AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ಕುಡಿಯುವ ನೀರಿಗೆ ಹಾಹಾಕಾರ; ಪ್ರಾಣ ಪಣಕ್ಕಿಟ್ಟು ಬಾವಿಯ ತಳದಿಂದ ನೀರು ತಂದ ಮಹಾರಾಷ್ಟ್ರದ ಮಹಿಳೆ

ಈ ಚಿತ್ರವು ಮಹಾರಾಷ್ಟ್ರದ ತ್ರಯಂಬಕೇಶ್ವರ ಬಳಿಯ ಮೆಟ್‌ಘರ್ ಗ್ರಾಮದ್ದು. ಕುಡಿಯಲು ನೀರಿಲ್ಲ, ಮಹಿಳೆಯರು ಜೀವವನ್ನೇ ಪಣಕ್ಕಿಟ್ಟು ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಇದೆಲ್ಲವೂ 2022 ರಲ್ಲಿ ಸಂಭವಿಸುತ್ತದೆ ಎಂದು ವಿಡಿಯೊ ಶೀರ್ಷಿಕೆಯಲ್ಲಿ ಹೇಳಲಾಗಿದೆ

Watch ಕುಡಿಯುವ ನೀರಿಗೆ ಹಾಹಾಕಾರ; ಪ್ರಾಣ ಪಣಕ್ಕಿಟ್ಟು ಬಾವಿಯ ತಳದಿಂದ ನೀರು ತಂದ ಮಹಾರಾಷ್ಟ್ರದ ಮಹಿಳೆ
ಬಾವಿಗಿಳಿಯುತ್ತಿರುವ ಮಹಾರಾಷ್ಟ್ರದ ಮಹಿಳೆ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Apr 06, 2022 | 7:20 PM

Share

ನಾಸಿಕ್: ಬೇಸಿಗೆಯಲ್ಲಿ ಭಾರತದ ಅನೇಕ ಭಾಗಗಳು ಬರ ಮತ್ತು ಸೆಖೆಯಿಂದ ತತ್ತರಿಸಿದಾಗ, ಗ್ರಾಮೀಣ ಪ್ರದೇಶದ ಅನೇಕ ಮಹಿಳೆಯರು ತಮ್ಮ ಕುಟುಂಬಗಳಿಗೆ ನೀರು ತರಲು ತಮ್ಮ ಪ್ರಾಣವನ್ನೇ ಪಣಕ್ಕಿಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ(Maharashtra) ನೀರಿನ ಸೆಲೆ ಬತ್ತಿ ಹೋಗುತ್ತಿರುವಾಗ ಕುಡಿಯುವ ಶುದ್ಧ ನೀರಿಗಾಗಿ  ಮಹಿಳೆಯೊಬ್ಬರು ಆಳವಾದ ಬಾವಿಗೆ ಇಳಿದು ತಳದಿಂದ ನೀರು ತರುತ್ತಿರುವುದು ವಿಡಿಯೊದಲ್ಲಿದೆ. ಟ್ವಿಟರ್​​ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಮಹಿಳೆಯೊಬ್ಬರು ಬಾವಿಗೆ ಇಳಿಯುವುದನ್ನು ಕಾಣಬಹುದು. ಚಿಕ್ಕ ಮತ್ತು ಅದೃಶ್ಯವಾದ ಮೆಟ್ಟಿಲುಗಳಲ್ಲಿ ಕಾಲಿಟ್ಟು ಮಹಿಳೆಯೊಬ್ಬರು ನೀರು ತರಲು ಬಾವಿಗಿಳಿಯುತ್ತರುವ  ಈ ದೃಶ್ಯ ನಾಸಿಕ್ ಜಿಲ್ಲೆಯ ಹಳ್ಳಿಯೊಂದರದ್ದು. “ಈ ಚಿತ್ರವು ಮಹಾರಾಷ್ಟ್ರದ ತ್ರಯಂಬಕೇಶ್ವರ (Trimbakeshwar)ಬಳಿಯ ಮೆಟ್‌ಘರ್ ಗ್ರಾಮದ್ದು. ಕುಡಿಯಲು ನೀರಿಲ್ಲ, ಮಹಿಳೆಯರು ಜೀವವನ್ನೇ ಪಣಕ್ಕಿಟ್ಟು ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಇದೆಲ್ಲವೂ 2022 ರಲ್ಲಿ ಸಂಭವಿಸುತ್ತದೆ ಎಂದು ವಿಡಿಯೊ ಶೀರ್ಷಿಕೆಯಲ್ಲಿ ಹೇಳಲಾಗಿದೆ. ಮಹಾರಾಷ್ಟ್ರದಲ್ಲಿ ಬಿಸಿಗಾಳಿ ತೀವ್ರವಾಗಿ ಕಾಡುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ ಪ್ರಕಾರ ಏಪ್ರಿಲ್ 10 ರವರೆಗೆ ವಿದರ್ಭದಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ತಾಪ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಪುಣೆಯ ಐಎಂಡಿ ಹವಾಮಾನ ಸಂಶೋಧನೆ ಮತ್ತು ಸೇವೆಗಳ ಮುಖ್ಯಸ್ಥ ಕೆಎಸ್ ಹೊಸಲಿಕರ್ ಅವರು ಏಪ್ರಿಲ್ 6 ರಂದು ಮಾಡಿದ ಟ್ವೀಟ್ ಪ್ರಕಾರ ಮುಂದಿನ 48 ಗಂಟೆಗಳಲ್ಲಿ ಉತ್ತರ ಮಧ್ಯ ಮಹಾರಾಷ್ಟ್ರ ಮತ್ತು ವಿದರ್ಭದ ಕೆಲವು ಭಾಗಗಳಲ್ಲಿ ಶಾಖದ ಅಲೆಯನ್ನು ನಿರೀಕ್ಷಿಸಲಾಗಿದೆ  ಎಂದು ಹೇಳಿದರು.

ಬಯಲು ಪ್ರದೇಶಗಳಲ್ಲಿ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ತಲುಪಿದಾಗ ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಆದಾಗ ಅದನ್ನು ಗರಿಷ್ಠ ತಾಪಮಾನ ಎಂದು ಐಎಂಡಿ ವರ್ಗೀಕರಿಸುತ್ತದೆ. ಸಾಮಾನ್ಯದಿಂದ ಗರಿಷ್ಠ ತಾಪಮಾನ ವ್ಯತ್ಯಾಸವು 4.5 ಡಿಗ್ರಿ ಸೆಲ್ಸಿಯಸ್ ನಿಂದ 6.4 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರಬೇಕು. ದಾಖಲಾದ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 6.4 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ತೀವ್ರವಾದ ಶಾಖದ ಅಲೆ ಎನ್ನಲಾಗುತ್ತದೆ.

ಏಪ್ರಿಲ್ 5 ರಂದು ಸ್ಕೈಮೆಟ್‌ನ ಹವಾಮಾನ ವರದಿಯು ವಿದರ್ಭದ ಅಕೋಲಾವು 40 ಡಿಗ್ರಿ ಸೆಲ್ಸಿಯಸ್ ಗಿಂತ ಗರಿಷ್ಠ ತಾಪಮಾನವನ್ನು ಕಂಡಿದೆ ಎಂದು ಹೇಳುತ್ತದೆ, ಪಾದರಸದ ಮಟ್ಟವು 44 ಡಿಗ್ರಿ ಸೆಲ್ಸಿಯಸ್ ಅನ್ನು ಸಹ ಮುಟ್ಟುತ್ತದೆ. “ಅಕೋಲಾ ವಿದರ್ಭದಲ್ಲಿ ಇಲ್ಲಿಯವರೆಗೆ 44 ಡಿಗ್ರಿಗಳನ್ನು ಹೊಂದಿರುವ ಏಕೈಕ ಪ್ರದೇಶವಾಗಿದೆ ಎಂದು ಸ್ಕೈಮೆಟ್ ವರದಿ ಹೇಳಿದೆ.

ಇದನ್ನೂ ಓದಿ: ಅಲಿಗಢ, ಬದೌನ್ ಮತ್ತು ಸುಲ್ತಾನ್‌ಪುರ ಸೇರಿದಂತೆ ಉತ್ತರ ಪ್ರದೇಶದ 12 ಜಿಲ್ಲೆಗಳ ಹೆಸರು ಬದಲಾಯಿಸಲಿದೆ ಯೋಗಿ ಸರ್ಕಾರ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್