White Hair Problem: ತಲೆಯ ಬಿಳಿ ಕೂದಲನ್ನು ಕೃತಕ ಬಣ್ಣ ಬಳಸದೆ ನೈಸರ್ಗಿಕವಾಗಿ ಕಪ್ಪುಗೊಳಿಸಲು ಇಲ್ಲಿದೆ ಮನೆ ಮದ್ದು

ಕೂದಲನ್ನು ಕಪ್ಪಾಗಿಸಲು ವಿವಿಧ ಬ್ರಾಂಡ್ ಗಳ ಕೃತಕ ಬಣ್ಣಗಳನ್ನು ಬಳಸಿ ತೊಂದರೆಯನ್ನು ಅನುಭವಿಸಿದ್ದೀರಾ? ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಇಲ್ಲಿದೆ.

White Hair Problem: ತಲೆಯ ಬಿಳಿ ಕೂದಲನ್ನು ಕೃತಕ ಬಣ್ಣ ಬಳಸದೆ ನೈಸರ್ಗಿಕವಾಗಿ ಕಪ್ಪುಗೊಳಿಸಲು ಇಲ್ಲಿದೆ ಮನೆ ಮದ್ದು
White Hair ProblemImage Credit source: Google
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 01, 2022 | 3:06 PM

ತಲೆ ಕೂದಲು ಬಿಳಿ( White hair) ಯಾಗುವುದು ಇಂದು ವಯಸ್ಕರಲ್ಲಿ ಮಾತ್ರವಲ್ಲದೇ ಯುವಕರಲ್ಲಿಯೂ ಕಂಡುಬರುವ ಒಂದು ಸಮಸ್ಯೆಯಾಗಿದೆ. ತಲೆಕೂದಲು ಬೆಳ್ಳಗಾಗಿರುವುದರಿಂದ ನೀವು ಸಂಭ್ರಮ ಸಡಗರಗಳಲ್ಲಿ ಪಾಲ್ಗೋಳಲು ಹಿಂಜರಿಯುತ್ತಿದ್ದೀರಾ? ಕೂದಲನ್ನು ಕಪ್ಪಾಗಿಸಲು ವಿವಿಧ ಬ್ರಾಂಡ್ ಗಳ ಕೃತಕ ಬಣ್ಣಗಳನ್ನು ಬಳಸಿ ತೊಂದರೆಯನ್ನು ಅನುಭವಿಸಿದ್ದೀರಾ? ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಇಲ್ಲಿದೆ.

ನೀವು ಮನೆಯಲ್ಲಿಯೇ ಪ್ರತಿ ದಿನ ಅಡುಗೆಗಳಲ್ಲಿ ಬಳಸುವ ಪದಾರ್ಥಗಳನ್ನು ಇಟ್ಟುಕೊಂಡು ಆರೋಗ್ಯಕರ ಕೂದಲಿನ ಬಣ್ಣವನ್ನು ಪಡೆಯಬಹುದಾಗಿದೆ. ಇದರಿಂದಾಗಿ ನೀವು ಯಾವುದೇ ಸಂಭ್ರಮ ಸಡಗರಗಳಲ್ಲಿಯೂ ಅತ್ಯಂತ ಆನಂದದಿಂದ ಪಾಲ್ಗೋಳಬಹುದಾಗಿದೆ.

ಈ ಮನೆಮದ್ದು ಅತ್ಯಂತ ಸುಲಭವಾಗಿ ಹಾಗೂ ತ್ವರಿತವಾಗಿ ತಯಾರಿಸಿ, ವಾರದಲ್ಲಿ 2ಬಾರಿ ನಿಮ್ಮ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಕೆಲವೇ ವಾರಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದಾಗಿದೆ. ಕೂದಲಿನ ಬಣ್ಣವನ್ನು ನೈಸರ್ಗಿಕವಾಗಿ ಕಪ್ಪುಗೊಳಿಸಲು ಈ ಹೇರ್ ಪ್ಯಾಕ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು ಈ ಕೆಳಗಿನಂತಿವೆ:

  • ಕಾಫಿ ಪೌಡರ್ (Instant coffee powder)
  • ಕೊಬ್ಬರಿ ಎಣ್ಣೆ (Coconut Oil)
  • ಅಲೊವೆರಾ (Aloe vera gel)

ಮಾಡುವ ವಿಧಾನ: ಮೊದಲಿಗೆ ಒಳ್ಳೆಯ ಗುಣಮಟ್ಟದ ಕಾಫಿ ಪುಡಿಯನ್ನು ಆಯ್ಕೆ ಮಾಡಬೇಕಿದೆ. ಒಂದು ಚಿಕ್ಕ ಪಾತ್ರೆ ಅಥವಾ ಬೌಲ್ ತೆಗೆದುಕೊಂಡು, ಅದಕ್ಕೆ ಮೂರು ಚಮಚ ಕಾಫಿ ಪೌಡರ್ ಹಾಕಿ. ಇದಾದ ನಂತರ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಮತ್ತು ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಕಾಫಿ ಪುಡಿ ಗಂಟು ಕಟ್ಟದಂತೆ ನೋಡಿಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದಕ್ಕೆ ಅಲೊವೆರಾವನ್ನು ಸೇರಿಸಿ. ಈಗ ಅಲೊವೆರಾ ಜೆಲ್ ಸಾಕಷ್ಟು ಅಂಗಡಿಗಳಲ್ಲಿ ಲಭ್ಯವಿದೆ. ಒಂದು ಒಳ್ಳೆಯ ಗುಣಮಟ್ಟದ ಅಲೊವೆರಾ ಜೆಲ್ ಆಯ್ಕೆ ಮಾಡಿಕೊಳ್ಳಿ. ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಹೇರ್ ಪ್ಯಾಕ್ ಸಿದ್ದವಾಗಿದೆ.

ಇದನ್ನು ಓದಿ: ನಿಮ್ಮ ಕಣ್ಣಿನ ಡಾರ್ಕ್ ಸರ್ಕಲ್‌ ಕಡಿಮೆಮಾಡಲು ಈ ಸರಳ ಮನೆ ಮದ್ದು ಪ್ರಯತ್ನಿಸಿ

ಈ ಮಿಶ್ರಣವನ್ನು ವಾರದಲ್ಲಿ 2 ಬಾರಿ ತಲೆಗೆ ಹಚ್ಚಿ. ಹೀಗೆ ವಾರದಲ್ಲಿ 2 ಬಾರಿ ತಲೆಗೆ ಹಚ್ಚುವುದರಿಂದ ಒಂದು ತಿಂಗಳಿನಲ್ಲಿಯೇ ಉತ್ತಮ ಫಲಿತಾಂಶವನ್ನು ನೀವು ಪಡೆಯಬಹುದಾಗಿದೆ. ನೀವೂ ಕೂಡ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಒಮ್ಮೆ ಇದನ್ನು ಪ್ರಯತ್ನಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 3:05 pm, Thu, 1 December 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್