Happy Promise Day 2023: ಎಂದೆಂದಿಗೂ ನಿನ್ನೊಂದಿಗಿರುವೆ, ಹ್ಯಾಪಿ ಪ್ರಾಮಿಸ್ ಡೇ

|

Updated on: Feb 11, 2023 | 9:30 AM

ಪ್ರೇಮಿಗಳ ವಾರದ ಐದನೇ ದಿನದಂದು, ಅಂದರೆ ಫೆಬ್ರವರಿ 11ರಂದು ವಿಶ್ವದಾದ್ಯಂತ ಪ್ರಾಮಿಸ್ ಡೇಯನ್ನು ಆಚರಿಸಲಾಗುತ್ತದೆ. ಈ ದಿನ ದಂಪತಿಗಳು ಅಥವಾ ಪ್ರೇಮಿಗಳು ತಮ್ಮ ಸಂಬಂಧವನ್ನು ಬಲಪಡಿಸಲು ಪರಸ್ಪರ ಭರವಸೆಯನ್ನು ನೀಡುವುದಾಗಿದೆ.

Happy Promise Day 2023: ಎಂದೆಂದಿಗೂ ನಿನ್ನೊಂದಿಗಿರುವೆ, ಹ್ಯಾಪಿ ಪ್ರಾಮಿಸ್ ಡೇ
ಪ್ರಾಮಿಸ್ ಡೇ
Follow us on

ಪ್ರೇಮಿಗಳ ವಾರ(Valentine Week) ದ ಐದನೇ ದಿನದಂದು, ಅಂದರೆ ಫೆಬ್ರವರಿ 11ರಂದು ವಿಶ್ವದಾದ್ಯಂತ ಪ್ರಾಮಿಸ್ ಡೇ(Promise Day)ಯನ್ನು ಆಚರಿಸಲಾಗುತ್ತದೆ. ಈ ದಿನ ದಂಪತಿಗಳು ಅಥವಾ ಪ್ರೇಮಿಗಳು ತಮ್ಮ ಸಂಬಂಧವನ್ನು ಬಲಪಡಿಸಲು ಪರಸ್ಪರ ಭರವಸೆಯನ್ನು ನೀಡುವುದಾಗಿದೆ. ಯಾವುದೇ ಸಂದರ್ಭದಲ್ಲಿಯೂ, ನಿನ್ನೊಂದಿಗೆ ನಾನಿರುವೆ ಎಂದು ಭರವಸೆಯನ್ನು ನೀಡಿ ಈ ದಿನ ಪರಸ್ವರ ಶುಭಾಶಯನ್ನು ತಿಳಿಸುವುದಾಗಿದೆ.

ಪ್ರೀತಿ ಎಂದರೆ ಬರೀ ಖುಷಿಯ ದಿನಗಳಲ್ಲಿ ಒಟ್ಟಿಗೆ ನಿಂತು ಸಂಭ್ರಮಿಸುವುದಲ್ಲ. ಬದಲಾಗಿ ಯಾವುದೇ ಕಷ್ಟದ ಸಮಯದಲ್ಲಿಯೂ ನಿಮ್ಮ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಬೆಂಬಲವಾಗಿ ನಿಲ್ಲುವುದು ತುಂಬಾ ಅಗತ್ಯ. ಯಾವಾಗ ಒಂದು ವ್ಯಕ್ತಿ ಕಷ್ಟದ ದಿನಗಳಲ್ಲಿ ಇರುತ್ತಾನೋ ಅಂತಹ ಸಂದರ್ಭದಲ್ಲಿ ಆತನ ಪ್ರೀತಿ ಎಷ್ಟು ಗಟ್ಟಿ ಇದೆ ಎಂದು ತಿಳಿಯಲು ಸಾಧ್ಯ. ಆದ್ದರಿಂದ ನೀವು ನಿಮ್ಮ ಪ್ರೇಮಿಯೊಂದಿಗೆ ಖುಷಿಯ ಸಂದರ್ಭದಲ್ಲಿ ಜೊತೆಗಿಲ್ಲದ್ದರೂ ಪರವಾಗಿಲ್ಲ, ಆದರೆ ಅವರ ದುಃಖದ ಸಮಯದಲ್ಲಿ ಜೊತೆಯಾಗಿ ಬೆಂಬಲವಾಗಿ ನಿಲ್ಲಿ.

ಇದನ್ನೂ ಓದಿ: ಪ್ರೇಮಿಗಳ ದಿನ ಸಮೀಪಿಸುತ್ತಿದೆ, ವಾರಪೂರ್ತಿಯ ವಿಶೇಷತೆಗಳು ಇಲ್ಲಿವೆ

ಪ್ರೀತಿಯ ಬಂಧವನ್ನು ಗಟ್ಟಿಯಾಗಿಸಲು, ಬದುಕಿನ ಭರವಸೆಯನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಆಚರಿಸುವ ಈ ಪ್ರಾಮಿಸ್​ ಡೇ. ಈ ವಿಶೇಷ ದಿನದಂದು ಸದಾ ನಿನ್ನೊಂದಿಗಿರುವೆ, ಬದುಕಿನ ಏರಿಳಿತಗಳಲ್ಲಿ ಹೆಗಲಾಗುವೆ ಎಂದು ಅವರ ಕಣ್ಣಿನಲ್ಲಿ ಕಣ್ಣಿಟ್ಟು ಭರವಸೆ ನೀಡಿ. ಇದು ನಿಮ್ಮ ಸಂಬಂಧ ಹಾಗೂ ಅವರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸಹಾಯಕವಾಗಿದೆ. ಖುಷಿಯಲ್ಲೂ, ನೋವಲ್ಲೂ ಎಂತಹದೇ ಸಂದರ್ಭ ಬಂದರೂ ಕೈಬಿಡುವುದಿಲ್ಲ ಎನ್ನುವ ಭರವಸೆ ಈ ಪ್ರಾಮಿಸ್​ ಡೇ ಮೂಡಿಸುತ್ತದೆ. ಇದೇ ಕಾರಣಕ್ಕೆ ಪ್ರೇಮಿಗಳ ವಾರದಲ್ಲಿ ಪ್ರಾಮಿಸ್​ ಡೇ ಗೆ ಅಷ್ಟೊಂದು ಮಹತ್ವವಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: