Plant Based Meat: ಪ್ರಾಣಿ ಮಾಂಸಕ್ಕಿಂತ, ಸಸ್ಯ ಆಧಾರಿತ ಮಾಂಸ ಆರೋಗ್ಯಕ್ಕೆ ಒಳ್ಳೆಯದು

ಚಿಕನ್, ಮಟನ್, ಫಿಶ್ ಹೀಗೆ ಪ್ರಾಣಿಗಳ ಮಾಂಸ ತಿನ್ನುವುದಕ್ಕಿಂತ ಸಸ್ಯ ಆಧಾರಿತ ಮಾಂಸವು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಸಂಶೋಧನೆಯೊಂದರಿಂದ ಬಹಿರಂಗಗೊಂಡಿದೆ. ಬಾತ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞರು ನಡೆಸಿದ ಅಧ್ಯಯನದ ಪ್ರಕಾರ ಸಸ್ಯ-ಆಧಾರಿತ ಮಾಂಸ ಸಮರ್ಥನೀಯ ಪರಿಹಾರವನ್ನು ನೀಡುತ್ತದೆ.

Plant Based Meat: ಪ್ರಾಣಿ ಮಾಂಸಕ್ಕಿಂತ, ಸಸ್ಯ ಆಧಾರಿತ ಮಾಂಸ ಆರೋಗ್ಯಕ್ಕೆ ಒಳ್ಳೆಯದು
MeatImage Credit source: Hindustan Times
Follow us
TV9 Web
| Updated By: ನಯನಾ ರಾಜೀವ್

Updated on: Jul 30, 2022 | 1:08 PM

ಚಿಕನ್, ಮಟನ್, ಫಿಶ್ ಹೀಗೆ ಪ್ರಾಣಿಗಳ ಮಾಂಸ ತಿನ್ನುವುದಕ್ಕಿಂತ ಸಸ್ಯ ಆಧಾರಿತ ಮಾಂಸವು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಸಂಶೋಧನೆಯೊಂದರಿಂದ ಬಹಿರಂಗಗೊಂಡಿದೆ. ಬಾತ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞರು ನಡೆಸಿದ ಅಧ್ಯಯನದ ಪ್ರಕಾರ ಸಸ್ಯ-ಆಧಾರಿತ ಮಾಂಸ ಸಮರ್ಥನೀಯ ಪರಿಹಾರವನ್ನು ನೀಡುತ್ತದೆ.

ಸಸ್ಯಾಹಾರಿಗಳು ನಿತ್ಯ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ ಆದರೆ ಮಾಂಸಹಾರಿಗಳು ನಿತ್ಯವೂ ಮಾಂಸವನ್ನು ತಿನ್ನುವುದನ್ನು ರೂಢಿ ಮಾಡಿಕೊಂಡಿರುತ್ತಾರೆ, ಮಾಂಸ ಸೇವನೆಯಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು.

ಸಸ್ಯ-ಆಧಾರಿತ ಮಾಂಸವನ್ನು ಸಸ್ಯಗಳಿಂದ ತಯಾರಿಸಲಾಗುತ್ತದೆ ಮತ್ತು ಮಾಂಸದಂತೆ ಕಾಣಿಸುತ್ತದೆ, ರುಚಿಯೂ ಹಾಗೆಯೇ ಇರುತ್ತದೆ. ಸಸ್ಯ ಮೂಲದ ಮಾಂಸಗಳು ಸಾಮಾನ್ಯ ಮಾಂಸಕ್ಕಿಂತ ಆರೋಗ್ಯಕರವಾಗಿರುತ್ತವೆ ಏಕೆಂದರೆ ಅವುಗಳು ಸ್ಯಾಚುರೇಟೆಡ್ ಕೊಬ್ಬು ಮತ್ತು ಕ್ಯಾಲೋರಿಗಳಲ್ಲಿ ಕಡಿಮೆಯಿರುತ್ತದೆ.

ಸಸ್ಯ-ಆಧಾರಿತ ಆಹಾರಗಳ ಆರೋಗ್ಯ ಹಾಗೂ ಪರಿಸರದ ಪರಿಣಾಮಗಳು ಮತ್ತು ಗ್ರಾಹಕರ ವರ್ತನೆಗಳ ಬಗ್ಗೆ 43 ಅಧ್ಯಯನಗಳನ್ನು ಪರಿಶೀಲಿಸಲಾಗಿದೆ. ಸಸ್ಯಾಹಾರಿಗಳಲ್ಲಿ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ ಮಟ್ಟ, ಕಡಿಮೆ ರಕ್ತದೊತ್ತಡ, ಮತ್ತು ಅಧಿಕ ರಕ್ತದೊತ್ತಡ ಮತ್ತು ಟೈಪ್ 2 ಮಧುಮೇಹದ ಅಪಾಯ ಮಾಂಸಹಾರಿಗಳಿಗಿಂತ ಕಡಿಮೆ ಇರುತ್ತದೆ.

ಸಸ್ಯಾಧಾರಿತ ಉತ್ಪನ್ನಗಳಿಗೆ ಸಾಮಾನ್ಯವಾಗಿ ಕಡಿಮೆ ಕೃಷಿ ಭೂಮಿ ಸಾಕು. ಕಡಿಮೆ ನೀರು ಬೇಕಾಗುತ್ತದೆ ಮತ್ತು ಪ್ರಾಣಿ ಉತ್ಪನ್ನಗಳಿಗಿಂತ ಕಡಿಮೆ ಮಾಲಿನ್ಯವನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ.

ಈ ಅಧ್ಯಯನದ ಪ್ರಕಾರ ಸಸ್ಯ-ಆಧಾರಿತ ಮಾಂಸ ಮತ್ತು ಡೈರಿ ಉತ್ಪನ್ನಗಳಲ್ಲಿ ಸುಮಾರು ಶೇ. 90 ಗ್ರಾಹಕರು ವಾಸ್ತವವಾಗಿ ತಿನ್ನುವವರು ಅಥವಾ ಫ್ಲೆಕ್ಸಿಟೇರಿಯನ್ ಆಗಿದ್ದಾರೆ.  ಸಂಸ್ಕರಿತ ಮಾಂಸಕ್ಕೆ ಒಂದೇ ರೀತಿಯ ರುಚಿ, ವಿನ್ಯಾಸ ಮತ್ತು ಬೆಲೆಯನ್ನು ಹೊಂದಿರುವ ಸಸ್ಯ-ಆಧಾರಿತ ಉತ್ಪನ್ನಗಳು ಮಾಂಸವನ್ನು ಬದಲಿಸಲು ಉತ್ತಮ ಅವಕಾಶವನ್ನು ನಮಗೆ ನೀಡುತ್ತದೆ.

ಈ ಸಸ್ಯ-ಆಧಾರಿತ ಉತ್ಪನ್ನಗಳು ಅವರು ಬದಲಿಸುತ್ತಿರುವ ಪ್ರಾಣಿ ಉತ್ಪನ್ನಗಳಿಗಿಂತ ಕಡಿಮೆ ಮಟ್ಟದ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಉಂಟುಮಾಡುತ್ತವೆ ಎಂದು ಹೇಳಲಾಗಿದೆ.

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ