Year Ender 2022: ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್ ಕೇರ್ ಪ್ರಾಡಕ್ಟ್​ಗಳು ಇಲ್ಲಿವೆ

| Updated By: ಅಕ್ಷತಾ ವರ್ಕಾಡಿ

Updated on: Dec 20, 2022 | 11:00 AM

ತ್ವಚೆಯ ಕಾಂತಿ ಮತ್ತು ಆರೋಗ್ಯವನ್ನು ಕಾಪಾಡಲು ಸೂಕ್ತವಾದ ಉತ್ಪನ್ನಗಳನ್ನು ಹುಡುಕಾಡುತ್ತಾ ಇರುತ್ತಾರೆ. ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಾಡಿದ ಸ್ಕಿನ್ ಕೇರ್ ಪದಾರ್ಥಗಳು ಯಾವುವು ಎಂದು ಗೂಗಲ್ ವರದಿ ಮಾಡಿದೆ.

Year Ender 2022: ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್ ಕೇರ್ ಪ್ರಾಡಕ್ಟ್​ಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Image Credit source: Freepik
Follow us on

ಪ್ರತಿಯೊಬ್ಬರಿಗೂ ತ್ವಚೆ(Skin) ಯು ಸುಂದರವಾಗಿ ಕಾಣಲು ಸದಾ ಒಂದಲ್ಲ ಒಂದು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅಂತಹ ಸಮಯದಲ್ಲಿ ತ್ವಚೆಯ ಕಾಂತಿ ಮತ್ತು ಆರೋಗ್ಯ(Health)ವನ್ನು ಕಾಪಾಡಲು ಸೂಕ್ತವಾದ ಉತ್ಪನ್ನಗಳನ್ನು ಹುಡುಕಾಡುತ್ತಾ ಇರುತ್ತಾರೆ. ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಾಡಿದ ಸ್ಕಿನ್ ಕೇರ್ ಪದಾರ್ಥಗಳು ಯಾವುವು ಎಂದು ಗೂಗಲ್ ವರದಿ ಮಾಡಿದೆ. ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್ ಕೇರ್ ಪದಾರ್ಥಗಳು ಇಲ್ಲಿವೆ.

ತೆಂಗಿನ ಎಣ್ಣೆ:

ತೆಂಗಿನ ಎಣ್ಣೆಯು ತ್ವಚೆಯನ್ನು ಕಾಪಾಡುವಲ್ಲಿ ಪ್ರಮುಖವಾದುದು. ಇದು ನಿಮ್ಮ ತ್ವಚೆಗೆ ತೇವಾಂಶವನ್ನು ನೀಡುತ್ತದೆ. ಆದ್ದರಿಂದ ಸಾಕಷ್ಟು ತಜ್ಞರು ತೆಂಗಿನ ಎಣ್ಣೆಯನ್ನು ಬಳಸಲು ಸಲಹೆ ನೀಡುತ್ತಾರೆ. ಈ ಕಾರಣಕ್ಕಾಗಿ ತೆಂಗಿನ ಎಣ್ಣೆಯು ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟಿದೆ.

ವಿಟಮಿನ್ ಇ:

ವಿಟಮಿನ್-ಇ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ವಿಟಮಿನ್-ಇ ಮಗುವನ್ನು ರಕ್ತಹೀನತೆಯಿಂದ ರಕ್ಷಿಸುತ್ತದೆ. ವಿಟಮಿನ್ ಇ ತಿನ್ನುವ ಮೂಲಕ ಅಲರ್ಜಿಯನ್ನು ತಡೆಗಟ್ಟಬಹುದು. ವಿಟಮಿನ್ ಇ ಕೊರತೆಯು ಕೊಲೆಸ್ಟ್ರಾಲ್ ಮಟ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ. ಈ ಎಲ್ಲಾ ಕಾರಣಕ್ಕಾಗಿ ವಿಟಮಿನ್ ಇ ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟಿದೆಿ ಎಂದು ಗೂಗಲ್ ವರದಿ ಮಾಡಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ತುಟಿಯ ರಕ್ಷಣೆಯಾಗಿ ಮನೆಯಲ್ಲಿಯೇ ಲಿಪ್ ಬಾಮ್ ತಯಾರಿಸಿ

ಲ್ಯಾಕ್ಟಿಕ್ ಆಮ್ಲ :

ಲ್ಯಾಕ್ಟಿಕ್ ಆಮ್ಲ ನಿಮ್ಮ ಚರ್ಮದ ಮೇಲ್ಮೈ ಪದರವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ತ್ವಚೆಯ ಮೇಲಿನ ಕಪ್ಪು ಕಲೆಗಳನ್ನು ತೆಗೆದು ಹಾಕಲು ತುಂಬಾ ಸಹಾಯಕವಾಗಿದೆ. ಈ ಎಲ್ಲಾ ಕಾರಣಕ್ಕಾಗಿ ತಜ್ಞರು ಸಲಹೆ ನೀಡಿದ್ದರಿಂದ ಲ್ಯಾಕ್ಟಿಕ್ ಆಮ್ಲ ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟಿದೆಿ ಎಂದು ಗೂಗಲ್ ವರದಿ ಮಾಡಿದೆ.

ಇದನ್ನೂ ಓದಿ: ವಾಹನಗಳ ಬಿಡಿಭಾಗಳಿಂದ ತಯಾರಿಸಲಾಗಿದೆ ವಿಶ್ವದ ಅತಿ ದೊಡ್ಡ ರುದ್ರ ವೀಣೆ

ಕಾಲಜನ್:

ಕಾಲಜನ್ ದೇಹದಲ್ಲಿ ಹೆಚ್ಚು ಹೇರಳವಾಗಿರುವ, ನೈಸರ್ಗಿಕವಾಗಿ ಕಂಡುಬರುವ ಪ್ರೋಟೀನ್ ಆಗಿದ್ದು, ಚರ್ಮಕ್ಕೆ ರಚನೆ ಮತ್ತು ಶಕ್ತಿಯನ್ನು ಒದಗಿಸುವುದರ ಜೊತೆಗೆ ಚರ್ಮವನ್ನು ರಕ್ಷಿಸುವಲ್ಲಿ ಸಹಾಯಕವಾಗಿದೆ. ಕಾಲಜನ್ ಸರಿಯಾದ ಪ್ರಮಾಣದಲ್ಲಿದ್ದರೆ ಚರ್ಮವು ನಯವಾಗಿ, ಮೃದುವಾಗಿ ಮತ್ತು ದೃಢವಾಗಿ ಉಳಿಯುತ್ತದೆ. ನಿಮ್ಮ ದೇಹದಲ್ಲಿನ ಸುಕ್ಕುಗಳನ್ನು ಹೋಗಲಾಡಿಸಲು ಸಹಾಯಕವಾಗಿದೆ. ಈ ಎಲ್ಲಾ ಕಾರಣಕ್ಕಾಗಿ ತಜ್ಞರು ಸಲಹೆ ನೀಡಿದ್ದರಿಂದ ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟಿದೆಿ ಎಂದು ಗೂಗಲ್ ವರದಿ ಮಾಡಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 10:52 am, Tue, 20 December 22