುದಿಲ್ಲ. ಹಾಗಾಗಿ ಕೂದಲನ್ನು ಹೇಗೆ  ಪೋಷಣೆ ಮತ್ತು ಪಾಲನೆ ಮಾಡುವುದು ಎಂಬುದರ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳಬೇಕು. ಕೂದಲು ಉದುರುವಿಕೆಯನ್ನು ತಡೆಯಲು ಸುಲಭ ದಾರಿಗಳು ಇದೆ ಮತ್ತು ಇದರ ಆರೈಕೆ ಹೇಗೆ ಎಂಬ ಸಲಹೆಯನ್ನು ಇಲ್ಲಿ ನೀಡಲಾಗಿದೆ. ಕೂದಲಿನ ಆರೈಕೆಗೆ ರಾಸಾಯನಿಕಗಳ ಬಳಕೆಯನ್ನು ಮಾಡಬಾರದು, ಕೂದಲಿನ ಆರೈಕೆ ನೈಸರ್ಗಿಕವಾಗಿರಬೇಕು. ಕೂದಲಿನ ಆರೈಕೆ ಆಹಾರ ಪದ್ಧತಿಯಿಂದಲ್ಲೂ ಸಾಧ್ಯ ಎಂಬುದನ್ನು ಸಂಶೋಧನೆ ತಿಳಿಸುತ್ತದೆ. ನಾವು ಯಾವ ಆಹಾರವನ್ನು  ಅನುಸರಿಸಬೇಕು ಮತ್ತು ಅದನ್ನು ಹೇಗೆ ನಮ್ಮ ದಿನನಿತ್ಯದ ಆಹಾರದಲ್ಲಿ ಅಳವಡಿಸಬೇಕು ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು.

ಕೂದಲಿನ ಆರೈಕೆಗೆ ರಾಸಾಯನಿಕ ಎಣ್ಣೆಗಳನ್ನು ಬಳಸುವ ಬದಲು, ಮನೆಯಲ್ಲಿ ತಯಾರಿಸಿದ ಎಣ್ಣೆಗಳಿಂದ ನಮ್ಮ ತಲೆಗೆ ಹಾಕಿ ಮಸಾಜ್ ಮಾಡಬೇಕು ಇದರ ಜೊತೆಗೆ ನಮ್ಮ ಆಹಾರ ಪದ್ಧತಿಯು ಕೂದಲಿನ ಆರೈಕೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಇಲ್ಲಿ ಯಾವ ಆಹಾರವನ್ನು ನಾವು ಸೇವನೆ ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಏಕೆಂದರೆ ಕೂದಲಿನ ಆರೈಕೆ ಆಹಾರದಲ್ಲಿ ಇರುವ ಕೆಲವೊಂದು ಅಂಶಗಳು ಪ್ರಾಮುಖ್ಯತೆಯನ್ನು ವಹಿಸುತ್ತದೆ. ಆಹಾರದ ಪದ್ಧತಿಗಳು ಕ್ರಮನುಸಾರವಾಗಿದ್ದರೆ ನಮ್ಮ ಕೂದಲಿನ ಬೆಳವಣಿಗೆ ಇನ್ನಷ್ಟು ಪರಿಣಾಮಕಾರಿಯಾಗಿರುವುದು.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ನೀವು ಸರಿಯಾದ ಕ್ರಮದಲ್ಲಿ ಉಸಿರಾಡುತ್ತಿದ್ದೀರಾ?

ಇದನ್ನೂ ಓದಿ
International Yoga Day 2022 : ನೀವು ಸರಿಯಾದ ಕ್ರಮದಲ್ಲಿ ಉಸಿರಾಡುತ್ತಿದ್ದೀರಾ?
International Yoga Day 2022: ಈ ಆಸನಗಳು ಮಧುಮೇಹ, ರಕ್ತದೊತ್ತಡ ನಿಯಂತ್ರಣಕ್ಕೆ
Ayurvedic tips: ನೀವು ತುರಿಕೆ ಮತ್ತು ಫಂಗಲ್ ಸೋಂಕನ್ನು ಎದುರಿಸುತ್ತಿದ್ದರೆ ಈ ಪದಾರ್ಥಗಳನ್ನು ತಿನ್ನಬೇಡಿ..!
Personality Test: ನಿಮ್ಮ ಮೂಗು ನಿಮ್ಮ ಬಗ್ಗೆ ಏನು ಹೇಳುತ್ತಿದೆ?

ಆರೋಗ್ಯಕರ ಕೂದಲಿಗೆ ಈ ಆಹಾರಗಳ ಸೇವನೆ

ಕರಿಬೇವು

ಕರಿಬೇವಿನ ಎಲೆಗಳು ಬೀಟಾ-ಕ್ಯಾರೋಟಿನ್‌ನ ಸಮೃದ್ಧಯ ಮೂಲವಾಗಿದೆ ಮತ್ತು ಕೂದಲಿನ ಆರೈಕೆಗೆ ಪ್ರಮುಖವಾದ ಪ್ರೋಟೀನ್‌ಗಳನ್ನು ಒದಗಿಸುತ್ತದೆ. ಇದು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.  ನಿಮ್ಮ ಕೂದಲಿಗೆ ಅಗತ್ಯ ಪೋಷಕಾಂಶಗಳು ನೀಡುವುದರ ಜೊತೆಗೆ  ಬೆಳೆಯಲು ಮತ್ತು ಹೊಳೆಯಲು ಉತ್ತೇಜನವನ್ನು ನೀಡುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸಿ. ಒಣಗಿದ ಕರಿಬೇವಿನ ಎಲೆಗಳ ಪುಡಿಯನ್ನು ಬೇಯಿಸಿದ ಅನ್ನದೊಂದಿಗೆ ಬೆರೆಸಿ ಸೇವನೆ ಮಾಡಿದರೆ  ಕೂದಲಿನ ಅಣುಗಳು ಬೆಳೆಯುತ್ತದೆ.

ಹಸಿರು ಪದಾರ್ಥಗಳು 

ಹಸಿರು ತರಕಾರಿಗಳನ್ನು ಸೇವನೆ ಮಾಡಬೇಕು ಎನ್ನುವುದು ವೈದ್ಯರ ಸಲಹೆಯಾಗಿದೆ, ಕೂದಲಿನ ಬೆಳವಣೆಗೆ ಹಸಿರು ಪದಾರ್ಥಗಳನ್ನು ಸೇವನೆ  ಮಾಡುವುದರಿಂದ ಕೂದಲು ಮತ್ತು ನಮ್ಮ ದೇಹದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಈ ಕಾರಣಕ್ಕೆ ಹಸಿರು ತರಕಾರಿಗಳನ್ನು  ಹೆಚ್ಚು ಸೇವನೆ ಮಾಡಬೇಕು.  ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಬಾದಾಮಿ ಬೀಜಗಳು

ಬಾದಾಮಿಯು  ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ‘ಇ’ ಯನ್ನು ಸಮೃದ್ಧವಾಗಿಡುತ್ತದೆ. ಇದು ರಾಡಿಕಲ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ಈ ಬೀಜಗಳಲ್ಲಿನ ಸೆಲೆನಿಯಮ್ ಮತ್ತು ಮ್ಯಾಂಗನೀಸ್ ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಕಾಂತಿಯುತವಾಗಿರಿಸುತ್ತದೆ. ಬಾದಾಮಿಯನ್ನು ನಿಮ್ಮ ಆಹಾರ ಜೊತೆಗೆ ಸೇವನೆ ಮಾಡಿದರೆ ಕೂದಲಿನಿಂದ ಬೆಳವಣಿಗೆ ಹೆಚ್ಚು ಉಪಯುಕ್ತವಾಗಿರುತ್ತದೆ.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು ನಿಮ್ಮ ದೇಹದ ಆರೋಗ್ಯಕ್ಕೆ ಎಷ್ಟು ಉತ್ತಮವಾಗಿರುತ್ತದೆ, ಅಷ್ಟೋ  ಕೂದಲಿಗೂ ಉತ್ತಮವಾಗಿರುತ್ತದೆ. ಈ ಕಾರಣಕ್ಕೆ ಬೆರ್ರಿ ಹಣ್ಣುಗಳನ್ನು ನಿಮ್ಮ ಆಹಾರದ ಜೊತೆಗೆ ಸೇರಿಸಿಕೊಳ್ಳುವುದು ಕೂದಲಿಗೆ ಉತ್ತಮ.  ಈ ಹಣ್ಣು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಬೆರ್ರಿಗಳು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತವೆ ಮತ್ತು ಕಬ್ಬಿಣದ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತವೆ. ಆದ್ದರಿಂದ, ಈ ರಸಭರಿತವಾದ ಹಣ್ಣುಗಳು ನಿಮ್ಮ ಕೂದಲಿಗೆ ಸೂಕ್ತವಾಗಿರುತ್ತದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ ಈ ಹಳ್ಳಿಗಳಲ್ಲಿ ಮನೆಯಲ್ಲೇ ತೆಂಗಿನ ಎಣ್ಣೆಯನ್ನು ತಯಾರು ಮಾಡುತ್ತಾರೆ. ಈ ಎಣ್ಣೆಗಳನ್ನು ಬಳಸಿದರೆ ನಿಮ್ಮ ಕೂದಲಿನ ಬೆಳವಣಿಗೆ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ. ಈ ಎಣ್ಣೆಯನ್ನು ನಿಮ್ಮ ಆಹಾರಗಳಿಗೂ ಉಪಯೋಗ ಮಾಡುವುದು ಉತ್ತಮ. ಈ ಎಣ್ಣೆಯು ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಇ ಮತ್ತು ಕೆ,  ಖನಿಜಗಳಿಂದ ಸಮೃದ್ಧವಾಗಿದೆ.

ಮೊಟ್ಟೆಗಳು

ಮೊಟ್ಟೆ ನಮ್ಮ ದೇಹ ಆರೋಗ್ಯದ ಜೊತೆಗೆ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಈ ಬಗ್ಗೆ ಅಧ್ಯಯನ ಹೇಳುವಂತೆ  ಮೊಟ್ಟೆಗಳಲ್ಲಿನ ಸಲ್ಫರ್ ಅಂಶವು ಕಾಲಜನ್ ಮತ್ತು ಕೆರಾಟಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ಕೂದಲಿನ ಬೆಳವಣಿಗೆಗೆ ಉತ್ತಮವಾಗಿರುತ್ತದೆ.

ಅವಕಾಡೊ

ಅವಕಾಡೊ ಹಣ್ಣುಗಳು ಕೂದಲಿನ ಹೆಚ್ಚು ಆರೋಗ್ಯವನ್ನು ಮತ್ತು ಬೆಳವಣಿಗೆ  ಉತ್ತಮವಾಗಿರುತ್ತದೆ.  ಆವಕಾಡೊ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದರ ಜೊತೆಗೆ, ಇದು ಆಂಟಿಆಕ್ಸಿಡೆಂಟ್‌ಗಳು, ಫೈಬರ್, ಪೊಟ್ಯಾಸಿಯಮ್ ಮತ್ತು ಫೋಲೇಟ್‌ಗಳಿಂದ ತುಂಬಿರುತ್ತದೆ, ಇದು ಕೂದಲಿನ ಬೆಳವಣಿಗೆ ಮತ್ತು ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.