AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2021 Date: 2021ರ ಕೊನೆಯ ಸೂರ್ಯಗ್ರಹಣ ಯಾವಾಗ?; ಇಲ್ಲಿದೆ ಸಂಪೂರ್ಣ ಮಾಹಿತಿ

ಸೂರ್ಯ ಗ್ರಹಣ 2021: 2021ರ ಕೊನೆಯ ಸೂರ್ಯಗ್ರಹಣ ಯಾವಾಗ ಎಂದು ಯೋಚಿಸುತ್ತಿದ್ದೀರಾ? ಸೂರ್ಯಗ್ರಹಣದ ದಿನಾಂಕ, ಸಮಯ ಹಾಗೂ ಇತರ ಸಂಪೂರ್ಣ ವಿವರಗಳು ಇಲ್ಲಿವೆ.

Solar Eclipse 2021 Date: 2021ರ ಕೊನೆಯ ಸೂರ್ಯಗ್ರಹಣ ಯಾವಾಗ?; ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Updated By: shivaprasad.hs|

Updated on:Nov 27, 2021 | 9:51 AM

Share

ಸೂರ್ಯಗ್ರಹಣ 2021: ಅಮಾವಾಸ್ಯೆಯ ದಿನ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ. ಈ ವರ್ಷದ ಎರಡನೇ ಸೂರ್ಯಗ್ರಹಣ (Solar Eclipse) ಮತ್ತು 2021ರ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 4 ರಂದು ಸಂಭವಿಸಲಿದೆ. 2021 ರ ಕೊನೆಯ ಸೂರ್ಯಗ್ರಹಣವು ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗುತ್ತದೆ, 01:03 ಕ್ಕೆ ಗರಿಷ್ಠವಾಗಿರುತ್ತದೆ ಮತ್ತು 01:36 ಕ್ಕೆ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣವು ಅಂಟಾರ್ಟಿಕಾ ಮತ್ತು ದಕ್ಷಿಣ ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಕೆಲವು ಭಾಗಗಳಿಗೆ ಗೋಚರವಾಗಲಿದೆ. ಭೂಮಿಯ ಮೇಲ್ಮೈಯಲ್ಲಿ ಸೂರ್ಯಗ್ರಹಣದ ಹಾದಿಯನ್ನು ಪತ್ತೆಹಚ್ಚುವ ನಕ್ಷೆಯನ್ನು ನಾಸಾ ಬಿಡುಗಡೆ ಮಾಡಿದೆ. ಇದರ ಆಧಾರದಲ್ಲಿ ಡಿಸೆಂಬರ್ 4 ರ ಸೂರ್ಯಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ.

ಇನ್ನು ಭಾರತದಲ್ಲಿ ಯಾವಾಗ ಸೂರ್ಯಗ್ರಹಣ ಗೋಚರವಾಗಲಿದೆ ಎಂದು ಯೋಚಿಸುತ್ತಿದ್ದೀರಾ? ಅಕ್ಟೋಬರ್ 25, 2022 ರಂದು ಭಾರತದಿಂದ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಈ ಬಾರಿಯ ಸೂರ್ಯಗ್ರಹಣವನ್ನು ನೀವು ವೀಕ್ಷಿಸಬೇಕು ಎಂಬ ಆಸಕ್ತಿ ಹೊಂದಿದ್ದರೆ ಅದಕ್ಕೂ ಮಾರ್ಗಗಳಿವೆ. Timeanddate.com ವೆಬ್​ಸೈಟ್ ಮೂಲಕ ಡಿಸೆಂಬರ್ 4 ರ ಸೂರ್ಯಗ್ರಹಣವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.

ಸೂರ್ಯಗ್ರಹಣವನ್ನು ವೀಕ್ಷಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು? ಇಲ್ಲಿದೆ ಮಾಹಿತಿ

  • ಸೂರ್ಯಗ್ರಹಣವನ್ನು ವೀಕ್ಷಿಸಲು ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಮುನ್ನೆಚ್ಚರಿಕೆ ತಿಳಿಸಿದೆ. ಜನರು ಜಾಗರೂಕರಾಗಿರಬೇಕು ಮತ್ತು ತಮ್ಮ ಕಣ್ಣುಗಳನ್ನು ರಕ್ಷಿಸಲು ‘ಗ್ರಹಣ ಕನ್ನಡಕ’ಗಳನ್ನು ಬಳಸಬೇಕು. ಸೂರ್ಯನನ್ನು ನೇರವಾಗಿ ನೋಡದಂತೆ ಜನರಿಗೆ ಸೂಚಿಸಿದೆ.
  • ಮನೆಯಲ್ಲಿ ತಯಾರಿಸಿದ ಫಿಲ್ಟರ್ ಅಥವಾ ಸಾಂಪ್ರದಾಯಿಕ ಸನ್ಗ್ಲಾಸ್ ಅನ್ನು ಬಳಸಬೇಡಿ. ಅದರಿಂದ ಕಣ್ಣುಗಳು ಹಾನಿಗೊಳಗಾಗಬಹುದು ಎಂದು NASA ಜನರಿಗೆ ಸಲಹೆ ನೀಡುತ್ತದೆ.
  • ನಿಮ್ಮ ಕ್ಯಾಮರಾಗಳಲ್ಲಿ ‘ಸೂರ್ಯಗ್ರಹಣ’ವನ್ನು ಸೆರೆಹಿಡಿಯವಾಗ ಎಚ್ಚರಿಕೆ ವಹಿಸಿ, ಅದು ಕಣ್ಣುಗಳಿಗೆ ಹಾನಿ ಮಾಡಬಹುದು ಎಂದು NASA ಸಲಹೆ ನೀಡಿದೆ.
  • ಸೂಚಿಸಲಾದ ಕನ್ನಡಕವನ್ನು ಹೊಂದಿರುವ ಜನರು ವಿದ್ಯಮಾನವನ್ನು ವೀಕ್ಷಿಸಲು ತಮ್ಮ ದಿನನಿತ್ಯದ ಕನ್ನಡಕಗಳ ಮೇಲೆ ತಮ್ಮ ಗ್ರಹಣ ಕನ್ನಡಕವನ್ನು ಧರಿಸಬಹುದು.
  • ಗ್ರಹಣವನ್ನು ವೀಕ್ಷಿಸಲು ಬಯಸುವ ಮಕ್ಕಳು ಪೋಷಕರ ಮೇಲ್ವಿಚಾರಣೆಯಲ್ಲಿ ಮಾಡಬಹುದು.
  • ಜನರು ತಮ್ಮ ಹೆಡ್‌ಲೈಟ್‌ಗಳನ್ನು ಆನ್ ಮಾಡಿ ಮತ್ತು ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಲಹೆ ನೀಡುತ್ತಾರೆ. ಇತರ ವಾಹನಗಳಿಂದ ಉತ್ತಮ ಅಂತರವನ್ನು ಕಾಯ್ದುಕೊಳ್ಳಲು ಜನರಿಗೆ ಸೂಚಿಸಲಾಗಿದೆ.

ಇದನ್ನೂ ಓದಿ:

ಸದೃಢರಾಗಿಲು ಮತ್ತು ಉತ್ತಮ ಜೀವನಶೈಲಿ ಕಾಪಾಡಿಕೊಳ್ಳಲು ಇಲ್ಲಿವೆ 5 ಮಾರ್ಗಗಳು

ಹಾಸನದಲ್ಲಿ 24 ಆನೆಗಳ ದಾಳಿಗೆ ಅಪಾರ ಬೆಳೆ ಹಾನಿ! ಸಾಲಾಗಿ ಹೆಜ್ಜೆ ಹಾಕುತ್ತಿರುವ ಗಜಪಡೆಗಳ ವಿಡಿಯೋ ವೈರಲ್

Published On - 9:46 am, Sat, 27 November 21

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು