ಜಾರ್ಖಂಡ್ ಕೇಬಲ್ ಕಾರ್ ಅಪಘಾತ: 3 ಸಾವು, ತನಿಖೆಗೆ ಆದೇಶಿಸಿದ ಸಿಎಂ ಹೇಮಂತ್ ಸೊರೇನ್
Deoghar Ropeway Accident ಒಟ್ಟಾರೆಯಾಗಿ, ಜನಪ್ರಿಯ ಪ್ರವಾಸಿ ತಾಣವಾದ ತ್ರಿಕುಟ್ ಹಿಲ್ಸ್‌ಗೆ 770-ಮೀ ರೋಪ್‌ವೇಯಲ್ಲಿ ಸಿಲುಕಿದ ಕೇಬಲ್ ಕಾರ್‌ಗಳಿಂದ ಇದುವರೆಗೆ 50 ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡಿರುವ 12 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ: ಜಾರ್ಖಂಡ್ (Jharkhand) ಕೇಬಲ್ ಕಾರ್ ಅಪಘಾತದಲ್ಲಿ(cable car accident) ಮಂಗಳವಾರ ಮಹಿಳೆಯೊಬ್ಬರು ರಕ್ಷಿಸುವ ವೇಳೆ ಬಿದ್ದು ಸಾವನ್ನಪ್ಪಿದ ನಂತರ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ ಎರಡನೇ ವ್ಯಕ್ತಿಯಾಗಿದ್ದಾರೆ ಇವರು. ಭಾರತೀಯ ವಾಯುಪಡೆಯ (IAF) ಹೆಲಿಕಾಪ್ಟರ್‌ಗಳು ಮಂಗಳವಾರ ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ತ್ರಿಕುಟ್ ಬೆಟ್ಟಗಳ ಮೇಲೆ ತಾಂತ್ರಿಕ ದೋಷದ ನಂತರ 40 ಗಂಟೆಗಳಿಗೂ ಹೆಚ್ಚು ಕಾಲ ಕೇಬಲ್ ಕಾರ್‌ಗಳಲ್ಲಿ ಸಿಲುಕಿಕೊಂಡಿದ್ದ 15 ಪ್ರವಾಸಿಗರಲ್ಲಿ 10 ಮಂದಿಯನ್ನು ರಕ್ಷಿಸಿವೆ. ಸೋಮವಾರ ತಡರಾತ್ರಿ ರಕ್ಷಣಾ ಕಾರ್ಯಾಚರಣೆಯನ್ನು ಸ್ವಲ್ಪ ಹೊತ್ತು ಸ್ಥಗಿತಗೊಳಿಸಲಾಗಿತ್ತು. ಒಟ್ಟಾರೆಯಾಗಿ, ಜನಪ್ರಿಯ ಪ್ರವಾಸಿ ತಾಣವಾದ ತ್ರಿಕುಟ್ ಹಿಲ್ಸ್‌ಗೆ 770-ಮೀ ರೋಪ್‌ವೇಯಲ್ಲಿ ಸಿಲುಕಿದ ಕೇಬಲ್ ಕಾರ್‌ಗಳಿಂದ ಇದುವರೆಗೆ 50 ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡಿರುವ 12 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಸುಮಾರು 40 ಗಂಟೆಗಳ ಕಾಲ ಮೂರು ಕೇಬಲ್ ಕಾರ್‌ಗಳಲ್ಲಿ ಸಿಕ್ಕಿಬಿದ್ದ ಎಲ್ಲಾ ಪ್ರವಾಸಿಗರನ್ನು ಇಂದು ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು ಅಪಾಯಕಾರಿ ಕಾರ್ಯಾಚರಣೆಯಲ್ಲಿ ರಕ್ಷಿಸಿವೆ. ಭಾರತೀಯ ವಾಯುಪಡೆ, ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಂಯೋಜಿತ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿವೆ ಎಂದು ದಿಯೋಘರ್ ಉಪ ಆಯುಕ್ತ ಮಂಜುನಾಥ ಭಜಂತ್ರಿ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಭಾನುವಾರ ದಿಯೋಘರ್‌ನ ತ್ರಿಕುಟ್ ಹಿಲ್ಸ್‌ನಲ್ಲಿ ರೋಪ್‌ವೇಯಲ್ಲಿ ಕೇಬಲ್ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ನಂತರ 40 ಕ್ಕೂ ಹೆಚ್ಚು ಜನರು ರೋಪ್‌ವೇಯಲ್ಲಿ ಸಿಲುಕಿಕೊಂಡರು.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮಂಗಳವಾರ ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. 50 ಕ್ಕೂ ಹೆಚ್ಚು ಜನರು ಇದರಲ್ಲಿ ಸಿಲುಕಿಕೊಂಡರು ಮತ್ತು ಆಡಳಿತವು ರಕ್ಷಣಾ ಕಾರ್ಯಾಚರಣೆಗಳ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ಅವರು ಹೇಳಿದರು.
ಅಪಘಾತದ ಸಮಯದಲ್ಲಿ “ಅಡ್ಡಾದಡ್ಡಿ ತಿರುಗಿದ” ಕೇಬಲ್ ಕಾರಿನೊಳಗೆ ಉಂಟಾದ ಗಾಯಗಳಿಂದ ಮಹಿಳೆಯೊಬ್ಬರು ಈ ಹಿಂದೆ ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಕ್ಷಕರು ತಮ್ಮ ಕೇಬಲ್ ಕಾರ್‌ಗಳನ್ನು ಪ್ರವೇಶಿಸಲು ಸಾಧ್ಯವಾಗದ ಕಾರಣ ಸಿಕ್ಕಿಬಿದ್ದ ಅನೇಕ ಪ್ರವಾಸಿಗರು ಆಹಾರ ಅಥವಾ ನೀರಿಲ್ಲದೆ ಪರದಾಡಬೇಕಾಯಿತು.
ಭಾರತೀಯ ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಜಿಲ್ಲಾಡಳಿತದ ನೆರವಿನೊಂದಿಗೆ ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.
#IAF has recommenced rescue operations at Deoghar ropeway early morning today.
Efforts are on to rescue each and every stranded person at the earliest.#HarKaamDeshKeNaam pic.twitter.com/06PTraKHBC
— Indian Air Force (@IAF_MCC) April 12, 2022
ತ್ರಿಕುಟ್ ರೋಪ್‌ವೇ ಅತ್ಯುನ್ನತ ಲಂಬ ರೋಪ್‌ವೇಗಳಲ್ಲಿ ಒಂದಾಗಿದೆ ಮತ್ತು 44 ಡಿಗ್ರಿಗಳ ಗರಿಷ್ಠ ಲೆನ್ಸ್ ಕೋನವನ್ನು ಹೊಂದಿದೆ. ಇದನ್ನು ಬಾಬಾ ಬೈದ್ಯನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 766 ಮೀಟರ್ ಉದ್ದವಿದೆ. ತ್ರಿಕುಟ್ ಬೆಟ್ಟವು 392 ಮೀಟರ್ ಎತ್ತರದಲ್ಲಿದೆ. ರೋಪ್‌ವೇ 25 ಕ್ಯಾಬಿನ್‌ಗಳನ್ನು ಹೊಂದಿದೆ ಮತ್ತು ಪ್ರತಿಯೊಂದೂ ನಾಲ್ಕು ಜನರು ಕುಳಿತುಕೊಳ್ಳಬಹುದು.
ಈ ಅತ್ಯಂತ ಸವಾಲಿನ ಕಾರ್ಯಾಚರಣೆಯಲ್ಲಿ 10 ಕೇಬಲ್ ಕಾರ್‌ಗಳ 35 ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಎರಡು ಜೀವಗಳನ್ನು ಕಳೆದುಕೊಂಡಿದ್ದಕ್ಕಾಗಿ ಐಎಎಫ್ ತೀವ್ರವಾಗಿ ವಿಷಾದಿಸುತ್ತದೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.
ದಿಯೋಘರ್ ರೋಪ್‌ವೇ ಘಟನೆ ಬಗ್ಗೆ ಜಾರ್ಖಂಡ್ ಹೈಕೋರ್ಟ್ ಸುಮೊಟೊ ಸ್ವೀಕರಿಸಿ ತನಿಖೆಗೆ ಆದೇಶಿಸಿದೆ. ನ್ಯಾಯಾಲಯವು ಏಪ್ರಿಲ್ 26 ರಂದು ವಿಚಾರಣೆ ನಡೆಸಲಿದೆ.
ಅಧಿಕಾರಿಗಳ ಪ್ರಕಾರ ತಾಂತ್ರಿಕ ದೋಷದಿಂದಾಗಿ ಕೇಬಲ್ ಕಾರುಗಳು ಡಿಕ್ಕಿ ಹೊಡೆದಿರಬಹುದು, ಆದರೆ ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ. ಘಟನೆಯ ನಂತರ ರೋಪ್‌ವೇ ಮ್ಯಾನೇಜರ್ ಮತ್ತು ಇತರ ಉದ್ಯೋಗಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: Santosh Suicide: ಸಚಿವ ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಲಂಚದ ಕುರಿತು ಮಾಡಿದ್ದ ಗಂಭೀರ ಆರೋಪಗಳ ವಿವರ ಇಲ್ಲಿದೆ