Health Care: ಅವಧಿ ಮೀರಿದ ಆಹಾರ ಸೇವಿಸಿದರೆ ಏನಾಗುತ್ತದೆ?

|

Updated on: Feb 07, 2024 | 4:40 PM

Expired Food: ಎಲ್ಲ ಆಹಾರ ಪದಾರ್ಥಗಳಿಗೂ ಒಂದು ಅವಧಿ ಎಂಬುದಿರುತ್ತದೆ. ಆ ಅವಧಿ ಮುಗಿದ ಮೇಲೆ ಅದನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ, ಯಾವುದೇ ಒಂದು ಪದಾರ್ಥವನ್ನು ಖರೀದಿಸುವಾಗ ಅದರ ಹಿಂಭಾಗದಲ್ಲಿರುವ ಎಕ್ಸ್​ಪೈರಿ ಡೇಟ್ ಅನ್ನು ಕೂಡ ನೋಡಬೇಕು. ಆದರೆ, ಒಂದುವೇಳೆ ನಿಮಗೆ ಗೊತ್ತಾಗದೆ ಅವಧಿ ಮೀರಿದ ಆಹಾರ ಸೇವಿಸಿದರೆ ಏನಾಗುತ್ತದೆ? ಈ ಸುದ್ದಿ ಓದಿ.

Health Care: ಅವಧಿ ಮೀರಿದ ಆಹಾರ ಸೇವಿಸಿದರೆ ಏನಾಗುತ್ತದೆ?
ಸಾಂದರ್ಭಿಕ ಚಿತ್ರ
Image Credit source: iStock
Follow us on

ಪ್ರತಿಯೊಂದು ಪದಾರ್ಥಗಳಿಗೂ ನಿಗದಿತ ಅವಧಿ ಇರುತ್ತದೆ. ಆ ಅವಧಿ ಮೀರಿದ (Expiry Date) ನಂತರ ಅದು ಬಳಸಲು ಯೋಗ್ಯವಲ್ಲ ಎಂದರ್ಥ. ಹೀಗಾಗಿ, ಪ್ರತಿಯೊಂದು ಪದಾರ್ಥದ ಪ್ಯಾಕೆಟ್​ನ ಹಿಂಭಾಗದಲ್ಲೂ ಅದರ ಅವಧಿಯನ್ನು ನಮೂದಿಸಲಾಗಿರುತ್ತದೆ. ಆದರೆ, ಗೊತ್ತಾಗದೆ ಅವಧಿ ಮೀರಿದ ಆಹಾರ ಸೇವಿಸಿದರೆ ಏನಾಗುತ್ತದೆ? ಬಹುತೇಕ ಜನರು ಮೊಸರು (Curd) ಮತ್ತು ಹಾಲಿನ ಪ್ಯಾಕೆಟ್ (Milk Packet) ಮೇಲೆ ಇರುವ ಅವಧಿ ಮೀರಿದ ದಿನಗಳ ನಂತರವೂ ಅವುಗಳನ್ನು ಫ್ರಿಡ್ಜ್​ನಲ್ಲಿಟ್ಟು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೆ ತೊಂದರೆ ಆಗುತ್ತದೆಯೇ?

ಆಹಾರ ವಿಜ್ಞಾನಿಗಳ ಪ್ರಕಾರ, ಬೇಬಿ ಫಾರ್ಮುಲಾ ಹೊರತುಪಡಿಸಿ ಬೇರೆ ಯಾವ ಆಹಾರ ಡೇಟಿಂಗ್ ವ್ಯವಸ್ಥೆಯೂ ಸರ್ಕಾರದಿಂದ ನಿಯಂತ್ರಿತ ಅಥವಾ ಪ್ರಮಾಣಿತವಾಗಿಲ್ಲ. ಆದ್ದರಿಂದ ಹೆಚ್ಚಿನ ವಸ್ತುಗಳ ಮೇಲೆ ಮುದ್ರಿತ ದಿನಾಂಕಗಳು ಉತ್ಪನ್ನವು ಎಷ್ಟು ಸಮಯದವರೆಗೆ ಉತ್ತಮ ಗುಣಮಟ್ಟದಲ್ಲಿರುತ್ತದೆ ಎಂದು ನಿಮಗೆ ತಿಳಿಯಲು ಸಹಾಯ ಮಾಡುವ ತಯಾರಕರ ಸಲಹೆಗಳಾಗಿವೆ. ಆ ಅವಧಿ ಮುಗಿದ ನಂತರವೂ ಕೆಲವು ದಿನ ಅದನ್ನು ಬಳಸಿದರೆ ತೊಂದರೆಯೇನಿಲ್ಲ. ಆದರೆ, ಇದು ಎಲ್ಲ ಪದಾರ್ಥಗಳಿಗೂ ಅನ್ವಯವಾಗುವುದಿಲ್ಲ.

ಇದನ್ನೂ ಓದಿ: ಫುಡ್ ಪಾಯ್ಸನ್ ಆದಾಗ ಯಾವ ರೀತಿಯ ಆಹಾರ ಸೇವಿಸಬೇಕು?

ನೀವೇನಾದರೂ ಅವಧಿ ಮೀರಿದ ವಸ್ತುಗಳನ್ನು ಬಳಸಿದರೆ ಅಥವಾ ಅಚಾನಕ್ಕಾಗಿ ಖರೀದಿಸಿದರೆ ಈ ಕೆಲವು ಸಂಗತಿಗಳನ್ನು ನೆನಪಿನಲ್ಲಿಡಿ.

  1. ಶಾಂತವಾಗಿರಿ: ಮೊದಲನೆಯದಾಗಿ ಅವಧಿ ಮೀರಿದ ಪದಾರ್ಥ ಸೇವಿಸಿದ ನಂತರ ಭಯಪಡಬೇಡಿ. ಅವಧಿ ಮೀರಿದ ಆಹಾರವನ್ನು ಸೇವಿಸುವ ಹೆಚ್ಚಿನ ಸಂದರ್ಭಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದಿಲ್ಲ. ಅವಧಿ ಮೀರಿದ ಆಹಾರದಲ್ಲಿರುವ ಸಣ್ಣ ಪ್ರಮಾಣದ ಬ್ಯಾಕ್ಟೀರಿಯಾ ಅಥವಾ ಜೀವಾಣುಗಳನ್ನು ನಿರ್ವಹಿಸಲು ನಿಮ್ಮ ದೇಹಕ್ಕೆ ಸಾಧ್ಯವಿದೆ.
  2. ರೋಗಲಕ್ಷಣಗಳನ್ನು ನಿರ್ಣಯಿಸಿ: ಅವಧಿ ಮೀರಿದ ಆಹಾರವನ್ನು ಸೇವಿಸಿದ ನಂತರ ನಿಮ್ಮ ಆರೋಗ್ಯದಲ್ಲಿ ಏನಾದರೂ ಬದಲಾವಣೆಗಳು ಉಂಟಾದರೆ, ಆ ರೋಗಲಕ್ಷಣಗಳ ಬಗ್ಗೆ ಗಮನ ಕೊಡಿ. ಸಾಮಾನ್ಯ ರೋಗಲಕ್ಷಣಗಳಲ್ಲಿ ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆಯ ನೋವು ಕೂಡ ಸೇರಿವೆ. ರೋಗಲಕ್ಷಣಗಳು ತೀವ್ರವಾಗಿ ಅಥವಾ ನಿರಂತರವಾಗಿದ್ದರೆ ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆಯಿರಿ.
  3. ಹೈಡ್ರೇಟ್ ಆಗಿರಿ: ಸಾಕಷ್ಟು ನೀರು ಕುಡಿಯುವುದರಿಂದ ದೇಹವನ್ನು ಸೇರಿಕೊಂಡಿರುವ ಸಣ್ಣ ಪ್ರಮಾಣದ ವಿಷವನ್ನು ಹೊರಹಾಕಲು ಮತ್ತು ಫುಡ್ ಪಾಯ್ಸನಿಂಗ್ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಫುಡ್ ಪಾಯ್ಸನ್ ಆದಾಗ ಏನು ಮಾಡಬೇಕು?

  1. ವೈದ್ಯಕೀಯ ಸಲಹೆಯನ್ನು ಪಡೆಯಿರಿ: ನೀವು ತೀವ್ರತರವಾದ ರೋಗಲಕ್ಷಣಗಳನ್ನು ಅನುಭವಿಸಿದರೆ ಅಥವಾ ನಿಮ್ಮ ಆರೋಗ್ಯದ ಬಗ್ಗೆ ಆತಂಕವಾದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಹೆಚ್ಚಾಗಿ, ಫುಡ್ ಪಾಯ್ಸನಿಂಗ್ ಆದಾಗ ಅದು ತನ್ನಷ್ಟಕ್ಕೆ ತಾನೇ ಸರಿಯಾಗುತ್ತದೆ.
  2. ಮುನ್ನೆಚ್ಚರಿಕೆ ವಹಿಸಿ: ನಿಮಗೆ ಒಮ್ಮೆ ಆದ ಅನುಭವದಿಂದ ಪಾಠ ಕಲಿಯಿರಿ. ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಅವಧಿ ಮೀರಿದ ಆಹಾರ ಬಳಸದಂತೆ ಎಚ್ಚರ ವಹಿಸಿ. ಪದಾರ್ಥಗಳನ್ನು ಖರೀದಿಸುವಾಗ ಅದು ಸಿದ್ಧವಾದ ದಿನಾಂಕ ಮತ್ತು ಎಲ್ಲಿಯವರೆಗೂ ಬಳಸಬಹುದು ಎಂಬ ದಿನಾಂಕವನ್ನು ಸರಿಯಾಗಿ ನೋಡಿದ ನಂತರವೇ ಖರೀದಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:40 pm, Wed, 7 February 24