ನಿಮ್ಮ ತೂಕ ಇಳಿಸಲು ಸಹಾಯ ಮಾಡಿ ಅಂದ ಹೆಚ್ಚಿಸುವ ಈ ಹಣ್ಣುಗಳ ಬಗ್ಗೆ ತಿಳಿಯಿರಿ
ಆರಾಮದಾಯಕ ಜೀವನವು ನಮ್ಮ ತೂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದರ ಬಗ್ಗೆಯೂ ಸಂದೇಹ ಬೇಡ. ಇತ್ತೀಚಿನ ದಿನಗಳಲ್ಲಿ ತೂಕ ಸಮಸ್ಯೆಯೆಂಬುದು ಜನರ ಪ್ರಮುಖ ಸಮಸ್ಯೆಯಾಗಿದೆ,
ನಿಮಗೆ ತೂಕ( Weight) ಇಳಿಸಿಕೊಳ್ಳಲು ಬೇರೆ ಆಹಾರಗಳ ಜತೆ ಹಣ್ಣುಗಳ ಸೇವನೆಯು ಬಹುಮುಖ್ಯವಾಗಿರುತ್ತದೆ. ಈಗೀಗ ಮನುಷ್ಯನ ಕೆಲಸಗಳೇನೋ ಸುಲಭವಾಗುತ್ತಿದೆ ಹಾಗೆಯೇ ಆರೋಗ್ಯವು ದಿನದಿಂದ ದಿನಕ್ಕೆ ಕ್ಷೀಣಿಸತ್ತಿದೆ. ಅದೇ ರೀತಿ ಆರಾಮದಾಯಕ ಜೀವನವು ನಮ್ಮ ತೂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದರ ಬಗ್ಗೆಯೂ ಸಂದೇಹ ಬೇಡ. ಇತ್ತೀಚಿನ ದಿನಗಳಲ್ಲಿ ತೂಕ ಸಮಸ್ಯೆಯೆಂಬುದು ಜನರ ಪ್ರಮುಖ ಸಮಸ್ಯೆಯಾಗಿದೆ, ಕೊರೊನಾ ಬಂದು ವರ್ಕ್ ಫ್ರಂ ಹೋಂ ಶುರುವಾದಾಗಿನಿಂದ ಜನರು ಮತ್ತಷ್ಟು ಸೋಮಾರಿಯಾಗಿದ್ದಾರೆ.
ಹಲವು ಕಾರಣಗಳಿರಬಹುದು. ಆದರೆ, ತಪ್ಪು ದಿನಚರಿ ಮತ್ತು ಅತಿಯಾದ ಎಣ್ಣೆಯುಕ್ತ ಆಹಾರ ಸೇವನೆ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ನೀವು ಸಹ ನಿಮ್ಮ ತೂಕವನ್ನು ಕಡಿಮೆ ಮಾಡಲು ಬಯಸಿದರೆ, ಮೊದಲು ನೀವು ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಕಡಿಮೆ ಮಾಡಲು ಪ್ರಾರಂಭಿಸಬೇಕು. ಇದಲ್ಲದೆ, ತೂಕವನ್ನು ಕಡಿಮೆ (Weight Loss) ಮಾಡಲು ಸಹಾಯ ಮಾಡುವ ಕೆಲವು ಹಣ್ಣುಗಳಿವೆ. ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು.
ತೂಕ ನಷ್ಟಕ್ಕೆ ಅಗತ್ಯವಾದ ಹಣ್ಣುಗಳು: ತೂಕ ಇಳಿಸಲು ಯೋಚಿಸುವಾಗ ಸಾಕಷ್ಟು ಕಾಳಜಿಯ ಅಗತ್ಯವಿರುತ್ತದೆ. ಯಾವುದೇ ವಸ್ತುವನ್ನು ಸೇವಿಸುವ ಮೊದಲು, ಅದು ಹಣ್ಣು ಅಥವಾ ತರಕಾರಿಯಾಗಿರಲಿ, ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದಿರುವುದು ಮುಖ್ಯವಾಗುತ್ತದೆ. ತೂಕವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಬಲ್ಲ ಇಂತಹ ಹಣ್ಣುಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
ಸೇಬು: ಸೇಬುವಿನಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಕ್ಯಾಲೊರಿ ಕಡಿಮೆ ಇರುತ್ತದೆ, ಅದರಲ್ಲಿ 116 ಕ್ಯಾಲೊರಿಗಳು ಹಾಗೂ 5.4 ಗ್ರಾಂನಷ್ಟು ಫೈಬರ್ ಇರುತ್ತದೆ. ಇದನ್ನು ತೂಕ ಇಳಿಕೆಗಾಗಿ ಸೇವಿಸಲಾಗುತ್ತದೆ.
ಕಿವಿ : ಕಿವಿ ತೂಕ ನಷ್ಟಕ್ಕೆ ಸೂಪರ್ ಫುಡ್ ಆಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಕಿವಿಯಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಫೋಲೇಟ್ ಮತ್ತು ಫೈಬರ್ ಸಮೃದ್ಧವಾಗಿರುವ ಅನೇಕ ಪೋಷಕಾಂಶಗಳಿವೆ. ಕಿವಿಯ ಸೇವನೆಯಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದಂತಾಗುತ್ತದೆ. ಅಲ್ಲದೆ, ಕಿವಿಯು ಹಸಿವನ್ನು ನಿಯಂತ್ರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ.
ಕಿತ್ತಳೆ : ಇದು ದೇಹದ ಕ್ಯಾಲೊರಿಗಳನ್ನು ಅತ್ಯಂತ ವೇಗವಾಗಿ ಸುಡುತ್ತದೆ. ಹೆಚ್ಚಿನ ಕ್ಯಾಲೊರಿಗಳನ್ನು ಸುಡುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಥಯಾಮಿನ್, ವಿಟಮಿನ್ ಸಿ ಮತ್ತು ಫೋಲೇಟ್‌ನಂತಹ ಅನೇಕ ಪೋಷಕಾಂಶಗಳು ಕಿತ್ತಳೆಯಲ್ಲಿ ಕಂಡುಬರುತ್ತವೆ. ಅದರ ಸೇವನೆಯಿಂದ ಚಯಾಪಚಯವು ವೇಗಗೊಳ್ಳುತ್ತದೆ ಮತ್ತು ಸಿಹಿ ಆಹಾರಕ್ಕಾಗಿ ಕಡುಬಯಕೆ ಕೊನೆಗೊಳ್ಳುತ್ತದೆ, ತೂಕವನ್ನು ಹೆಚ್ಚಿಸುವಲ್ಲಿ ಸಿಹಿ ಪ್ರಮುಖ ಪಾತ್ರ ವಹಿಸುತ್ತದೆ.
ಸೀಬೆಹಣ್ಣು : ಸೀಬೆಹಣ್ಣು ಕಡಿಮೆ ಕ್ಯಾಲೋರಿ ಹಣ್ಣುಗಳಲ್ಲಿ ಒಂದಾಗಿದೆ, ಇದು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಹೆಚ್ಚು ಹೊತ್ತು ಹಸಿವಾಗುವುದಿಲ್ಲ ಹಾಗೆಯೇ ಕ್ಯಾಲೋರಿಗಳು ಹೆಚ್ಚಾಗುವುದಿಲ್ಲ. ಮ್ಯಾಂಗನೀಸ್, ಫೋಲೇಟ್ ನಂತಹ ಅನೇಕ ಖನಿಜಗಳು, ಪ್ರೋಟೀನ್ ಮತ್ತು ಫೈಬರ್ ಸೀಬೆಹಣ್ಣಿನಲ್ಲಿ ಕಂಡುಬರುತ್ತವೆ. ಪ್ರೋಟೀನ್ ಮತ್ತು ನಾರಿನಂಶ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ ಮತ್ತು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ನೀವು ಆಹಾರದಲ್ಲಿ ನಿಂಬೆ ಮತ್ತು ಎಳನೀರನ್ನು ಸಹ ಸೇವಿಸಬಹುದು. ಇವೆರಡೂ ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ, ಇದು ತೂಕವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ.
ಬಾಳೆ ಹಣ್ಣು: ಬಾಳೆಹಣ್ಣಿನಲ್ಲಿ ಎತೇಚ್ಚವಾಗಿ ಪೋಷಕಾಂಶಗಳು ಹಾಗೂ ಫೈಬರ್ ಅಂಶಗಳಿರುತ್ತವೆ, ಹಾಗಾಗಿ ಇದು ತೂಕ ಕಡಿಮೆ ಮಾಡಲು ಬಳಕೆ ಮಾಡಬಹುದಾಗಿದೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ