Hug Day 2023: ನಿನ್ನ ಈ ಪ್ರೀತಿಯ ಅಪ್ಪುಗೆ, ನನ್ನ ಬದುಕಿಗೊಂದು ಭರವಸೆ

|

Updated on: Feb 12, 2023 | 9:30 AM

ನಿಮ್ಮ ಪ್ರೀತಿ ಪಾತ್ರರು ನೀಡುವ ಒಂದು ಅಪ್ಪುಗೆ ನಿಮಗೆ ಸಾಕಷ್ಟು ಧೈರ್ಯವನ್ನು ನೀಡಬಲ್ಲದು. ಪರಸ್ಪರ ಅಲಿಂಗಿಸಿಕೊಳ್ಳುವುದರಿಂದ ಪ್ರೀತಿ ಇನ್ನಷ್ಟು ಗಟ್ಟಿಯಾಗುವುದು ಮಾತ್ರವಲ್ಲದೇ ಇದರಿಂದ ಸಾಕಷ್ಟು ಪ್ರಯೋಜನಗಳಿವೆ.

Hug Day 2023: ನಿನ್ನ ಈ ಪ್ರೀತಿಯ ಅಪ್ಪುಗೆ, ನನ್ನ ಬದುಕಿಗೊಂದು ಭರವಸೆ
ಹಗ್ ಡೇ
Image Credit source: The Indian Express
Follow us on

ಪ್ರೇಮಿಗಳ ದಿನ (Valentine’s Day) ಇನ್ನೇನು ಸಮೀಪಿಸುತ್ತಿದೆ, ವಾರ ಪೂರ್ತಿ ಒಂದೊಂದು ವಿಶೇಷತೆಗಳಿಂದ ಕೂಡಿದ್ದು, ವಾರದ 6ನೇ ದಿನ(ಫೆಬ್ರವರಿ 12) ದಂದು ಹಗ್ ಡೇ (Hug Day) ಆಚರಿಸಲಾಗುತ್ತದೆ. ಇದು ಕೇವಲ ನಿಮ್ಮ ಪ್ರೇಮಿಯನ್ನು ಅಪ್ಪಿಕೊಳ್ಳುವ ದಿನವಲ್ಲ. ಬದಲಾಗಿ ನಿಮ್ಮ ತಂದೆ ತಾಯಿ, ಸ್ನೇಹಿತರು, ಸಂಗಾತಿಯನ್ನು ಪರಸ್ಪರ ಆಲಿಂಗಿಸಿಕೊಂಡು ಪರಸ್ಪರ ಪ್ರೀತಿ ಹಂಚಿಕೊಳ್ಳಿ. ನಿಮ್ಮ ಪ್ರೀತಿ ಪಾತ್ರರು ನೀಡುವ ಒಂದು ಅಪ್ಪುಗೆ ನಿಮಗೆ ಸಾಕಷ್ಟು ಧೈರ್ಯವನ್ನು ನೀಡಬಲ್ಲದು. ಪರಸ್ಪರ ಅಲಿಂಗಿಸಿಕೊಳ್ಳುವುದರಿಂದ ಪ್ರೀತಿ ಇನ್ನಷ್ಟು ಗಟ್ಟಿಯಾಗುವುದು ಮಾತ್ರವಲ್ಲದೇ ಇದರಿಂದ ಸಾಕಷ್ಟು ಪ್ರಯೋಜನಗಳಿವೆ.

ವಿಜ್ಞಾನದ ಪ್ರಕಾರ ಅಪ್ಪುಗೆಯ ಪ್ರಯೋಜನಗಳ ಬಗ್ಗೆ ಸಂಶೋಧನೆಯಿಂದ ತಿಳಿಸಿದೆ. ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ನೋವು ನಿವಾರಕ ಮತ್ತು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಎಂದು ತಿಳಿದು ಬಂದಿದೆ. ಪ್ರೇಮಿಗಳ ದಿನದ ವಿಶೇಷ ವಾರ ಪೂರ್ತಿ ರೋಸ್​​ ಡೇ ಯಿಂದ ಹಿಡಿದು ಪ್ರಪೋಸ್ ಡೇ, ಚಾಕಲೇಟ್ ಡೇ, ಟೆಡ್ಡಿ ಡೇ ಹೀಗೆ ವಾರ ಪೂರ್ತಿ ಒಂದೊಂದು ವಿಶೇಷತೆಗಳನ್ನು ಕಾಣಬಹುದು. ಹಗ್​​ ಡೇಯಂದು ಪರಸ್ಪರ ತಬ್ಬಿಕೊಳ್ಳುವುದರ ಮೂಲಕ ನಿನಗೆ ನಾ ಸದಾ ನಾನಿರುವೆ ಎಂಬ ಭರವಸೆ ನೀಡುವುದಾಗಿದೆ. ನೀವು ಯಾರನ್ನು ಅತಿಯಾಗಿ ಪ್ರೀತಿಸುತ್ತೀರೋ ಅವರು ನೀಡುವ ಒಂದು ಅಪ್ಪುಗೆಯು ನಿಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ.

ಇದನ್ನೂ ಓದಿ: ಅಬ್ಬಬ್ಬಾ! ಕೋಟಿಗೆ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ಟೆಡ್ಡಿ ಬೇರ್​​ಗಳು ಇಲ್ಲಿವೆ

ನಿಮ್ಮ ಸಂಬಂಧದಲ್ಲಿ ಏನಾದರೂ ಕೋಪ, ಮನಸ್ತಾಪಗಳು ಉಂಟಾದರೆ ನಿಮ್ಮ ಪ್ರೇಮಿಯಲ್ಲಿ ಗಟ್ಟಿಯಾಗಿ ಒಮ್ಮೆ ಅಪ್ಪಿಕೊಳ್ಳಿ. ಒಂದು ಅಪ್ಪುಗೆ ಅವರ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಇದಲ್ಲದೇ, ಪರಸ್ಪರ ಆಲಿಂಗಿಸಿಕೊಳ್ಳುವುದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. 20 ನಿಮಿಷಗಳ ತಬ್ಬಿಕೊಳ್ಳುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಇದಲ್ಲದೇ ತಬ್ಬಿಕೊಳ್ಳುವುದರಿಂದ ಮೆದುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: