Heatwave: ಏಪ್ರಿಲ್ ಆರಂಭದಲ್ಲೇ ದೆಹಲಿಯಲ್ಲಿ ವಿಪರೀತ ಸೆಖೆ; 72 ವರ್ಷದ ದಾಖಲೆ ಮುರಿದ ಗರಿಷ್ಠ ತಾಪಮಾನ

72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ ಮೊದಲಾರ್ಧದಲ್ಲಿ ದೆಹಲಿಯಲ್ಲಿ ಇಷ್ಟು ಹೆಚ್ಚಿನ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Heatwave: ಏಪ್ರಿಲ್ ಆರಂಭದಲ್ಲೇ ದೆಹಲಿಯಲ್ಲಿ ವಿಪರೀತ ಸೆಖೆ; 72 ವರ್ಷದ ದಾಖಲೆ ಮುರಿದ ಗರಿಷ್ಠ ತಾಪಮಾನ
ಬಿಸಿಗಾಳಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 12, 2022 | 1:58 PM

ನವದೆಹಲಿ: ದೆಹಲಿಯಲ್ಲಿ ಸತತ ಆರನೇ ದಿನವೂ ಬಿಸಿಗಾಳಿಗೆ ಜನರು ತತ್ತರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದ್ದು, ಇಂದಿನ ಗರಿಷ್ಠ ತಾಪಮಾನವು 42 ಡಿಗ್ರಿ ಸೆಲ್ಸಿಯಸ್‌ಗೆ ಏರುವ ನಿರೀಕ್ಷೆಯಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನವು 22.5 ಡಿಗ್ರಿ ಸೆಲ್ಸಿಯಸ್‌ ಆಗಿದ್ದು, ಇಂದು ಮುಂಜಾನೆಯೇ ದೆಹಲಿಯ ಜನರಿಗೆ ಸೆಖೆಯ ಅನುಭವ ಉಂಟಾಯಿತು. ದೆಹಲಿಯ ಬಿಸಿಗಾಳಿ (Heatwave in Delhi) ಕಳೆದ 72 ವರ್ಷಗಳ ದಾಖಲೆಯನ್ನು ಮೀರಿದೆ. ದೆಹಲಿಯಲ್ಲಿ ಇಂದು ಕನಿಷ್ಠ ತಾಪಮಾನ 22.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೇರೆಲ್ಲ ವರ್ಷಗಳಲ್ಲಿ ಈ ಅವಧಿಯಲ್ಲಿ ಉಂಟಾಗುವ ತಾಪಮಾನಕ್ಕಿಂತಲೂ ಈ ಬಾರಿ ಬಿಸಿಗಾಳಿ ಹೆಚ್ಚಾಗಿದೆ.

ಭಾರತದ ಹವಾಮಾನ ಇಲಾಖೆ (IMD) ಪ್ರಕಾರ, ಉಸಿರುಗಟ್ಟಿಸುವ ಶಾಖದ ತೀವ್ರತೆಯ ಭಾರವನ್ನು ಹೊತ್ತಿರುವ ದೆಹಲಿಯು ಸೋಮವಾರ 42.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ಇದು ಐದು ವರ್ಷಗಳಲ್ಲಿ ಏಪ್ರಿಲ್‌ನಲ್ಲಿ ಉಂಟಾದ ಅತ್ಯಧಿಕ ತಾಪಮಾನವಾಗಿದೆ. 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ ಮೊದಲಾರ್ಧದಲ್ಲಿ ದೆಹಲಿಯಲ್ಲಿ ಇಷ್ಟು ಹೆಚ್ಚಿನ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಇದುವರೆಗೆ ರಾಜಧಾನಿ ಐದು ಶಾಖದ ದಿನಗಳನ್ನು ದಾಖಲಿಸಿದೆ. ಈ ಹಿಂದೆ 2017ರಲ್ಲಿ ಏಪ್ರಿಲ್ ತಿಂಗಳಲ್ಲಿ ಇದೇ ರೀತಿಯ ಆರು ದಿನಗಳ ಕಾಲ ಬಿಸಿಗಾಳಿಯ ದಿನಗಳು ಉಂಟಾಗಿದ್ದವು. 2017ರ ಏಪ್ರಿಲ್ 21ರಂದು ರಾಜಧಾನಿ ದೆಹಲಿಯಲ್ಲಿ ಗರಿಷ್ಠ ತಾಪಮಾನ 43.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 1941ರ ಏಪ್ರಿಲ್ 29ರಂದು ಏಪ್ರಿಲ್ ತಿಂಗಳ ಸಾರ್ವಕಾಲಿಕ ಗರಿಷ್ಠ ತಾಪಮಾನವು 45.6 ಡಿಗ್ರಿ ಸೆಲ್ಸಿಯಸ್ ಆಗಿತ್ತು.

ದೆಹಲಿಯಲ್ಲ ಬಿಸಿಗಾಳಿ ತೀವ್ರವಾಗುವುದರಿಂದ ಸೋಮವಾರ ಆರೆಂಜ್ ಅಲರ್ಟ್​ ಘೋಷಿಸಲಾಇತ್ತು. ಇಂದು ಹಳದಿ ಅಲರ್ಟ್​ ಘೋಷಿಸಲಾಗಿದ್ದು, ಬುಧವಾರ ಮತ್ತು ಗುರುವಾರ ಹಸಿರು ಅಲರ್ಟ್​ ಘೋಷಿಸಲಾಗಿದೆ. IMD ಪ್ರಕಾರ, ಶನಿವಾರದ ಗರಿಷ್ಠ ತಾಪಮಾನ 42.4 ಡಿಗ್ರಿ ಸೆಲ್ಸಿಯಸ್​​ನಷ್ಟಿತ್ತು. ಕಳೆದ 72 ವರ್ಷಗಳಲ್ಲಿ ಏಪ್ರಿಲ್ ಮೊದಲಾರ್ಧದಲ್ಲಿ 1951 ಮತ್ತು 2022 ರ ನಡುವೆ ದಾಖಲಾದ ಅತ್ಯಧಿಕವಾಗಿದೆ.

ಇದನ್ನೂ ಓದಿ: Watch ಕುಡಿಯುವ ನೀರಿಗೆ ಹಾಹಾಕಾರ; ಪ್ರಾಣ ಪಣಕ್ಕಿಟ್ಟು ಬಾವಿಯ ತಳದಿಂದ ನೀರು ತಂದ ಮಹಾರಾಷ್ಟ್ರದ ಮಹಿಳೆ

Karnataka Rain: ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇನ್ನೆರಡು ದಿನ ಚದುರಿದ ಮಳೆ; ಕೇರಳದಲ್ಲಿ ಹಳದಿ ಅಲರ್ಟ್​ ಘೋಷಣೆ