ಸಾಂದರ್ಭಿಕ ಚಿತ್ರ
Image Credit source: vecteezy
ಸಾಮಾನ್ಯವಾಗಿ ಮಸಾಲೆ ಪುಡಿ, ಸಕ್ಕರೆ, ಚಹಾ ಪುಡಿ, ಬೇಳೆಕಾಳುಗಳನ್ನೆಲ್ಲಾ ಪ್ಲಾಸ್ಟಿಕ್, ಸ್ಟೀಲ್ ಇಲ್ಲವೇ ಗ್ಲಾಸ್ ಜಾರ್‌ಗಳಲ್ಲಿ ಸಂಗ್ರಹಿಸಿಡುತ್ತೇವೆ. ಈ ಅಡುಗೆ ಸಾಮಾಗ್ರಿ ಡಬ್ಬಗಳನ್ನು (containers) ಕಾಲ ಕಾಲಕ್ಕೆ ಸ್ವಚ್ಛಗೊಳಿಸದಿದ್ದರೆ ಕೊಳೆ ಮತ್ತು ಜಿಡ್ಡು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಇದರಿಂದಾಗಿ ಡಬ್ಬದಲ್ಲಿ ಸಂಗ್ರಹಿಸಿಡುವ ಪದಾರ್ಥಗಳ ರುಚಿ ಕೆಡುತ್ತದೆ. ಹಾಗಾಗಿ ಅಡುಗೆ ಸಾಮಾಗ್ರಿ ಡಬ್ಬಗಳು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು. ಆದರೆ ಕೆಲವೊಂದು ಬಾರಿ ಈ ಡಬ್ಬಗಳನ್ನು ಎಷ್ಟೇ ಸ್ವಚ್ಛಗೊಳಿಸಿದರೂ, ಎಷ್ಟೇ ದುಬಾರಿ ಕ್ಲೀನರ್‌ಗಳನ್ನು ಬಳಸಿದರೂ ಅದರಲ್ಲಿ ಅಂಟಿರುವ ಕಲೆಗಳು ಹೋಗೋದೇ ಇಲ್ಲ. ಹೀಗೆ ದುಬಾರಿ ಕ್ಲೀನರ್‌ಗಳನ್ನು ಬಳಸುವ ಬದಲು ಕೇವಲ ಅಡುಗೆ ಸೋಡಾದ ಸಹಾಯದಿಂದ ಅಡುಗೆ ಸಾಮಾಗ್ರಿ ಡಬ್ಬಗಳಲ್ಲಿ ಅಂಟಿರುವ ಕಲೆಗಳನ್ನು ಹೋಗಲಾಡಿಸಿ, ಡಬ್ಬಗಳು ಫಳ ಫಳ ಹೊಳೆಯುವಂತೆ ಮಾಡಬಹುದು. ಅಡುಗೆ ಸೋಡಾದ ಸಹಾಯದಿಂದ ಕಿಚನ್‌ನಲ್ಲಿರುವ ಡಬ್ಬಗಳನ್ನು ಯಾವ ರೀತಿ ಕ್ಲೀನ್ ಮಾಡಬಹುದು ಎಂಬ ಪೂರ್ಣ ವಿವರ ಇಲ್ಲಿದೆ.
ಅಡುಗೆ ಸೋಡಾದ ಸಹಾಯದಿಂದ ಡಬ್ಬಗಳನ್ನು ಸ್ವಚ್ಛಗೊಳಿಸವುದು ಹೇಗೆ ?
- ಮೊದಲು, ಒಂದು ದೊಡ್ಡ ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ. ಅದಕ್ಕೆ ಅಡಿಗೆ ಸೋಡಾ ಮತ್ತು ಡಿಶ್‌ವಾಶ್ ಲಿಕ್ವಿಡ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ, ಈ ಮಿಶ್ರಣದಲ್ಲಿ ಮಸಾಲೆ ಡಬ್ಬಗಳನ್ನು ಹಾಕಿ ಮತ್ತು ಅದನ್ನು 5 ನಿಮಿಷಗಳ ಕಾಲ ಹಾಗೆಯೇ ಬಿಡಿ.
- ನಂತರ, ಹಳೆಯ ಟೂತ್ ಬ್ರಷ್ ಅಥವಾ ಸ್ಕ್ರಬ್ಬರ್‌ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ. ಅಡಿಗೆ ಸೋಡಾ ಸಂಗ್ರಹವಾದ ಗ್ರೀಸ್ ಕಲೆಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ಡಿಶ್‌ವಾಶ್ ಲಿಕ್ವಿಡ್ ಡಬ್ಬದಲ್ಲಿನ ಗ್ರೀಸ್ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ.
- ಹೀಗೆ ಚೆನ್ನಾಗಿ ಕ್ಲೀನ್ ಮಾಡಿದ ನಂತರ ಅಡುಗೆ ಸಾಮಾಗ್ರಿ ಡಬ್ಬಗಳನ್ನು ಶುದ್ಧ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ.
ಅಡುಗೆ ಸಾಮಾಗ್ರಿ ಡಬ್ಬಗಳನ್ನು ಸ್ವಚ್ಛಗೊಳಿಸುವಾಗ ಈ ತಪ್ಪುಗಳನ್ನು ಮಾಡಬೇಡಿ:
- ತುಂಬಾ ಗಟ್ಟಿಯಾದ ಸ್ಕ್ರಬ್ಬರ್ ಬಳಸಬೇಡಿ, ಏಕೆಂದರೆ ಇದು ಡಬ್ಬಗಳಲ್ಲಿ ಸ್ಕ್ರ್ಯಾಚ್ ಉಂಟುಮಾಡಬಹುದು.
- ತೊಳೆದ ತಕ್ಷಣವೇ ಪಾತ್ರೆಯನ್ನು ಮುಚ್ಚಿಡಬೇಡಿ. ಏಕೆಂದರೆ ಇದರಲ್ಲಿರುವ ತೇವಾಂಶ ಶಿಲೀಂಧ್ರ ಸಮಸ್ಯೆ ಮತ್ತು ಕೆಟ್ಟ ವಾಸನೆಯನ್ನು ಉಂಟುಮಾಡಬಹುದು.
- ತೊಳೆದಿಟ್ಟ ಪ್ಲಾಸ್ಟಿಕ್ ಡಬ್ಬಗಳನ್ನು ಹೆಚ್ಚು ಹೊತ್ತು ಬಿಸಿಲಿನಲ್ಲಿ ಒಣಗಲು ಇಡಬೇಡಿ, ಇದು ಅವುಗಳ ಬಣ್ಣವನ್ನು ಮಸುಕಾಗಿಸಬಹುದು.
- ಸ್ವಚ್ಛಗೊಳಿಸಿದ ನಂತರ, ಡಬ್ಬಗಳನ್ನು ಸಂಪೂರ್ಣವಾಗಿ ಒಣಗಿಸಿದ ನಂತರವೇ ಬಳಸಿ.
ಇದನ್ನೂ ಓದಿ: ಹಬ್ಬದ ಕ್ಲೀನಿಂಗ್ ಸಮಯದಲ್ಲಿ ಈ ವಸ್ತುಗಳನ್ನು ಮನೆಯಿಂದ ಬಿಸಾಡಿ
ಈ ಪ್ರಮುಖ ಸಲಹೆಗಳನ್ನು ಪಾಲಿಸಿ:
- ತಿಂಗಳಿಗೊಮ್ಮೆಯಾದರೂ ಡಬ್ಬಗಳನ್ನು ಸ್ವಚ್ಛಗೊಳಿಸಿ.
- ಮಸಾಲೆ ಅಥವಾ ಎಣ್ಣೆಯು ಡಬ್ಬಗಳ ಮೇಲೆ ಬಿದ್ದರೆ, ತಕ್ಷಣ ಒರೆಸಿ.
- ಗ್ಯಾಸ್ ಸ್ಟೌವ್‌ಗೆ ತುಂಬಾ ಹತ್ತಿರ ಮಸಾಲೆ ಡಬ್ಬಗಳನ್ನು ಇಡುವುದನ್ನು ತಪ್ಪಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ