ದಿನವೂ ಕಿವಿಯನ್ನು ಸ್ವಚ್ಛಗೊಳಿಸಬೇಕಾ?; ತಜ್ಞರ ಸಲಹೆ ಇಲ್ಲಿದೆ

ನಮ್ಮ ಜೀವನದಲ್ಲಿ ಆರೋಗ್ಯದ ಕಾಳಜಿ ಅತ್ಯಗತ್ಯ. ದೇಹ ಮತ್ತು ಮನಸ್ಸು ಶುಚಿಯಾಗಿದ್ದರೆ ದೈನಂದಿನ ಬದುಕು ಕೂಡ ಬಹಳ ಸೊಗಸಾಗಿರುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಆರೋಗ್ಯದ ಸ್ವಚ್ಛತೆಯಲ್ಲಿ ಅನೇಕರು ಕಿವಿಯ ಶುಚಿತ್ವಕ್ಕೆ ಕೂಡ ಮಹತ್ವ ನೀಡುತ್ತಾರೆ. ಹೀಗಾಗಿ ಕಿವಿಯನ್ನು ಸ್ವಚ್ಛಗೊಳಿಸಲು ಅನೇಕರು ಕಿವಿಯೊಳಗೆ ಪಿನ್‌ ಹಾಕುವುದು, ಬಡ್ಸ್‌ ಹಾಕುವುದು, ನೀರು ಅಥವಾ ಸೋಪಿನ ನೀರನ್ನು ಹಾಕಿ ಸ್ವಚ್ಛಗೊಳಿಸುತ್ತಾರೆ. ಇದು ಒಳ್ಳೆಯದಾ? ದಿನವೂ ಕಿವಿ ಸ್ವಚ್ಛಗೊಳಿಸಬೇಕಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ದಿನವೂ ಕಿವಿಯನ್ನು ಸ್ವಚ್ಛಗೊಳಿಸಬೇಕಾ?; ತಜ್ಞರ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on:Feb 19, 2024 | 4:25 PM

ಬಹುತೇಕ ಜನರು ಕಿವಿಯನ್ನು ಕ್ಲೀನ್ ಮಾಡಲು ಚೂಪಾದ ವಸ್ತುಗಳನ್ನು ಕಿವಿಯೊಳಗೆ ಹಾಕುತ್ತಾರೆ. ಯಾವಾಗಲೂ ಕಿವಿಯ ಒಳಗೆ ಕೈಬೆರಳನ್ನು ಹಾಕಿಕೊಂಡೇ ಇರುತ್ತಾರೆ. ಇದರಿಂದಾಗಿ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ವಿವಿಧ ಸಮಸ್ಯೆಗಳನ್ನು ಹೊತ್ತ ಅನೇಕರು ವೈದ್ಯರ ಬಳಿ ಬಂದಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಹೀಗಾಗಿ, ಕಿವಿಯ ಸ್ವಚ್ಛತೆಯ ಬಗ್ಗೆ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

ದೈಹಿಕ ಆರೋಗ್ಯ ಎಂದ ಮೇಲೆ ಅದರಲ್ಲಿ ಕಿವಿ ಶುಚಿತ್ವವೂ ಕೂಡ ಸೇರುತ್ತದೆ. ಹೀಗಾಗಿ, ಜನರು ಕಿವಿಯೊಳಗೆ ಬಡ್ಸ್‌ ಹಾಕುವುದು, ಪಿನ್‌ ಹಾಕಿ ಶುಚಿ ಮಾಡಲು ಮುಂದಾಗುತ್ತಾರೆ. ಆದರೆ ಇದೊಂದು ಅಪಾಯಕಾರಿ ಕಾರ್ಯ ಎಂದರೆ ತಪ್ಪಿಲ್ಲ. ಏಕೆಂದರೆ, ಈ ರೀತಿಯಾಗಿ ಶುಚಿಗೊಳಿಸಲು ಮುಂದಾಗುವವರು ಅನೇಕ ರೀತಿಯ ಕಿವಿಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ನಮ್ಮ ಸುತ್ತಮುತ್ತಲಿನ ಜನರಲ್ಲಿ ಕಾಣಬಹುದು ಎನ್ನುತ್ತಾರೆ ಕಿಂಡರ್‌ ಆಸ್ಪತ್ರೆಯ ಇಎನ್‌ಟಿ ತಜ್ಞೆ ಡಾ. ಸುನಿತಾ ಮಾಧವನ್.

ಇದನ್ನೂ ಓದಿ: Ayurvedic Facepack: ಆಯುರ್ವೇದಿಕ್ ಫೇಸ್​ಪ್ಯಾಕ್​ನಿಂದ ಚರ್ಮದ ಕಾಂತಿ ಹೆಚ್ಚಿಸಿ

ಹಾಗಾದರೆ ಕಿವಿಯನ್ನು ಶುಚಿಗೊಳಿಸುವುದು ಹೇಗೆ ಎನ್ನುತ್ತೀರಾ? ಕಿವಿಯು ಸ್ವಯಂ ಶುಚಿಗೊಳಿಸುವ ಕಾರ್ಯವಿಧಾನವನ್ನು ಹೊಂದಿದೆ. ಹೀಗಾಗಿ ಕಿವಿಯಲ್ಲಿರುವ ವ್ಯಾಕ್ಸ್‌ ಕಾಲಕ್ರಮೇಣ ತನ್ನಿಂದ ತಾನೆ ಹೊರಬರುತ್ತದೆ. ಹಾಗಾಗಿ ನಾವು ಪ್ರತಿದಿನ ಕಿವಿಯನ್ನು ಸ್ವಚ್ಛಗೊಳಿಸಬೇಕಾಗಿಲ್ಲ. ಆದರೂ ಕಿವಿಯನ್ನು ಸ್ವಚ್ಚಗೊಳಿಸಬೇಕೆಂದರೆ ಒಂದು ಮೃದು ಬಟ್ಟೆಯಿಂದ ಸ್ವಚ್ಚಗೊಳಿಸಿದರೆ ಸಾಕು ಎನ್ನುತ್ತಾರೆ ತಜ್ಞರು.

ಪ್ರತಿನಿತ್ಯ ಕಿವಿ ಶುಚಿ ಮಾಡುವುದರಿಂದ ಆಗುವ ತೊಂದರೆಗಳೇನು?:

ಕಿವಿ ತುಂಬಾನೆ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಪ್ರತಿದಿನ ಕಿವಿ ಕ್ಲೀನ್ ಮಾಡುತ್ತಿದ್ದರೆ ಅದರ ಒಳಪದರಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಸೋಂಕು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಬಳಿಕ ತುರಿಕೆಯಾಗುವುದು ಅಥವಾ ಗಾಯಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿನಿತ್ಯ ಕಿವಿಯನ್ನು ಸ್ವಚ್ಛಗೊಳಿಸುವುದು ಒಳ್ಳೆಯದಲ್ಲ. ಕಿವಿಯ ಸ್ವಚ್ಛತೆಗಾಗಿ ಪಿನ್‌ ಹಾಕುವುದು, ಬಡ್ಸ್‌ ಹಾಕುವುದರಿಂದಲೂ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುವುದು ತಜ್ಞರ ಎಚ್ಚರಿಕೆಯ ಮಾತು.

ಕಿವಿ ಶುಚಿಗೊಳಿಸಲು ವೈದ್ಯರ ಸಲಹೆಯೇನು?:

– ತಲೆ ಸ್ನಾನ ಮಾಡುವಾಗ ಕಿವಿಗೆ ವ್ಯಾಸಲಿನ್‌ ಲೇಪಿತ ಹತ್ತಿಯನ್ನು ಇಟ್ಟುಕೊಳ್ಳಿ.

– ಕಿವಿಯಲ್ಲಿ ಕಡಿತ ಉಂಟಾದರೆ ಕೇವಲ ವ್ಯಾಕ್ಸ್‌ನಿಂದಲೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಒಣಗುವಿಕೆ ಮತ್ತು ಅಲರ್ಜಿಯಿಂದಲೂ ಕೂಡ ಕಿವಿಯಲ್ಲಿ ಸಮಸ್ಯೆಗಳು ಕಂಡುಬರುತ್ತವೆ. ಹೀಗಾಗಿ ಕಿವಿಯಲ್ಲಿ ನೀವೇ ಯಾವುದೇ ಔಷಧಿಗಳನ್ನು ಲೇಪಿಸಬೇಡಿ.

– ಶೀತದ ಸಂದರ್ಭದಲ್ಲಿ ನಿಮ್ಮ ಕಿವಿ ಬ್ಲಾಕ್‌ ಆಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

– ಕಿವಿಯ ಹೊರಭಾಗದಲ್ಲಿ ಏನಾದರು ಕಸ ಕಂಡುಬಂದಲ್ಲಿ ನೀವೇ ಸ್ವತಃ ಮೃದು ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ.

ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ಕಿವಿ ನೋವು ನಿವಾರಣೆಗೆ ಹೀಗೆ ಮಾಡಿ!

ಕಿವಿಯನ್ನು ಸ್ವಚ್ಛಗೊಳಿಸಲು ಏನು ಮಾಡಬಾರದು?:

– ಪ್ರತಿದಿನ ಬೆಳಗೆದ್ದು ಕಿವಿ ಶುಚಿಗೊಳಿಸುವುದನ್ನೇ ಅಭ್ಯಾಸ ಮಾಡಬೇಡಿ.

– ಕಿವಿ ಶುಚಿಗಾಗಿ ಕಿವಿಯಲ್ಲಿ ಬಡ್ಸ್‌, ಪಿನ್‌, ಬೆರಳು ಹಾಕುವುದು ಮತ್ತು ಇತರೆ ವಸ್ತುಗಳನ್ನು ಹಾಕದಿರಿ.

– ಕಿವಿಯಲ್ಲಿ ಏನೇ ಸಮಸ್ಯೆಗಳು ಕಂಡುಬಂದರೆ ಸ್ವತಃ ಯಾವುದೇ ಔಷಧಗಳನ್ನು ಬಳಸಬೇಡಿ.

– ಡಯಾಬಿಟಿಕ್‌ ರೋಗಿಗಳಲ್ಲಿ ಕಿವಿ ಸಂಬಂಧಿ ಸಮಸ್ಯೆಗಳು ಕಂಡುಬಂದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ.

– ಕಿವಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ನೀರಿನ ಚಟುವಟಿಕೆಗಳಿಂದ ದೂರವಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Mon, 19 February 24

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ