Mother in law: ಅತ್ತೆಯನ್ನು ಗೆಲ್ಲಲು ಇಲ್ಲಿದೆ 5 ಸಲಹೆಗಳು

ಹೊಸ ಸಂಬಂಧಗಳನ್ನು ರೂಪಿಸುವುದು ಮತ್ತು ಉಳಿಸಿಕೊಳ್ಳುವುದು ಯಾವಾಗಲೂ ಕಷ್ಟವಾದ ಸಂಗತಿಗಳು ವಿಶೇಷವಾಗಿ ನಿಮ್ಮ ಅತ್ತೆ ಜೊತೆಗಿನ ಸಂಬಂಧಗಳು ಅದು ಯಾವಾಗಲೂ ನಿಮಗೆ ಒಂದು ರೀತಿಯ ಗೊಂದಲವಾಗಿರುತ್ತದೆ.

Mother in law: ಅತ್ತೆಯನ್ನು ಗೆಲ್ಲಲು ಇಲ್ಲಿದೆ 5 ಸಲಹೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 30, 2022 | 1:52 PM

ಹೊಸ ಸಂಬಂಧಗಳನ್ನು ರೂಪಿಸುವುದು ಮತ್ತು ಉಳಿಸಿಕೊಳ್ಳುವುದು ಯಾವಾಗಲೂ ಕಷ್ಟವಾದ ಸಂಗತಿಗಳು ವಿಶೇಷವಾಗಿ ನಿಮ್ಮ ಅತ್ತೆ ಜೊತೆಗಿನ ಸಂಬಂಧಗಳು ಅದು ಯಾವಾಗಲೂ ನಿಮಗೆ ಒಂದು ರೀತಿಯ ಗೊಂದಲವಾಗಿರುತ್ತದೆ. ಅತ್ತೆ ಜೊತೆಗಿನ ಸಂಬಂಧವನ್ನು ಹೇಗೆ ಉತ್ತಮಗೊಳಿಸುವುದು, ನಿಮ್ಮ ಅತ್ತೆಯ ಜೊತೆಗೆ ಸ್ನೇಹಿತೆಯಂತೆ ಇರುವಂತೆ ನೋಡಿಕೊಳ್ಳುವುದು ಹೇಗೆ ಈ ಬಗ್ಗೆ ಇಲ್ಲಿದೆ ಸುಲಭ ವಿಧಾನಗಳು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ನೀವು ಅತ್ತೆಯೊಂದಿಗೆ ಅಥವಾ ನಿಮ್ಮ ಭವಿಷ್ಯದ ಅತ್ತೆಯೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಲು ಪ್ರಯತ್ನವನ್ನು ಮಾಡಬೇಕು.

ಭಾವನಾತ್ಮಕ ಸಂಬಂಧ ಇರಲಿ

ನಿಮ್ಮ ಸಂಬಂಧಗಳನ್ನು ಬಲಪಡಿಸುವಲ್ಲಿ ನಿಮ್ಮ ಅತ್ತೆ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳಿ. ನಿಮ್ಮ ಗಂಡನ ಬಗ್ಗೆ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳವ ಪ್ರಯತ್ನವನ್ನು ಮಾಡಿ. ಏಕೆಂದರೆ ನಿಮ್ಮ ಗಂಡನ ಬಗ್ಗೆ ಹೆಚ್ಚು ತಿಳಿದುಕೊಂಡಿರುವುದು ನಿಮ್ಮ ಅತ್ತೆ, ಅವರ ಎಲ್ಲ ಇಷ್ಟ-ಕಷ್ಟಗಳ ಬಗ್ಗೆ ಅವರಿಂದ ತಿಳಿದುಕೊಳ್ಳಿ ಮತ್ತು ಅವರಿಗೂ ನಿಮ್ಮ ಮೇಲೆ ಮಗಳ ಭಾವನೆ ಬರುವಂತೆ ನಡೆದುಕೊಳ್ಳಿ, ಅವರ ಕಷ್ಟಗಳಿಗೆ ಮಗಳಂತೆ ಸ್ಪಂದಿಸುವ ಕೆಲಸವನ್ನು ಮಾಡಿ, ಏಕೆಂದರೆ ಅವರಿಗೆ ಮಗನ ಹೆಂಡತಿ ಎನ್ನುವ ಭಾವನೆ ಬರದಂತೆ ನಡೆದುಕೊಂಡು ಒಳ್ಳೆಯ ಸ್ನೇಹಿತೆಯಂತೆ ಇರಲು ಪ್ರಯತ್ನ ಮಾಡಿ. ಇದರ ಜೊತೆಗೆ ನಿಮಗೆ ಆಗುವ ತೊಂದರೆಗಳನ್ನು ಅವರ ಜೊತೆಗೆ ಮುಕ್ತವಾಗಿ ಹಂಚಿಕೊಳ್ಳಿ.

ಇದನ್ನೂ ಓದಿ
Image
RR vs RCB Qualifier 2: ಇಲ್ಲಿ RCB ತಂಡವೇ ಬಲಿಷ್ಠ, ಆದರೆ…
Image
Cholesterol: ಈ ಲಕ್ಷಣಗಳಿವೆಯಾ? ಹಾಗಾದ್ರೆ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ
Image
Heart Disease: ಟಿವಿ ವೀಕ್ಷಣೆ ಕಡಿಮೆ ಮಾಡಿ, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಿ
Image
Fish Allergy: ಮೀನು ಅಲರ್ಜಿ ಎಂದರೇನು? ನಿಭಾಯಿಸುವುದು ಹೇಗೆ?

ಅತ್ತೆ ಮಾತಿಗೂ ಬೆಲೆ ನೀಡಿ

ಅತ್ತೆ ಎಂದ ಕ್ಷಣ ಅವಳಿಗೂ ಒಂದು ರೀತಿಯ ಗೌರವವನ್ನು ತನ್ನಲ್ಲಿಯೇ ಹುಟ್ಟಿಸಿಕೊಳ್ಳತ್ತಾಳೆ. ಹಾಗಾಗಿ ಕೆಲವೊಂದು ಬಾರಿ ಅತ್ತೆಗೂ ಕೂಡ ತನ್ನ ಮಾತಿನ ಬಗ್ಗೆ ಮೌಲ್ಯ ಇದೆ ಎಂಬ ಭಾವನೆ ಮೂಡವಂತೆ ಮಾಡಿ. ಏಕೆಂದರೆ ಒಟ್ಟಿಗೆ ಸಮಯ ಕಳೆಯುವಾಗ, ಅವಳ ಮಾತಿನಲ್ಲಿ ಕೆಲವೊಂದು ಜೀವನದ ಪಾಠ ಇರಬಹುದು, ಅವಳ ಜೀವನದ ಅನುಭವವನ್ನು ನೀವು ಅರಿತು, ಅವರ ಜೊತೆಗೆ ಹೊಂದಾಣಿಕೆಯನ್ನು ಮಾಡಿಕೊಂಡು ಹೋಗಬೇಕು. ಬದುಕಿನಲ್ಲಿ ಕೆಲವೊಂದು ಹೊಂದಾಣಿಕೆಯಿಂದ ಮಾತ್ರ ನಿಮ್ಮ ಜೀವನ ಇನ್ನಷ್ಟು ಉತ್ತಮವಾಗಿರುತ್ತದೆ. ಅದಕ್ಕೆ ನಿಮ್ಮ ಅತ್ತೆಯ ಮಾತಿಗೆ ಬೆಲೆ ನೀಡುವುದು ಉತ್ತಮ ಮತ್ತು ಅವಳ ಜೊತೆಗೆ ಕೆಲವೊಂದು ನಿಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಾಗ ಅವರಿಗೂ ನಮ್ಮ ಮಾತಿಗೆ ನನ್ನ ಸೊಸೆಯ ಬೆಲೆ ನೀಡುತ್ತಾಳೆ ಎಂಬ ಭಾವನೆ ಬರುತ್ತದೆ.

ಅಹಂಕಾರ ಮತ್ತು ಉದ್ವೇಗ ಬೇಡ

ಅತ್ತೆ ಎನ್ನುವ ಅಹಂಕಾರ ಅವರಿಗೆ, ಸೊಸೆ ಎನ್ನುವ ಉದ್ವೇಗ ನಿಮಗೆ ಹಾಗಾಗಿ ಇದನ್ನು ಪರಿಹಾರ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಈ ಬಗ್ಗೆ ನಿಮ್ಮ ಮಧ್ಯೆ ಹೊಂದಾಣಿಕೆಯನ್ನು ಮಾಡುಕೊಳ್ಳುವುದು ಹೇಗೆ, ಅದಕ್ಕಾಗಿ ಮೊದಲಿಗೆ ನೀವು ಉದ್ವೇಗವನ್ನು ಬೀಡಬೇಕು, ಜೊತೆಗೆ ಅವರಿಗೆ ಅತ್ತೆ ಎನ್ನುವ ಅಹಂಕಾರ ಹೋಗಬೇಕು, ಇದಕ್ಕೆ ದಿನನಿತ್ಯ ನೀವು ಪ್ರಯತ್ನ ಮಾಡಬೇಕು.

ನಿಮ್ಮ ಮತ್ತು ಅತ್ತೆಯ ಆತ್ಮಗೌರವವನ್ನು ಹೆಚ್ಚಿಸಿ

ನಿಮ್ಮ ಮತ್ತು ನಿಮ್ಮ ಅತ್ತೆಯ ಆತ್ಮಗೌರವವನ್ನು ಹೆಚ್ಚಿಸಿ, ಏಕೆಂದರೆ ನಿಮ್ಮ ಆತ್ಮ ಗೌರವದ ಮುಂದೆ ಯಾವುದು ಇಲ್ಲ, ಹಾಗಾಗಿ ನಿಮ್ಮ ಆತ್ಮಗೌರವದ ಜೊತೆಗೆ ನಿಮ್ಮ ಅತ್ತೆಯ ಆತ್ಮಗೌರವವನ್ನು ಹೆಚ್ಚಿಸುವ ಕೆಲಸವನ್ನು ಮಾಡಿ, ಯಾರ ಮುಂದೆಯೂ ನಿಮ್ಮ ಅತ್ತೆಯನ್ನು ಬಿಟ್ಟಕೊಡಬೇಡಿ, ಜೊತೆಗೆ ನಿಮ್ಮ ಅತ್ತೆಯೂ ನಿಮ್ಮನ್ನು ಯಾರ ಮುಂದೆಯೂ ಬಿಟ್ಟುಕೊಡದಂತೆ ನೋಡಿಕೊಳ್ಳಲಿ.

ಒಟ್ಟಿಗೆ ಸಮಯ ಕಳೆಯಿರಿ

ನೀವು ಶಾಪಿಂಗ್‌ಗೆ ಹೋಗುವಾಗ ಅಥವಾ ಸಂಜೆಯ ವಾಕ್‌ ಹೋಗುವಾಗ ಅತ್ತೆಯ ಜೊತೆಗೆ ಹೋಗಿ. ನೀವಿಬ್ಬರ ನಡುವೆ ಯಾವುದೇ ಗೊಂದಲ ಇರಬಾರದು ಮತ್ತು ಪರಸ್ಪರ ಬಾಂಧವ್ಯದಿಂದ ಇರಬೇಕು ಅದಕ್ಕೆ ಎಲ್ಲ ಕೆಲಸವನ್ನು ಜೊತೆಗೆಯಾಗಿ ಹಂಚಿಕೊಂಡು ಮಾಡಬೇಕು. ನಿಮ್ಮ ಸ್ನೇಹದಲ್ಲಿ ಒಳ್ಳೆಯ ಭಾವನೆಗಳನ್ನು ಇಟ್ಟುಕೊಳ್ಳಿ.

Published On - 1:51 pm, Sat, 30 July 22

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ