Heatwave: ಹೆಚ್ಚುತ್ತಲೇ ಇದೆ ಬಿಸಿ ಗಾಳಿ; ಉರಿ ಬಿಸಿಲಲ್ಲಿ ಇರೋದಾದ್ರೂ ಹೇಗೆ?

Heatwave: ಹೆಚ್ಚುತ್ತಲೇ ಇದೆ ಬಿಸಿ ಗಾಳಿ; ಉರಿ ಬಿಸಿಲಲ್ಲಿ ಇರೋದಾದ್ರೂ ಹೇಗೆ?
ಬಿಸಿ ಗಾಳಿ (ಪ್ರಾತಿನಿಧಿಕ ಚಿತ್ರ)

ಬಿಸಿ ಗಾಳಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬಹುದು? ಬೇಸಿಗೆಯ ಅವಧಿಯಲ್ಲಿ ಸುರಕ್ಷಿತವಾಗಿರಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ.

TV9kannada Web Team

| Edited By: Sushma Chakre

Apr 29, 2022 | 6:27 PM

ನವದೆಹಲಿ: ‘ಅಯ್ಯಬ್ಬ, ಎಂಥಾ ಉರಿ ಬಿಸಿಲು!’ ಅಂತ ಹಿಡಿಶಾಪ ಹಾಕದವರೇ ಇಲ್ಲ. ಆ ರೀತಿಯ ಸೆಖೆ, ಬಿಸಿಲು ಮೈ ಸುಡಲಾರಂಭಿಸಿದೆ. ಮನೆಯಿಂದ ಹೊರಗೆ ಹೋಗುವುದೇ ಕಷ್ಟ ಎಂಬ ವಾತಾವರಣ ನಿರ್ಮಾಣವಾಗಿದೆ. ಭಾರತದಲ್ಲಿ ಮಾರ್ಚ್ ಆರಂಭದಿಂದಲೂ ಬಿಸಿ ಗಾಳಿ (ಉಷ್ಣ ಅಲೆ) ಹೆಚ್ಚಾಗಿದೆ. ಇನ್ನೇನು ಒಂದು ತಿಂಗಳಲ್ಲಿ ಮಳೆಗಾಲ ಶುರುವಾಗುತ್ತದೆ. ಆದರೆ, ಅಲ್ಲಿಯವರೆಗೂ ಸೆಖೆಯಲ್ಲಿ ಉಳಿಯುವುದಾದರೂ ಹೇಗೆಂಬ ಚಿಂತೆ ಹೆಚ್ಚಾಗಿದೆ. ಉಷ್ಣ ಅಲೆಯನ್ನು ಯಾವ ರೀತಿ ನಿರ್ಧರಿಸಬಹುದು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ. ಒಂದು ನಿಲ್ದಾಣದ ಗರಿಷ್ಠ ತಾಪಮಾನವು ಬಯಲು ಪ್ರದೇಶಗಳಿಗೆ ಕನಿಷ್ಠ 40 C ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಅದನ್ನು ಬಿಸಿ ಗಾಳಿ (Heatwave) ಎಂದು ಪರಿಗಣಿಸಲಾಗುತ್ತದೆ. ಕರಾವಳಿ ನಿಲ್ದಾಣಗಳಿಗೆ 37 C ಅಥವಾ ಅದಕ್ಕಿಂತ ಹೆಚ್ಚು, ಗುಡ್ಡಗಾಡು ಪ್ರದೇಶಗಳಿಗೆ ಕನಿಷ್ಠ 30 C ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನವನ್ನು ತಲುಪಿದಾಗ ಉಷ್ಣ ಅಲೆಯೆಂದು ಘೋಷಿಸಲಾಗುತ್ತದೆ.

ಬಿಸಿ ಗಾಳಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬಹುದು? ಬೇಸಿಗೆಯ ಅವಧಿಯಲ್ಲಿ ಸುರಕ್ಷಿತವಾಗಿರಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ.

ಮಾಡಬೇಕಾದುದೇನು?: – ಬೇಸಿಗೆಯಲ್ಲಿ ಆದಷ್ಟೂ ಒಳಾಂಗಣದಲ್ಲಿ ಮತ್ತು ಹೆಚ್ಚು ಬಿಸಿಲು ಬೀಳದ ಸ್ಥಳಗಳಲ್ಲಿ ಉಳಿಯಿರಿ. – ಹೊರಗಡೆ ಇರುವಾಗ ಛತ್ರಿ/ ಟೋಪಿ/ ಶಾಲ್ ಬಳಸಿ. – ತೆಳುವಾದ, ಸಡಿಲವಾದ ಹತ್ತಿ, ತಿಳಿ ಬಣ್ಣದ ಉಡುಪುಗಳನ್ನು ಧರಿಸಿ. – ನೀರು ಮತ್ತು ಉಪ್ಪುಸಹಿತ ಪಾನೀಯಗಳನ್ನು (ಲಸ್ಸಿ, ನಿಂಬೆ ನೀರು, ಹಣ್ಣಿನ ರಸಗಳು, ORS) ಆಗಾಗ ಕುಡಿಯಿರಿ. ಕಲ್ಲಂಗಡಿ, – – – ಸೌತೆಕಾಯಿ, ನಿಂಬೆ, ಕಿತ್ತಳೆ ಮೊದಲಾದ ಹಣ್ಣುಗಳನ್ನು ಸೇವಿಸಿ. – ಆಗಾಗ ತಂಪಾದ ಸ್ನಾನ ಮಾಡಿ ಮತ್ತು ಕೋಣೆಯ ಉಷ್ಣಾಂಶವನ್ನು ಕಡಿಮೆ ಮಾಡಿ. ಕಿಟಕಿಯ ಪರದೆಗಳನ್ನು ಹಾಕಿರಿ, ಫ್ಯಾನ್, – ಕೂಲರ್, ಹವಾನಿಯಂತ್ರಣ, ಕ್ರಾಸ್ ವೆಂಟಿಲೇಟ್ ಕೊಠಡಿ, ನೀರು ಚಿಮುಕಿಸುವುದು, ಒಳಾಂಗಣ ಸಸ್ಯಗಳನ್ನು ಇಟ್ಟುಕೊಳ್ಳುವುದು ಇತ್ಯಾದಿಗಳನ್ನು ಮಾಡಿದರೆ ರೂಮಿನ ವಾತಾವರಣ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ. – ವಿಶೇಷವಾಗಿ ವಯಸ್ಸಾದವರು, ಮಕ್ಕಳು, ಗರ್ಭಿಣಿಯರು, ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿ ಹೊಂದಿರುವವರು ಮತ್ತು ಹೊರಾಂಗಣ ಕೆಲಸಗಾರರು ಈ ಬಿಸಿ ಗಾಳಿಯಿಂದ ಹೆಚ್ಚು ಸಮಸ್ಯೆಗೆ ಒಳಗಾಗುತ್ತಾರೆ. ಇವರು ಆರಾಮದಾಯಕ ಬಟ್ಟೆ ಧರಿಸಬೇಕು, ಗಿಡ್ಡನೆಯ ಬಟ್ಟೆ ಅಥವಾ ಗಾಳಿಯಾಡುವ ಬಟ್ಟೆ ಧರಿಸಿ.

ಏನು ಮಾಡಬಾರದು?: – ಬಿಸಿಲಿನಲ್ಲಿ ಹೋಗುವುದು, ವಿಶೇಷವಾಗಿ ಮಧ್ಯಾಹ್ನ ಮತ್ತು 3 ಗಂಟೆಯ ನಡುವೆ ಬಿಸಿಲಲ್ಲಿ ಓಡಾಡಬೇಡಿ. – ಮಧ್ಯಾಹ್ನ ಹೊರಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬೇಡಿ. – ಮದ್ಯ, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಕಡಿಮೆ ಮಾಡಿ. – ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ. – ಗಾಢ ಬಣ್ಣದ, ಸಿಂಥೆಟಿಕ್ ಮತ್ತು ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ಕಡಿಮೆ ಮಾಡಿ.

ದೇಶದ ಕೆಲವು ಭಾಗಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವುದರೊಂದಿಗೆ ಮುಂದಿನ ಐದು ದಿನಗಳಲ್ಲಿ ಬಿಸಿಗಾಳಿ ಮತ್ತಷ್ಟು ತೀವ್ರಗೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ. ಮುಂದಿನ 4 ದಿನಗಳಲ್ಲಿ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಮತ್ತು ಮುಂದಿನ ಎರಡು ದಿನಗಳಲ್ಲಿ ಪೂರ್ವ ಭಾರತದ ಮೇಲೆ ಶಾಖದ ಅಲೆಯ ಪರಿಸ್ಥಿತಿಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಬಿಸಿ ಗಾಳಿಯಿಂದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ ಹವಾಮಾನ ಇಲಾಖೆ ‘ಆರೆಂಜ್’ ಅಲರ್ಟ್​ ನೀಡಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರ ಮತ್ತು ಪಶ್ಚಿಮ ರಾಜಸ್ಥಾನದ ವಿದರ್ಭವು ಕಳೆದ ಎರಡು ತಿಂಗಳಿನಿಂದ 40 ಡಿಗ್ರಿ ಸೆಲ್ಸಿಯಸ್‌ನಿಂದ 45 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ಗರಿಷ್ಠ ತಾಪಮಾನವನ್ನು ಸತತವಾಗಿ ವರದಿ ಮಾಡಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನವು ಮುಂದಿನ 5 ದಿನಗಳಲ್ಲಿ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಮೇ 1ರವರೆಗೆ ಬಿಸಿ ಗಾಳಿಯನ್ನು ಅನುಭವಿಸುವ ಸಾಧ್ಯತೆಯಿದೆ. ಬಿಹಾರ, ಜಾರ್ಖಂಡ್, ಆಂತರಿಕ ಒಡಿಶಾ, ಛತ್ತೀಸ್‌ಗಢ ಮತ್ತು ಗಂಗಾನದಿ ಪಶ್ಚಿಮ ಬಂಗಾಳ, ತೆಲಂಗಾಣದಲ್ಲಿ ಇನ್ನೆರಡು ದಿನ ಬಿಸಿ ಗಾಳಿ ಉಂಟಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Heatwave: 5 ರಾಜ್ಯಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ; ಉಷ್ಣ ಅಲೆಯಿಂದ ಆರೆಂಜ್ ಅಲರ್ಟ್ ಘೋಷಣೆ

Heatwave: ಏಪ್ರಿಲ್ ಆರಂಭದಲ್ಲೇ ದೆಹಲಿಯಲ್ಲಿ ವಿಪರೀತ ಸೆಖೆ; 72 ವರ್ಷದ ದಾಖಲೆ ಮುರಿದ ಗರಿಷ್ಠ ತಾಪಮಾನ

Follow us on

Related Stories

Most Read Stories

Click on your DTH Provider to Add TV9 Kannada